ಬೆಂಗಳೂರು-ಮುಂಬಯಿ ವಂದೇ ಭಾರತ್ ಇನ್ನಷ್ಟು ವಿಳಂಬ

Contributed bymahyurgh@gmail.com|Vijaya Karnataka
bangalore mumbai vande bharat train service further delayed inauguration date still not revealed
ವಿಕ ಸುದ್ದಿಲೋಕ ಬೆಂಗಳೂರು

ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬಯಿ ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಇನ್ನಷ್ಟು ವಿಳಂಬವಾಗಲಿದೆ.
ಈ ಮಾರ್ಗಕ್ಕೆ ನಿಯೋಜನೆಗೊಳಿಸಿದ್ದ ಎರಡು ರೇಕ್ ಗಳನ್ನು ಬೇರೆ ವಲಯಕ್ಕೆ ವರ್ಗಾಯಿಸಲಾಗಿದೆ. ಇನ್ನೆರಡು ರೇಕ್ ಗಳನ್ನು ಕವಚ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಸದ್ಯ ಯಾವುದೇ ರೈಲು ಬೋಗಿಗಳು ನೈಋುತ್ಯ ರೈಲ್ವೆ ಬಳಿ ಇಲ್ಲಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ, ಕೇವಲ ಎರಡು ನೇರ ರೈಲುಗಳು ಬೆಂಗಳೂರು ಮತ್ತು ಮುಂಬಯಿ ಸಂಪರ್ಕಿಸುತ್ತಿವೆ. ಇದರಲ್ಲಿಉದ್ಯಾನ್ ಎಕ್ಸ್ ಪ್ರೆಸ್ ಮಾತ್ರ ಪ್ರತಿದಿನ ಚಲಿಸುವ ರೈಲಾಗಿದೆ. ಕಳೆದ ಮೇ ತಿಂಗಳಲ್ಲಿವಾರಕ್ಕೆ ಎರಡು ಬಾರಿ ಸಂಚರಿಸುವ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಲಾಗಿದ್ದರೂ, ಸೂಪರ್ ಫಾಸ್ವ್ ರೈಲಿನ ಭರವಸೆ ಒಂದು ವರ್ಷ ಕಳೆದರೂ ಈಡೇರಿಲ್ಲ.

ಕಳೆದ ಆಗಸ್ಟ್ ನಲ್ಲಿಯೇ ರೈಲು ಸೇವೆ ಆರಂಭಿಸಲು ತೀರ್ಮಾನಿಸಲಾಗಿತ್ತು. ಆದರೆ, ಈ ಗಡುವು ಮೀರಿದೆ. ನೈರುತ್ಯ ರೈಲ್ವೆಗೆ ಈ ಸೇವೆ ಪ್ರಾರಂಭಿಸಲು ಇನ್ನೂ ಯಾವುದೇ ರೈಲು ಸಿದ್ಧವಾಗಿಲ್ಲ, ಈ ರೈಲು ಸೇವೆಯನ್ನು ವಾರಕ್ಕೆ 6 ದಿನ ವಿರುದ್ಧ ದಿಕ್ಕುಗಳಲ್ಲಿಕಾರ್ಯಾಚರಣೆಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕೆ ಎರಡು ರೈಲುಗಳ ಅಗತ್ಯವಿದೆ.

ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪ್ರಸ್ತುತ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್ ) ಸಹಯೋಗದೊಂದಿಗೆ ಬಿಇಎಂಎಲ್ ಸಂಸ್ಥೆಯು ತಯಾರಿಸುತ್ತಿದೆ. ನೈಋುತ್ಯ ರೈಲ್ವೆಗೆ ಒಟ್ಟು ಆರು ರೇಕ್ ಗಳನ್ನು ಹಸ್ತಾಂತರಿಸಲಾಗಿತ್ತು. ಆದರೆ ಅವುಗಳಲ್ಲಿಎರಡು ಈಗಾಗಲೇ ಹೌರಾ-ಕಾಮಾಕ್ಯ ಜಂಕ್ಷನ್ ಮಾರ್ಗದಲ್ಲಿಬಳಕೆಯಾಗುತ್ತಿವೆ. ರೈಲ್ವೆ ಮಂಡಳಿಯು ಜುಲೈನಲ್ಲಿಬೆಂಗಳೂರು-ಮುಂಬಯಿ ಮಾರ್ಗಕ್ಕೆ ಎರಡು ರೇಕ್ ಗಳನ್ನು ಮತ್ತು ಉತ್ತರ ರೈಲ್ವೆ ವಲಯಕ್ಕೆ ಎರಡು ರೇಕ್ ಗಳನ್ನು ಹಂಚಿಕೆ ಮಾಡಲು ಆರಂಭದಲ್ಲಿಯೋಜಿಸಿತ್ತು.

ಆದರೆ, ಮಂಡಳಿಯು ಈಗ ತನ್ನ ನಿರ್ಧಾರ ಬದಲಾಯಿಸಿದ್ದು, ನೈಋುತ್ಯ ರೈಲ್ವೆ ಬೆಂಗಳೂರು ವಲಯಕ್ಕೆ ಹಂಚಿಕೆ ಮಾಡಲಾಗಿದ್ದ 5ಧಿಧಿ-6ನೇ ರೇಕುಗಳನ್ನು ಉತ್ತರ ರೈಲ್ವೆ ವಲಯಕ್ಕೆ ವರ್ಗಾಯಿಸಲಾಗಿದೆ. ಬೆಂಗಳೂರಿನಲ್ಲಿದ್ದ 1-4ನೇ ರೇಕನ್ನು ಈಚೆಗೆ ಚೆನ್ನೈ ಐಸಿಎಫ್ ಗೆ ಕಳಿಸಲಾಗಿದ್ದು, ರಾಜಸ್ಥಾನದ ಕೋಟಾ ವಿಭಾಗದಲ್ಲಿಇದರ ಕವಚ್ ತಪಾಸಣೆ ನಡೆಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರೇಕ್ ಹಂಚಿಕೆಯಲ್ಲಿಮತ್ತಷ್ಟು ಬದಲಾವಣೆ ಆಗಬಹುದಾಗಿದ್ದು, ಈ ರೈಲು ಸೇವೆಯು ಸೆಪ್ಟೆಂಬರ್ ಅಂತ್ಯಕ್ಕೂ ಪ್ರಾರಂಭವಾಗುವುದು ಅನುಮಾನ ಎಂದು ರೈಲು ಸಾರಿಗೆ ತಜ್ಞರು ಹೇಳುತ್ತಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ವರ್ಷ ಏಪ್ರಿಲ್ ನಲ್ಲಿಯೇ ವಂದೇ ಭಾರತ್ ಸ್ಲೀಪರ್ ಆರಂಭಿಸಲು ಕ್ರಮ ವಹಿಸುವುದಾಗಿ ತಿಳಿಸಿದ್ದರು. ಆದರೆ, ಮಾರ್ಗ ನಿಗದಿ, ರೇಕ್ ಗಳ ಅಲಭ್ಯತೆ ಸೇರಿ ಇತರೆ ಕಾರಣಗಳಿಂದ ವಿಳಂಬವಾಗುತ್ತಿದೆ.

ಕೋಟ್ ...

ಮುಂದಿನ ವರ್ಷ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿಅಲ್ಲಿವಂದೇ ಭಾರತ್ ಸೇವೆಗೆ ಆದ್ಯತೆ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ರೇಕ್ ಗಳ ವರ್ಗಾವಣೆ ಆಗುತ್ತಿದ್ದು, ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ.

-ರಾಜೇಶ್ , ರೈಲ್ವೆ ಸಾರಿಗೆ ತಜ್ಞ