Exclusive Athletes Village Construction For Doha 2030 And Riyadh 2034 Asian Games
ಬಾಟಂ 2
Contributed by: Shrividya Rao|Vijaya Karnataka•
ಮುಂದಿನ ಎರಡು ಏಷ್ಯನ್ ಗೇಮ್ಸ್ ಆವೃತ್ತಿಗಳಾದ ದೋಹಾ (2030) ಮತ್ತು ರಿಯಾದ್ (2034) ಕ್ರೀಡಾಕೂಟಗಳಲ್ಲಿ ಕ್ರೀಡಾಪಟುಗಳಿಗೆಂದೇ ಪ್ರತ್ಯೇಕ ಅಥ್ಲೀಟ್ಸ್ ವಿಲೇಜ್ ನಿರ್ಮಿಸಲಾಗುವುದು ಎಂದು ಏಷ್ಯಾ ಒಲಿಂಪಿಕ್ ಕೌನ್ಸಿಲ್ ಮಹಾನಿರ್ದೇಶಕ ಹುಸೇನ್ ಅಲ್ ಮುಸಲ್ಲಮ್ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಜಪಾನ್ ನ ಐಚಿ-ನಗೋಯಾದಲ್ಲಿಕ್ರೀಡಾಕೂಟ ಆಯೋಜನೆಯಾಗುತ್ತಿದ್ದು, ವೆಚ್ಚ ತಗ್ಗಿಸಲು ಮತ್ತು ಸುಸ್ಥಿರತೆಯ ದೃಷ್ಟಿಯಿಂದ ಪ್ರತ್ಯೇಕ ಅಥ್ಲೀಟ್ಸ್ ವಿಲೇಜ್ ನಿರ್ಮಿಸದಿರುವುದನ್ನು ಮುಸಲ್ಲಮ್ ಸಮರ್ಥಿಸಿಕೊಂಡಿದ್ದಾರೆ. ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ17 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಗೂ ಸಿಬ್ಬಂದಿ, ಜೊತೆಗೆ 5,000 ತಾಂತ್ರಿಕ ಅಧಿಧಿಕಾರಿಗಳು ಭಾಗವಹಿಸುತ್ತಿದ್ದಾರೆ.