8ನೇ ತರಗತಿವರೆಗೆ ಉಚಿತ ಉಪಾಹಾರ

Contributed byShrividya Rao|Vijaya Karnataka
chinas military activities in taiwan a threat to regional security
ತೈವಾನ್ ಸುತ್ತಮುತ್ತಲಿನ ಸಮುದ್ರ ಪ್ರದೇಶಗಳಲ್ಲಿಚೀನಾ ತನ್ನ ನೌಕಾಪಡೆ, ಕೋಸ್ವ್ ಗಾರ್ಡ್ ಮತ್ತು ಇತರ ಕಡಲ ಹಡಗುಗಳ ನಿಯೋಜನೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಇದು ತೈವಾನ್ ನ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಮತ್ತು ಆ ಪ್ರದೇಶದಲ್ಲಿಭೀತಿ ಸೃಷ್ಟಿಸುವ ಚೀನಾದ ಗ್ರೇ-ಝೋನ್ ತಂತ್ರಗಳ ಭಾಗವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಚೀನಾದ ಈ ಕ್ರಮಗಳು ಪ್ರಾದೇಶಿಕ ಸ್ಥಿರತೆಗೆ ಧಕ್ಕೆ ತರುತ್ತಿವೆ ಎಂದು ತೈವಾನ್ ನ ರಕ್ಷಣಾ ಮತ್ತು ವಿದೇಶಾಂಗ ಸಚಿವಾಲಯಗಳು ಕಳವಳ ವ್ಯಕ್ತಪಡಿಸಿವೆ. ಚೀನಾದ ಈ ಆಕ್ರಮಣಕಾರಿ ಧೋರಣೆಯ ವಿರುದ್ಧ ಸೂಕ್ತ ಪ್ರತಿಕ್ರಿಯೆ ನೀಡಲು ಸಜ್ಜಾಗಿದೆ ಎಂದು ಎಚ್ಚರಿಸಿರುವ ತೈವಾನ್ , ಚೀನಾದ ಈ ಸೇನಾ ಮತ್ತು ಕಡಲ ಚಟುವಟಿಕೆಗಳು ಇಂಡೋ-ಪೆಸಿಫಿಕ್ ವಲಯದ ಭದ್ರತೆಯ ಮೇಲೂ ಗಂಭೀರ ಪರಿಣಾಮ ಬೀರುತ್ತಿವೆ ಎಂದು ತಿಳಿಸಿದೆ.