ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

Contributed byshankarhugar.hugar@gmail.com|Vijaya Karnataka
invitation for hooogar community talent awards applications

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

ಶಿರೂರ: ‘‘ ಬಾಗಲಕೋಟೆ ಜಿಲ್ಲಾಹೂಗಾರ, ಗುರವ, ಪೂಜಾರ, ಜೀರ, ತಾಂಬೋಳಿ ಸಮುದಾಯದ ವತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ 2025-26ರ ಪರೀಕ್ಷೆಯಲ್ಲಿಅತಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ಹೂಗಾರ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಲ್ಲಿಹೂಗಾರ ಮಾದಯ್ಯ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,’’ ಎಂದು ಸಮುದಾಯದ ಜಿಲ್ಲಾಧ್ಯಕ್ಷ ಎಚ್ .ಬಿ.ಹೂಗಾರ ತಿಳಿಸಿದ್ದಾರೆ. ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳು ಆಧಾರ್ ಕಾರ್ಡ್ , ಇತ್ತೀಚಿನ ಒಂದು ಭಾವಚಿತ್ರ ಹಾಗೂ ಅಂಕಪಟ್ಟಿ ಜೆರಾಕ್ಸ್ ಪ್ರತಿಯೊಂದಿಗೆ ಆಯಾ ತಾಲೂಕುಗಳ ಅಧ್ಯಕ್ಷರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಹೂಗಾರ ಸಮಾಜದ ಖಜಾಂಚಿ ಜಗನ್ನಾಥ ಹೂಗಾರ, ಮೊ.ನಂ. 9481574506 ಹಾಗೂ ಕಾರ್ಯದರ್ಶಿ ಪ್ರವೀಣ ಪೂಜಾರ, ಮೊ.ನಂ. 7760581118 ಕ್ಕೆ ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿತಿಳಿಸಿದ್ದಾರೆ.