ಮುಖ್ಯೋಪಾಧ್ಯಾಯರ ಸಂಘಕ್ಕೆ ಅಧ್ಯಕ್ಷರ ಆಯ್ಕೆ

Contributed byragh.pkn@gmail.com|Vijaya Karnataka
k shivraj of madderi school is newly elected president

ಮುಖ್ಯೋಪಾಧ್ಯಾಯರ ಸಂಘಕ್ಕೆ ಅಧ್ಯಕ್ಷರ ಆಯ್ಕೆ

ವಿಕ ಸುದ್ದಿಲೋಕ ಕೋಲಾರ

ತಾಲೂಕು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ನೂತನ ಅಧ್ಯಕ್ಷರಾಗಿ ಮದ್ದೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೆ.ಶಿವರಾಜ್ ಆಯ್ಕೆಯಾಗಿದ್ದಾರೆ.

ನಗರ ಹೊರವಲಯದ ಖಾಸಗಿ ಹೋಟೆಲ್ ನಲ್ಲಿನಡೆದ ತಾಲೂಕು ಮುಖ್ಯೋಪಾಧ್ಯಾಯರ ಸರ್ವ ಸದಸ್ಯರ ಸಭೆಯಲ್ಲಿಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಕ್ಯಾಲನೂರಿನ ಪಿ.ಪದ್ಮಮ್ಮ, ಕಾರ್ಯದರ್ಶಿಯಾಗಿ ಶಿಳ್ಳಂಗೆರೆ ಕೆ.ಎಂ.ಮುನಿಸ್ಟಾಮಿ, ಕೋಶಾಧ್ಯಕ್ಷರಾಗಿ ಬೆಳಮಾರನಹಳ್ಳಿ ಚಂದ್ರಶೇಖರ್ ಮೊದಲಿಯಾರ್ , ಸಹಕಾರ್ಯರ್ಶಿಯಾಗಿ ಸೊನ್ನೇನಹಳ್ಳಿಯ ಶ್ರೀನಾಥ್ ಆಯ್ಕೆಯಾದರು.

ಇವರ ಆಯ್ಕೆಯನ್ನು ಪ್ರಕಟಿಸಿದ ಸಂಘದ ಅದ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿಮುಖ್ಯೋಪಾಧ್ಯಾಯರು ಕಷ್ಟ ಸಾಧ್ಯ ಸ್ಥಿತಿಯಲ್ಲಿಕರ್ತವ್ಯ ನಿರ್ವಹಿಸುತ್ತಿದ್ದು ಅವರ ನೆರವಿಗೆ ಮತ್ತು ಅವರ ಸಮಸ್ಯೆ ಸ್ಪಂದನೆಗೆ ಸರಕಾರ ಮುಂದಾಗಬೇಕು. ಶಾಲಾ ಹಾಜರಾತಿ ಮತ್ತು ಸಮಯ, ಬಿಸಿ ಊಟದ ಮೊಟ್ಟೆ ಖರೀದಿಯಲ್ಲಿಆಗಿರುವ ವೆಚ್ಚ ಸಮಸ್ಯೆಗಳ ಬಗ್ಗೆ ಸರಕಾರ ಸ್ಪಂದಿಸುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿಜಿಲ್ಲಾಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಂ.ನಾರಾಯಣಸ್ವಾಮಿ, ಕೋಶಾಧ್ಯಕ್ಷ ಕೆ.ವಿ.ಜಗನ್ನಾಥ್ , ಮುಖಂಡರಾದ ಗಂಗಾಧರ್ ಎಲ್ .ಶ್ರೀನಿವಾಸ್ , ಕೋಟೇಶ್ವರ ರಾವ್ ಉಪಸ್ಥಿತರಿದ್ದರು

=

ಫೋಟೋಕ್ಯಾಪ್ಷನ್ : ತಾಲೂಕು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ನೂತನ ಅಧ್ಯಕ್ಷರಾಗಿ ಮದ್ದೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೆ.ಶಿವರಾಜ್ ಆಯ್ಕೆಯಾಗಿದ್ದಾರೆ. (21ಕೆಪಿಎಚ್ 3)