ಬೇಲೂರು

Contributed bybcharisha09@gmail.com|Vijaya Karnataka
belur mla hk suresh denies false vote rigging allegations bjp youth leaders clarification

ಅಡ್ಡ ಮತದಾನ ಆರೋಪ ಸಂಪೂರ್ಣ ಸುಳ್ಳು

*ಶಾಸಕ ಎಚ್ .ಕೆ. ಸುರೇಶ್ ವಿರುದ್ಧ ಉದ್ದೇಶ ಪೂರ್ವಕವಾಗಿ ಅಪಪ್ರಚಾರ: ಬಿಜೆಪಿ ತಾಲೂಕು ಅಧ್ಯಕ್ಷ ಸಂಜಯ್

ವಿಕ ಸುದ್ದಿಲೋಕ ಬೇಲೂರು

ವಿಧಾನ ಪರಿಷತ್ ಚುನಾವಣೆಯಲ್ಲಿಬೇಲೂರು ಶಾಸಕ ಎಚ್ .ಕೆ. ಸುರೇಶ್ ವಿರುದ್ಧ ಕೇಳಿ ಬರುತ್ತಿರುವ ಅಡ್ಡ ಮತದಾನ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ರಾಜಕೀಯ ಪ್ರೇರಿತ ಅಪಪ್ರಚಾರ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಸಂಜಯ್ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ಶಾಸಕ ಎಚ್ .ಕೆ. ಸುರೇಶ್ ಅವರು ಪಕ್ಷದ ಸೂಚನೆಯಂತೆ ಮತ ಚಲಾಯಿಸಿದ್ದು, ಈ ಕುರಿತು ಈಗಾಗಲೇ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿದ್ದಾರೆ. 2008ರಿಂದ ಬಿಜೆಪಿ ಹಾಗೂ ಸಂಘ ಪರಿವಾರದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆಗೆ ದುಡಿಯುತ್ತಿರುವ ಸುರೇಶ್ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸಲಾಗುತ್ತಿದೆ’’ ಎಂದು ಆರೋಪಿಸಿದರು.

‘‘ರಾಜ್ಯ ಮಟ್ಟದ ಕೆಲ ಪ್ರಭಾವಿ ರಾಜಕೀಯ ವ್ಯಕ್ತಿಗಳ ಕೈವಾಡದಿಂದಲೇ ಈ ರೀತಿಯ ಊಹಾಪೋಹಗಳು ಹುಟ್ಟಿಕೊಂಡಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ ಅವರು, ಕಾರ್ಯಕರ್ತರು ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಪಕ್ಷ ಸಂಘಟನೆ ಬಲಪಡಿಸುವ ಕಾರ್ಯದಲ್ಲಿತೊಡಗಿಸಿಕೊಳ್ಳಬೇಕು’’ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿಬೇಲೂರು-ಹಳೆಬೀಡು ಪ್ರಾಧಿ ಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸ, ನಗರಾಧ್ಯಕ್ಷ ಮೋಹನ್ , ಬಿಜೆಪಿ ಮುಖಂಡ ರಂಗನಾಥ್ , ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಘು ಶಂಬುಗನಹಳ್ಳಿ ಇದರು.

20ಬಿಎಲ್ ಆರ್ 06 ಪಿ02 ಬಿಜೆಪಿ ತಾಲೂಕು ಅಧ್ಯಕ್ಷ ಸಂಜಯ್