6 Bodies Found In The Hydroelectric Disaster 1410 Tragically Lost
ಸುದ್ದಿ ಮಿಂಚು 2
Contributed by: DHEERAJ K|Vijaya Karnataka•
ಸುರಂಗದಲ್ಲಿ6 ಶವ ಪತ್ತೆ ನೇಪಾಳದಲ್ಲಿರಕ್ಷಣಾ ಕಾರ್ಯ ಮುಂದುವರಿ ದಿದ್ದು, ಶುಕ್ರವಾರ 6 ಶವಗಳು ಪತ್ತೆಯಾಗಿವೆ. ನುವಾಕೋಟ್ ಜಿಲ್ಲೆಯ ಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯ ಆಡಿಟ್ -3 ಸುರಂಗ ಮಾರ್ಗದಲ್ಲಿನೇಪಾಳ ಸೇನೆ ಮತ್ತು ಭದ್ರತಾ ಪಡೆಗಳ ಜಂಟಿ ತಂಡವು ಈ ಮೃತದೇಹಗಳನ್ನು ಹೊರತೆಗೆದಿದೆ. ಈ ಪ್ರಕೃತಿ ವಿಕೋಪಕ್ಕೆ ಇದುವರೆಗೆ ಕನಿಷ್ಠ 1,410 ಜನರು ಮೃತಪಟ್ಟಿದ್ದು, ಇಂದಿಗೂ 6,145ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಮಾಸಾಂತ್ಯ ನೀಟ್ ವರದಿ ನೀಟ್ ವ್ಯವಸ್ಥೆಯಲ್ಲಿಸುಧಾರಣೆಗಳನ್ನು ತರುವ ನಿಟ್ಟಿನಲ್ಲಿರಚಿಸಲಾಗಿರುವ ಉದ್ಯಮಿ ನಂದನ್ ನಿಲೇಕಣಿ ನೇತೃತ್ವದ ‘ಉನ್ನತಾಧಿಕಾರದ ಸಮಿತಿ’ ಈ ತಿಂಗಳಾಂತ್ಯಕ್ಕೆ ಮಧ್ಯಂತರ ವರದಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸರಕಾರ ಶುಕ್ರವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಈಗಾಗಲೇ ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಕುರಿತು ಸ್ವೀಕರಿಸಲಾದ ಎಲ್ಲಸಲಹೆಗಳು ಹಾಗೂ ಪ್ರಸ್ತಾವನೆಗಳನ್ನು ಪರಿಶೀಲನೆಗಾಗಿ ನಿಲೇಕಣಿ ನೇತೃತ್ವದ ಸಮಿತಿಯ ಮುಂದೆ ಇರಿಸಲಾಗಿದೆ. ಈ ಸಮಿತಿಯು, ಇಸ್ರೊ ಮಾಜಿ ಮುಖ್ಯಸ್ಥ ಕೆ.ರಾಧಾಕೃಷ್ಣನ್ ನೇತೃತ್ವದ ಹಿಂದಿನ ಸಮಿತಿ ಸದಸ್ಯರೊಂದಿಗೂ ಸಮಾಲೋಚನೆ ನಡೆಸಿದೆ. ನಿಲೇಕಣಿ ಸಮಿತಿಯು ತಿಂಗಳಾಂತ್ಯಕ್ಕೆ ಸರಕಾರಕ್ಕೆ ವರದಿ ಸಲ್ಲಿಸುವ ನಿರೀಕ್ಷೆ ಇದೆ. ಸಿಂಗಾಪುರ-ಭಾರತ ಸಹಭಾಗಿತ್ವ ಸಿಂಗಾಪುರ ಮೂಲದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಗ್ಲೋಬಲ್ ಸ್ಕೂಲ್ ಗ್ರೂಪ್ , ಮುಂದಿನ ಐದು ವರ್ಷಗಳಲ್ಲಿಭಾರತದ ಆಂಧ್ರಪ್ರದೇಶ, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ24ಕ್ಕೂ ಹೆಚ್ಚು ನೂತನ ಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ಬೃಹತ್ ಶಿಕ್ಷಣ ಯೋಜನೆಗಾಗಿ ಸಂಸ್ಥೆಯು ಸುಮಾರು 1,500 ಕೋಟಿ ರೂ. ಹೂಡಿಕೆ ಮಾಡಲಿದೆ. ತನ್ನ 25 ವರ್ಷಗಳ ಯಶಸ್ವಿ ಶೈಕ್ಷಣಿಕ ಪಯಣದ ಸಂಭ್ರಮಾಚರಣೆಯ ಸಂದರ್ಭದಲ್ಲಿಈ ಪ್ರಮುಖ ವಿಸ್ತರಣಾ ಯೋಜನೆಯನ್ನು ಪ್ರಕಟಿಸಿದೆ.