ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ
ವಿಕ ಸುದ್ದಿಲೋಕ ಎಚ್ .ಡಿ.ಕೋಟೆ
ಯೋಗವು ದೈಹಿಕ, ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಡಲು ಉಪಯುಕ್ತವಾಗಿದೆ. ಯೋಗವು ಕೇವಲ ವ್ಯಾಯಾಮವಲ್ಲದೆ ಮನಸ್ಸು ಮತ್ತು ದೇಹವನ್ನು ಸಮತೋಲನದಲ್ಲಿಡುವ ಒಂದು ಸಾಧನ ಎಂದು ಕ್ಷೇತ್ರ ಶಿಕ್ಷಾಣಾಧಿಕಾರಿ ಕಚೇರಿಯ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಸಿ.ವಿ. ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ತುಂಬಸೋಗೆ ಗ್ರಾಮದಲ್ಲಿರುವ ಎಂಎಂಕೆ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿನಡೆದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿ, ‘‘ಯೋಗ ಮಾಡುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ. ಅದರಲ್ಲೂಪ್ರಾಣಯಾಮವು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಿ ನವಚೈತನ್ಯವನ್ನು ಮೂಡಿಸುತ್ತದೆ. ವ್ಯಕ್ತಿಯಲ್ಲಿಸಕಾರಾತ್ಮಕ ಚಿಂತನೆ ಹಾಗೂ ತಾಳ್ಮೆಯನ್ನು ಹೆಚ್ಚಿಸಿ ಮಾನಸಿಕ ಸಮತೋಲನ ಸೃಷ್ಟಿ ಮಾಡುತ್ತದೆ. ಯೋಗದಿಂದ ಅನೇಕ ನೋವುಗಳು ನಿವಾರಣೆಯಾಗುತ್ತದೆ. ಅದರಲ್ಲೂವಿಶೇಷವಾಗಿ ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಿಸಿ ಜ್ಞಾನವಂತರಾಗಲು ಸಹಾಯ ಮಾಡುತ್ತದೆ ಹಾಗೂ ಸ್ನಾಯುಗಳನ್ನು ಬಲಪಡಿಸಿ ದೇಹವನ್ನು ಬಲಿಷ್ಠಗೊಳಿಸುತ್ತದೆ. ಜೀಣಾಂರ್ ಗ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಅನೇಕ ಕಾಯಿಲೆಗಳನ್ನು ನಿವಾರಿಸುತ್ತದೆ. ಮನಸ್ಸು ಶಾಂತ ಮತ್ತು ಸ್ಥಿರವಾಗಿರುವುದಕ್ಕೆ ಸಹಾಯಮಾಡುತ್ತದೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಪರಿಸರದ ಜೊತೆ ಹೊಂದಿಕೊಳ್ಳಲು ಯೋಗವು ಸಹಕಾರಿಯಾಗಿದೆ,’’ ಎಂದರು.
ಪ್ರಾಂಶುಪಾಲರಾದ ಎಸ್ .ಪಿ. ಪ್ರಕಾಶ್ ಮಾತನಾಡಿ, ‘‘ಪತಂಜಲಿ ಮಹರ್ಷಿಯನ್ನು ಯೋಗದ ಪಿತಾಮಹ ಎಂದು ಕರೆಯುತ್ತಾರೆ. ಯೋಗದಲ್ಲಿನಾನಾ ರೀತಿಯ ಆಸನಗಳಿವೆ. ಪ್ರತಿಯೊಂದು ಯೋಗದ ಆಯಾಮವು, ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಉತ್ತಮ ಪರಿಣಾಮವನ್ನು ಉಂಟು ಮಾಡಬಲ್ಲದಂತಹವು. ಯೋಗದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು,’’ ಎಂದರು.
ಸಂಸ್ಥೆಯ ಶಾಲೆ ಮತ್ತು ಕಾಲೇಜಿನ 500ಕ್ಕೂ ಹೆಚ್ಚು ಮಕ್ಕಳು ಯೋಗ ಪ್ರದರ್ಶಿಸಿದರು.
ಸಂಸ್ಥೆಯ ಪ್ರೌಢಶಾಲೆ ಮುಖ್ಯಶಿಕ್ಷಕ ಜಾನ್ ಬಾಸ್ಕೊ, ಉಪನ್ಯಾಸಕರಾದ ವಿರುಪಾಕ್ಷ, ಮೋಹನ್ , ಸಿದ್ದರಾಜು, ಪ್ರಸನ್ನ ಕುಮಾರ್ , ಮನೋಜ್ , ಸಿದ್ದಾಥ್ ರ್ , ಮಹಾದೇವಿ ಹಾಜರಿದ್ದರು.
ಪೊಟೋ ಇದೆ;ಋ್ಗಖ21ಏಈಓ2ಇ
ಎಚ್ .ಡಿ.ಕೋಟೆ ತಾಲೂಕಿನ ತುಂಬಸೋಗೆ ಗ್ರಾಮದಲ್ಲಿರುವ ಎಂಎಂಕೆ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿಯೋಗ ನಡೆಯಿತು.

