ಎಸ್ ಟಿಪಿ ಘಟಕಕ್ಕೆ 6 ಕೋಟಿ ರೂ.ಅನುದಾನ

Contributed byyadawad108@gmail.com|Vijaya Karnataka
6 crore grant stp unit launch in teradhal
ಎಸ್ ಟಿಪಿ ಘಟಕಕ್ಕೆ 6 ಕೋಟಿ ರೂ.ಅನುದಾನ

ವಿಕ ಸುದ್ದಿಲೋಕ ತೇರದಾಳ
‘‘ಪಟ್ಟಣದ ಹೆಸ್ಕಾಂ ರಸ್ತೆಯಲ್ಲಿರುವ ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿಎಸ್ ಟಿಪಿ (ತ್ಯಾಜ್ಯ ನೀರು ಶುದ್ಧೀಕರಣ ಘಟಕ) ಘಟಕ ಪ್ರಾರಂಭಿಸಲು ಎನ್ ಜಿಟಿ (ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ) ಯೋಜನೆಯಡಿ 6 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕೆಯುಐಡಿಎಫ್ ಸಿ (ನೀರು ಸರಬರಾಜು ಮಂಡಳಿ) ಶೀಘ್ರದಲ್ಲಿಟೆಂಡರ್ ಕರೆಯಲಿದೆ,’’ ಎಂದು ಪುರಸಭೆ ಮುಖ್ಯಾಧಿಕಾರಿ ಇರ್ಫಾನ್ ಝಾರೆ ತಿಳಿಸಿದರು.

‘‘ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ 6 ಎಕರೆ 20 ಗುಂಟೆ ಜಮೀನು ಖರೀದಿಸಲಾಗಿದೆ. ಆದರೆ, 4ಎಕರೆ 20 ಗುಂಟೆ ಜಾಗಕ್ಕೆ ಮಾತ್ರ ಕಾಂಪೌಂಡ್ ನಿರ್ಮಿಸಲಾಗಿತ್ತು. ಎಸ್ ಟಿಪಿ ಯೋಜನೆ ತೇರದಾಳಕ್ಕೆ ಮಂಜೂರಾದ ಬಳಿಕ ಜಾಗದ ಪರಿಶೀಲನೆ ನಡೆಸುವ ವೇಳೆ ಭೂದಾಖಲೆಗಳನ್ನು ಗಮನಿಸಿ ಜಾಗವನ್ನು ಮತ್ತೊಮ್ಮೆ ಸರ್ವೆ ಮಾಡಿಸಲಾಯಿತು. ಕಾಂಪೌಂಡ್ ಹಿಂಬದಿಯಲ್ಲಿಇನ್ನೂ 2 ಎಕರೆ ಜಾಗ ಇರುವುದು ಗೊತ್ತಾಯಿತು. ಕಾಂಪೌಂಡ್ ಗೋಡೆ ಒಡೆದು ಪುರಸಭೆ ಜಾಗವನ್ನು ನಮ್ಮ ಅಧೀನಕ್ಕೆ ಪಡೆಯಲಾಗಿದೆ. ಈಗಾಗಲೇ ಕೆಯುಐಡಿಎಫ್ ಸಿಯವರು ಜಾಗದ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲಿಕಾಮಗಾರಿ ಪ್ರಾರಂಭಗೊಳ್ಳಲಿದೆ,’’ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

16ನೇ ಹಣಕಾಸು ಯೋಜನೆಯಡಿ 5 ಕೋಟಿ ಅನುದಾನ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾದ ಅನುದಾನದಲ್ಲಿಶೇಕಡ 50 ರಷ್ಟು ಅನುದಾನ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೀಸಲು ಇರುತ್ತದೆ. ಅದರಲ್ಲಿಹೊಸ ಕಾಂಪೌಂಡ್ ಹಾಗೂ ಸಿಸಿ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು,’’ ಎಂದು ತಿಳಿಸಿದರು.

ಫೋಟೊ ಫೈಲ್ ನೇಮ್ ಟಿಡಿಎಲ್ -18-3ಎ

ಎ) ತೇರದಾಳ ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕದ ಎರಡು ಎಕರೆ ಜಾಗವನ್ನು ಗುರುತಿಸಿ ಸರಹದ್ದು ಹಾಕಿರುವುದು.