ವಿಕ ಸುದ್ದಿಲೋಕ ಯಲ್ಲಾಪುರಭೌಗೋಳಿಕವಾಗಿ ಕೃಷಿಯೊಂದಿಗೆ ಅರಣ್ಯ ಪ್ರದೇಶವೂ ಬೆಸೆದುಕೊಂಡಿದ್ದು ಕೃಷಿಕರೇ ಅರಣ್ಯ ಪ್ರದೇಶದ ರಕ್ಷಕರಾಗಿದ್ದಾರೆ. ಸ್ಥಳೀಯವಾಗಿ ಜನಜೀವನದ ಹಕ್ಕುಗಳನ್ನು ಕಸಿಯುವ ಯಾವ ವರದಿಗಳು ಅಗತ್ಯವಿಲ್ಲ. ಕಸ್ತೂರಿ ರಂಗನ್ ವರದಿ ಪಾರಂಪರಿಕ ಕೃಷಿಕರು ಮತ್ತು ಅನಾದಿ ಕಾಲದಿಂದಲೂ ಅತಿಕ್ರಮಣ ಜಮೀನು ಹೊಂದಿರುವವರ ಬದುಕಿಗೆ ಧಕ್ಕೆ ತರುವ ವರದಿಯಾಗಿದೆ. ಈ ವರದಿಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದೇವೆ . ಈ ಕುರಿತು ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದು ವರದಿ ಅನುಷ್ಠಾನಕ್ಕೆ ರೈತರ ವಿರೋಧವಿದೆ ಎಂದು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎನ್ .ಸಿ ಗಾಂವ್ಕರ್ ವಜ್ರಳ್ಳಿ ಅಭಿಪ್ರಾಯಪಟ್ಟರು.
ಕಸ್ತೂರಿ ರಂಗನ್ ವರದಿ ವಿರೋಧಿಸಿ ಶುಕ್ರವಾರ ವಜ್ರಳ್ಳಿಯಲ್ಲಿಹಮ್ಮಿಕೊಳ್ಳಲಾದ ಸಾರ್ವಜನಿಕ ಜಾಗೃತಿ ಮೆರವಣಿಗೆ ಸಂದರ್ಭದಲ್ಲಿಮಾತನಾಡಿದರು.
‘‘ಸ್ಥಳೀಯ ಕೃಷಿಕರ ಬೆಳೆಗಳೂ ಕಾಡು ಪ್ರಾಣಿಗಳ ದಾಳಿಗೆ ಹಾಳಾಗುತ್ತಿದ್ದು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಬೆಳೆ ರಕ್ಷಣೆಗೆ ರೈತರಿಗೆ ನೆರವಾಗುವ ನಿಟ್ಟಿನಲ್ಲಿಕ್ರಮ ಕೈಗೊಳ್ಳಬೇಕು’’ ಎಂದರು.
ವಜ್ರೇಶ್ವರಿ ದೇವಸ್ಥಾನದ ಆವರಣದಿಂದ ಗ್ರಾ.ಪಂವರೆಗೆ ನಡೆದ ಮೆರವಣಿಗೆಯಲ್ಲಿ ಪ್ರಮುಖರಾದ ಜಿ.ಎನ್ ಕೋಮಾರ,ಅಲೀಸ್ ಫರ್ನಾಂಡಿಸ್ , ತಿಮ್ಮಣ್ಣ ಕೋಮಾರ, ಈಶ್ವರ ಗಾಂವ್ಕರ ಕಂಚೀಮನೆ, ಆರ್ .ಎನ್ ಕೋಮಾರ ಬೀಗಾರ, ರಾಮಚಂದ್ರ ಭಟ್ಟ ತಾರಗಾರ, ಅಣ್ಣಪ್ಪ ಪೂಜಾರಿ, ಅಣ್ಣಯ್ಯ ಭಟ್ಟ ಅಡ್ಕೇಮನೆ, ಚಂದ್ರಶೇಖರ ಗಾಂವ್ಕರ, ರಾಮಕೃಷ್ಣ ಕೊಟರಕರ್ , ರಾಮಚಂದ್ರ ಭಟ್ಟ, ಪ್ರಕಾಶ ಸಿದ್ದಿ, ನಾರಾಯಣ ಕೋಮಾರ, ಗಣೇಶ ಆಚಾರಿ ಮುಂತಾದವರು ಇದ್ದರು.
ಪೋಟೊ
ಕಸ್ತೂರಿ ರಂಗನ್ ವರದಿ ವಿರೋಧಿಸಿ ವಜ್ರಳ್ಳಿಯಲ್ಲಿಮೆರವಣಿಗೆ ನಡೆಸಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು.