ವಿಕ ಸುದ್ದಿಲೋಕ ಲಿಂಗಸುಗೂರು*ಪಟ್ಟಣದ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿನಿಯಮಬಾಹಿರವಾಗಿ ರೆಸ್ಟೊರೆಂಟ್ ಗಳನ್ನು ಬಂದ್ ಮಾಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು.* ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೇಣಕುಮಾರ ಶೆಟ್ಟಿ ಬಣ) ಕಾರ್ಯಕರ್ತರು ಒತ್ತಾಯಿಸಿ ಪ್ರತಿಭಟನಾ ರಾರ ಯಲಿ ನಡೆಸಿದರು.
ರಾರ ಯಲಿ ಮೂಲಕ ಅಬಕಾರಿ ಕಚೇರಿಗೆ ತೆರಳಿ ಅಧಿಕಾರಿ ಶರಣಬಸವಪ್ಪ ಪಾಟೀಲ್ ರಿಗೆ ಶುಕ್ರವಾರ ಮನವಿ ಸಲ್ಲಿಸಿದ ಅವರು, *ಪಟ್ಟಣದಲ್ಲಿರುವ ಎಸ್ ಎಲ್ ವಿ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಮೇಘ ಬಾರ್ ಅಂಡ್ ರೆಸ್ಟೋರೆಂಟ್ ಸೇರಿ ನಾನಾ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿಸರಕಾರದ ನಿಮಯಗಳನ್ನು ಉಲ್ಲಂಘಿಸಿ ರೆಸ್ಟೋರೆಂಟ್ ವಿಭಾಗವನ್ನು ಉದ್ದೇಶ ಪೂರ್ವಕವಾಗಿ ಬಂದ್ ಮಾಡಿ ಕೇವಲ ಮದ್ಯ ಮಾರಾಟ ಮಾಡುತ್ತಿದ್ದಾರೆ. ತಡರಾತ್ರಿವರೆಗೂ ಅಂಗಡಿಗಳು ತೆರೆದಿರುತ್ತವೆ. ಅಲ್ಲದೇ ಕೆಲ ಏರಿಯಾಗಳ ಡಬ್ಬಾ ಅಂಗಡಿಗಳು, ಕಿರಾಣಿ ಅಂಗಡಿ, ಕೆಲ ಮನೆಗಳಲ್ಲಿಯೂ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡಲಾಗುತ್ತಿದೆ. ಕೂಡಲೇ ತಾಲೂಕಿನ ಎಲ್ಲಾಬಾರ್ ಅಂಡ್ ರೆಸ್ಟೋರೆಂಟ್ ಗಳ ಮೇಲೆ ವಿಶೇಷ ಜಂಟಿ ದಾಳಿ ನಡೆಸಿ ಪರಿಶೀಲನೆ ಮಾಡಬೇಕು. ಅಕ್ರಮ ಎಸಗುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.* ಎಂದು ಆಗ್ರಹಿಸಿದರು.
ಸಂಘಟನೆ ಅಧ್ಯಕ್ಷ ಆಂಜನೇಯ ಭಂಡಾರಿ, ಉಪಾಧ್ಯಕ್ಷ ಭೀಮೇಶ ನಾಯಕ, ಸಲೀಂಖಾನ್ , ಸಿದ್ದು ಚಲುವಾದಿ, ಶಿವು ನಾಯಕ, ಶಿವು ಪತ್ತಾರ್ ಸೇರಿ ಇತರರು ಇದ್ದರು.
31ಆರ್ ಸಿಹೆಚ್ ಎಲ್ ಎನ್ ಜಿ-8. ಲಿಂಗಸುಗೂರು ಪಟ್ಟಣದಲ್ಲಿಕರವೇ ಕಾರ್ಯಕರ್ತರು ಪ್ರತಿಭಟನಾ ರಾರ ಯಲಿ ನಡೆಸಿದರು.