Indian Womens Cricket Team Enters Semifinals With 8 Wicket Victory
ಬಾಟಂ 1
Contributed by: Shrividya Rao|Vijaya Karnataka•
ಏಷ್ಯನ್ ಗೇಮ್ಸ… 2026ರ ಮಹಿಳಾ ಕ್ರಿಕೆಟ್ ನ 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಭಾರತ ಮಹಿಳಾ ಕ್ರಿಕೆಟ್ ತಂಡ ಜಪಾನ್ ವಿರುದ್ಧ 8 ವಿಕೆಟ್ ಗಳ ಸುಲಭ ಗೆಲುವು ಸಾಧಿಸಿ ಸೆಮಿಫೈನಲ್ ಗೆ ಪ್ರವೇಶಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಭಾರತ, ಜಪಾನ್ ತಂಡವನ್ನು 19.5 ಓವರ್ ಗಳಲ್ಲಿಕೇವಲ 57 ರನ್ ಗಳಿಗೆ ಆಲೌಟ್ ಮಾಡಿತು. 58 ರನ್ ಗಳ ಸರಳ ಗುರಿ ಬೆನ್ನಟ್ಟಿದ ಭಾರತ ತಂಡ, ಕೇವಲ 5 ಓವರ್ ಗಳಲ್ಲಿ2 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿ ಗೆಲುವಿನ ದಂಡೆಯನ್ನೇರಿತು. ಶಫಾಲಿ ವರ್ಮಾ ಕೇವಲ 15 ಎಸೆತಗಳಲ್ಲಿಅಜೇಯ 40 ರನ್ ಬಾರಿಸಿದರು. ಭಾನುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿಭಾರತವು ಬಾಂಗ್ಲಾದೇಶವನ್ನು ಎದುರಿಸಲಿದೆ.