(ಬಾಕ್ಸ್ )

Contributed bydevimanjum@gmail.com|Vijaya Karnataka
kh puttaswamy gowdas talk show against former mlas hindering development
ಮಾಜಿ ಶಾಸಕ ಎನ್ನೆಚ್ಚೆಸ್ ್ಸ ಅಭಿವೃದ್ಧಿಗೆ ಅಡ್ಡಿಪಡಿಸಿದರೆ ಜನರೇ ಉತ್ತರ ನೀಡುತ್ತಾರೆ: ಶಾಸಕ ಕೆ.ಎಚ್ . ಪುಟ್ಟಸ್ವಾಮಿಗೌಡ ಖಡಕ್ ಎಚ್ಚರಿಕೆ

ಮಾಜಿ ಶಾಸಕರ ಹತಾಶ ರಾಜಕಾರಣಕ್ಕೆ ಕ್ಷೇತ್ರದ ಅಭಿವೃದ್ಧಿ ಬಲಿಯಾಗಬಾರದು:ಕೆಎಚ್ ಪಿ
ವಿಕ ಸುದ್ದಿಲೋಕ ಗೌರಿಬಿದನೂರು: ಕ್ಷೇತ್ರದಲ್ಲಿನಡೆಯುತ್ತಿರುವ ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ಕೂ ಮಾಜಿ ಶಾಸಕ ಎನ್ .ಎಚ್ .ಶಿವಶಂಕರರೆಡ್ಡಿಯವರು ಅಡ್ಡಿಪಡಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಾದ ರಾಜಕಾರಣವಲ್ಲ. ಅಧಿಕಾರದಲ್ಲಿದ್ದಾಗ ಮಾಡಲಾಗದ ಕೆಲಸಗಳನ್ನು ಈಗ ನಡೆಯುತ್ತಿರುವುದನ್ನು ಸಹಿಸದೆ ಅಡೆತಡೆ ಸೃಷ್ಟಿಸುವುದು ಹತಾಶ ಮನೋಭಾವನೆಯ ಪ್ರತೀಕ ಎಂದು ಶಾಸಕ ಕೆ.ಎಚ್ . ಪುಟ್ಟಸ್ವಾಮಿಗೌಡ ಮಾಜಿ ಶಾಸಕ ಎನ್ .ಎಚ್ .ಶಿವಶಂಕರರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಅಭಿವೃದ್ಧಿಗೆ ಆದ್ಯತೆ ಕೆಎಚ್ ಪಿ

ಕ್ಷೇತ್ರದ ಅಭಿವೃದ್ಧಿಗೆ ಯಾರೇ ಅಡ್ಡಿಯಾಗಲಿ, ಜನರ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಮುಂದಿನ 45 ದಿನಗಳಲ್ಲಿಇನ್ನೂ 100 ಕೋಟಿ ಅನುದಾನ ತಂದು ಕ್ಷೇತ್ರದ ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸಂಕಲ್ಪ ಮಾಡಿದ್ದೇನೆ. ಜನರು ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದು ನನ್ನ ಗುರಿ ಎಂದು ಅವರು ಹೇಳಿದರು.

(ಅಭಿವೃದ್ಧಿ ಸಹಿಸದ ರಾಜಕಾರಣಕ್ಕೆ ಜನರೇ ತಕ್ಕ ಉತ್ತರ: ಕ್ಷೇತ್ರದಲ್ಲಿಹೊಸ ಅಭಿವೃದ್ಧಿ ಕಾರ್ಯಗಳು ಆರಂಭವಾಗುತ್ತಿದ್ದಂತೆ ಕೆಲವರು ಅದನ್ನು ಸಹಿಸಿಕೊಳ್ಳಲಾಗದೆ ಆರೋಪ, ಟೀಕೆ ಮತ್ತು ಅಡೆತಡೆಗಳ ರಾಜಕಾರಣಕ್ಕೆ ಮುಂದಾಗುತ್ತಿದ್ದಾರೆ. ಜನರಿಗೆ ಏನು ಬೇಕು ಎಂಬುದನ್ನು ಅರ್ಥಮಾಡಿಕೊಂಡು ಕೆಲಸ ಮಾಡುವ ಬದಲು, ಅಭಿವೃದ್ಧಿ ಕಾರ್ಯಗಳಿಗೆ ಹೇಗೆ ತಡೆಯೊಡ್ಡಬೇಕು ಎಂಬುದರ ಬಗ್ಗೆ ಚಿಂತಿಸುವುದು ಜನವಿರೋಧಿ ರಾಜಕಾರಣವಾಗುತ್ತದೆ ಎಂದು ಶಾಸಕ ಕಿಡಿಕಾರಿದರು.)

ಜನರೇ ತೀರ್ಮಾನ: ಮಾಜಿ ಶಾಸಕರು ವಿನಾಕಾರಣ ಹತಾಶ ಮನೋಭಾವನೆಯಿಂದ ಮಾತನಾಡುವುದರಿಂದ ಯಾರ ರಾಜಕೀಯ ಸ್ಥಾನಮಾನವೂ ಹೆಚ್ಚಾಗುವುದಿಲ್ಲ, ಕ್ಷೇತ್ರದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಯಾರು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ, ಯಾರು ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ ಎಂದು ಹೇಳಿದರು.

ನನ್ನನ್ನು ಕೆಣಕುವ ರಾಜಕಾರಣ ಬೇಡ: ನನ್ನ ವಿರುದ್ಧ ವೈಯಕ್ತಿಕವಾಗಿ ರಾಜಕೀಯ ಟೀಕೆಗಳನ್ನು ಮಾಡುತ್ತಾ ಪ್ರಚೋದಿಸುವ ಪ್ರಯತ್ನ ಮಾಡಲಾಗುತ್ತಿದೆ. ನನ್ನನ್ನು ಕೆಣಕಿದರೆ ಏನಾಗುತ್ತದೆ ಎಂಬುದನ್ನು ರಾಜಕೀಯವಾಗಿ ತಿಳಿದಿರಬೇಕು ಎಂಬ ರೀತಿಯಲ್ಲಿಶಾಸಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಆದರೆ ಯಾವುದೇ ಸಂದರ್ಭದಲ್ಲೂವೈಯಕ್ತಿಕ ಸಂಘರ್ಷಕ್ಕೆ ಇಳಿಯುವುದಿಲ್ಲ, ಕಾನೂನು ಕೈಗೆ ತೆಗೆದುಕೊಳ್ಳುವುದಿಲ್ಲ, ಕಾನೂನನ್ನು ಗೌರವಿಸುತ್ತೇನೆ, ನನ್ನ ಕಾರ್ಯಕರ್ತರೂ ಕಾನೂನಿನ ಚೌಕಟ್ಟಿನಲ್ಲಿಯೇ ನಡೆದುಕೊಳ್ಳಬೇಕು ಎಂಬುದು ನನ್ನ ಸ್ಪಷ್ಟ ನಿಲುವು ಎಂದು ಅವರು ಹೇಳಿದರು.

ನಮ್ಮ ಕಾರ್ಯಕರ್ತರ ಶಕ್ತಿ ನನಗೆ ಗೊತ್ತಿದೆ. ನಾನು ಒಂದು ಮಾತು ಹೇಳಿದರೆ ಸಾಕು, ಅವರು ತಮ್ಮ ರೀತಿಯಲ್ಲಿಪ್ರತಿಕ್ರಿಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಅಂತಹ ಪರಿಸ್ಥಿತಿಯನ್ನು ಸೃಷ್ಟಿಸುವುದು ನನ್ನ ಉದ್ದೇಶವಲ್ಲ. ರಾಜಕೀಯ ಸಂಘರ್ಷವನ್ನು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾರ್ಗದಲ್ಲಿಯೇ ಎದುರಿಸುತ್ತೇನೆ ಎಂದು ಸ್ಪಷ್ಟ ಪಡಿಸಿದರು.

(ಪೊಲೀಸ್ ಪಡೆ ಬೇಕಿಲ್ಲ, ಜನರ ಪಡೆ ಇದೆ: ಚುನಾವಣೆಗೆ ಮುನ್ನವೇ ಜನರ ನಡುವೆ ನಿಂತು ರಾಜಕೀಯ ಮಾಡಿದ್ದೇನೆ. ಅಧಿಕಾರ ಬಂದ ಮೇಲೆ ಪೊಲೀಸ್ ಭದ್ರತೆ ಹಿಂದೆ ನಿಂತು ರಾಜಕೀಯ ಮಾಡುವ ಅಗತ್ಯ ನನಗಿಲ್ಲ. ನಾನು ಶಾಸಕನಾಗುವ ಮೊದಲೇ, ಚುನಾವಣೆಗೂ ಮುನ್ನ ಒಬ್ಬಂಟಿಯಾಗಿ ನಿಮ್ಮ ಗ್ರಾಮಕ್ಕೆ ಬಂದು ಜನರ ನಡುವೆ ನಿಂತು ರಾಜಕೀಯ ಮಾಡಿದ್ದೇನೆ. ಆಗ ನನ್ನ ಸುತ್ತ ಪೊಲೀಸ್ ಪಡೆ ಇರಲಿಲ್ಲ, ಜನರ ಪಡೆ ಇತ್ತು. ಇಂದಿಗೂ ಅದೇ ನನ್ನ ಶಕ್ತಿ, ಜನರ ವಿಶ್ವಾಸವೇ ನನ್ನ ಶಕ್ತಿ ಆಗಿತ್ತು ಎಂದು ಶಾಸಕ ಕೆ.ಎಚ್ . ಪುಟ್ಟಸ್ವಾಮಿಗೌಡ ಮಾಜಿ ಸಚಿವರಿಗೆ ಟಾಂಗ್ ನೀಡಿದರು.)

ಅಭಿವೃದ್ಧಿಗೆ ಮತ: ಜನರು ಅಭಿವೃದ್ಧಿಗೆ ಮತ ನೀಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಬದಲು, ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿಸಮಯ ಕಳೆಯಲು ನಾನು ಸಿದ್ಧನಿಲ್ಲ. ನನ್ನ ರಾಜಕೀಯ ಉತ್ತರವನ್ನು ಮಾತಿನಿಂದಲ್ಲ, ಅಭಿವೃದ್ಧಿ ಕಾಮಗಾರಿಗಳ ಮೂಲಕ ನೀಡುತ್ತೇನೆ ಎಂದು ಪುಟ್ಟಸ್ವಾಮಿಗೌಡ ಮಾಜಿ ಶಾಸಕರಿಗೆ ತಿರುಗೇಟು ನೀಡಿದರು.

ರಾಜಕೀಯವಾಗಿ ಯಾರು ಏನು ಮಾತನಾಡುತ್ತಾರೆ ಎಂಬುದಕ್ಕಿಂತ ಕ್ಷೇತ್ರದ ಜನರಿಗೆ ನಾವು ಏನು ಮಾಡುತ್ತೇವೆ ಎಂಬುದೇ ಮುಖ್ಯ. ಅಭಿವೃದ್ಧಿಗೆ ಅಡ್ಡಿಯಾಗುವ ರಾಜಕಾರಣವನ್ನು ಜನರು ಒಪ್ಪುವುದಿಲ್ಲ. ನನ್ನ ಗುರಿ ಸ್ಪಷ್ಟ-ಕ್ಷೇತ್ರದ ಅಭಿವೃದ್ಧಿ, ಜನರ ಸೇವೆ ಮತ್ತು ಹೆಚ್ಚಿನ ಅನುದಾನ ತರುವುದು ಎಂದು ಶಾಸಕ ಕೆ.ಎಚ್ . ಪುಟ್ಟಸ್ವಾಮಿಗೌಡ ಹೇಳಿದರು.

ಚೀಮುಲ್ ನಿರ್ದೇಶಕ ಜೆ.ಕಾಂತರಾಜು ಮಾತನಾಡಿ 25 ವರ್ಷಗಳಲ್ಲಿಮಾಡದ ಅಭಿವೃದ್ಧಿಯನ್ನು ಶಾಸಕ ಕೆ.ಎಚ್ .ಪುಟ್ಟಸ್ವಾಮಿಗೌಡರು ಕೇವಲ 2 ವರ್ಷದಲ್ಲಿಮಾಡಿ ತೋರಿಸಿದ್ದಾರೆ, ಇನ್ನೂ ಮಾಡುವ ಯೋಜನೆಗಳನ್ನು ರೂಪಿಸಿದ್ದಾರೆ , ಮಾಜಿ ಶಾಸಕರು 5 ಬಾರಿ ಶಾಸಕರಾಗಲು ಮತಗಳ ವಿಭಜನೆಯಿಂದ ಶಾಸಕರಾಗಿ ಆಯ್ಕೆಯಾಗಿದ್ದಿರಿ, ಸೊತ ಹತಾಶ ಮನೋಭಾವನೆಯಿಂದ ಅಧಿಕಾರಕ್ಕಾಗಿ ಹಪ ಹಪಿಸುತ್ತಿರುವ ನೀವು ವಿನಾಕಾರಣ ತೇಜೋವದೆ ಮಾಡುವುದನ್ನು ಕ್ಷೇತ್ರದ ಜನತೆ ಸಹಿಸುವುದಿಲ್ಲ, ಮುಂದಿನ ಚುನಾವಣೆಯಲ್ಲಿತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ಟಾಂಗ್ ನೀಡಿದರು.

ಮುಖಂಡ ಆರ್ .ಆಶೋಕ್ ಕುಮಾರ್ ಮಾತನಾಡಿ, ಕ್ಷೇತ್ರದ ಶಾಸಕ ಪುಟ್ಟಸ್ವಾಮಿಗೌಡರಿಗೆ ಕ್ಷೇತ್ರದ ಅಭಿವೃದ್ಧಿಯಲ್ಲಿವರ್ಚಸ್ ್ಸ ಹೆಚ್ಚಾಗುತ್ತಿರುವುದು ಮಾಜಿ ಶಾಸಕರಿಗೆ ಸಹಿಸಲಾಗದೆ ಹತಾಶ ಮನೋಭಾವನೆಯಿಂದ ನಾಲಿಗೆ ಹರಿದು ಬಿಡುತ್ತಿದ್ದಾರೆ, ಕೆಎಚ್ ಪಿ ಅಲ್ಪ ಸಂಖ್ಯಾತರ ಮುಖಂಡರನ್ನು ಮೀರ್ ಸಾದೀಕ್ ಎಂದು ಸಂಬೋದಿಸಿದ್ದಾರೆ, ಅಂದರೆ ಇವರ ಬಳಿ ಇದ್ದರೆ ಮಾತ್ರ ಟಿಪ್ಪು ಸುಲ್ತಾನರೇ ಎಂದರು,ಪುಟ್ಟಸ್ವಾಮಿಗೌಡರು ಹಣದಿಂದ ರಾಜಕಾರಣ ಮಾಡುತ್ತಿಲ್ಲಜನತೆ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಪ್ರೀತಿ ವಿಶ್ವಾಸದ ರಾಜಕಾರಣ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕಾರ್ಯಕ್ರಮದಲ್ಲಿಮುಖಂಡರಾದ ಎಂ.ಡಿ.ನರಸಿಂಹಮೂರ್ತಿ, ಕಲಿನಾಯಕನಹಳ್ಳಿ ಗೋಪಿ, ಅಬ್ದುಲ್ಲಾಮಾಜಿ ಶಾಸಕರ ಕಾರ್ಯವೈಖರಿ ವಿರುದ್ಧ ಹರಿಹಾಯ್ದರು.

ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಟಿ.ಕೆ.ವಿಜಯರಾಘವ, ವಾಣಿಜ್ಯೋಧ್ಯಮಿಗಳಾದ ಬಿ.ಆರ್ .ಶ್ರೀನಿವಾಸಮೂರ್ತಿ,ಇ.ಎಸ್ .ಸತೀಶ್ ಕುಮಾರ್ , ಎ.ಎನ್ .ವೇಣುಗೋಪಾಲ್ ,ಶ್ರೀನಿವಾಸಗೌಡ, ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭದಲ್ಲಿಹಾಜರಿದ್ದರು.

**************

ಚಿತ್ರ 18ಜಿಬಿಡಿ-1 ಗೌರಿಬಿದನೂರು ನಗರದ ಪ್ರವಾಸಿ ಮಂದಿರದಲ್ಲಿಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವ ಮಾಜಿ ಶಾಸಕರ ವಿರುದ್ದ ಶಾಸಕ ಕೆ.ಎಚ್ .ಪುಟ್ಟಸ್ವಾಮಿಗೌಡ ವಾಗ್ದಾಳಿ ನಡೆಸಿದರು.