ಬಿಗಿ ಮೇಲ್ವಿಚಾರಣೆಯಲ್ಲಿನೀಟ್
ದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿಭಾನುವಾರ ಬಿಗಿ ಭದ್ರತೆಯ ನಡುವೆ ನೀಟ್ -ಯುಜಿ ಮರುಪರೀಕ್ಷೆ ನಡೆಯಿತು. ಭಾರತದಾದ್ಯಂತ 5,440 ಕೇಂದ್ರಗಳು ಹಾಗೂ ವಿದೇಶದ 14 ಸ್ಥಳಗಳು ಸೇರಿದಂತೆ ಒಟ್ಟು 551 ನಗರಗಳಲ್ಲಿನಡೆದ ಪರೀಕ್ಷೆಯಲ್ಲಿ22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿಯಾಗಿದ್ದಾರೆ. ಪರೀಕ್ಷಾ ಕೇಂದ್ರಗಳ ಒಳಗೆ ಪ್ರವೇಶಿಸುವ ಮುನ್ನ ಮೆಟಲ್ ಡಿಟೆಕ್ಟರ್ ಗಳನ್ನು ಬಳಸುವ ಮೂಲಕ ಕಟ್ಟುನಿಟ್ಟಾದ ತಪಾಸಣಾ ಪ್ರಕ್ರಿಯೆಯನ್ನು ಅನುಸರಿಸಲಾಯಿತು.
ಸುರಕ್ಷಿತ ಮತ್ತು ಪಾರದರ್ಶಕ ಪರೀಕ್ಷಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ನ್ ಟಿಎ) ಪರೀಕ್ಷಾ ಕೊಠಡಿಗಳಲ್ಲಿಸಮಗ್ರ ಭದ್ರತೆ ಮತ್ತು ಕಣ್ಗಾವಲು ಕ್ರಮಗಳನ್ನು ಕೈಗೊಂಡಿತ್ತು. ಕೊಠಡಿಗಳಲ್ಲಿಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಇದರ ಜತೆಗೆ ಪರೀಕ್ಷಾ ಕೇಂದ್ರಗಳಲ್ಲಿಜಾಮರ್ಗಳನ್ನೂ ಅಳವಡಿಸಲಾಗಿತ್ತು.
ಪ್ರತಿ ಕೊಠಡಿಯಲ್ಲಿಇಬ್ಬರು ಮೇಲ್ವಿಚಾರಕರು ಮತ್ತು ಪ್ರತಿ ಕೇಂದ್ರದಲ್ಲಿಹತ್ತಕ್ಕೂ ಹೆಚ್ಚು ಪ್ರಮುಖ ಅಧಿಕಾರಿಗಳನ್ನು ನೇಮಿಸಲಾಗಿತ್ತು. ತಪಾಸಣೆಗಾಗಿ 38,795 ಸಿಬ್ಬಂದಿ ಹಾಗೂ ಮುಖದ ಗುರುತು ದೃಢೀಕರಣದ ಬಯೋಮೆಟ್ರಿಕ್ ಗಾಗಿ 48,448 ಸಿಬ್ಬಂದಿ ಕೆಲಸ ಮಾಡಿದ್ದಾರೆ. ಜತೆಗೆ ಸುಮಾರು 6,700 ವೀಕ್ಷಕರು, 100ಕ್ಕೂ ಹೆಚ್ಚು ವರ್ಚುವಲ್ ವೀಕ್ಷಕರು ಮತ್ತು ಪ್ರತಿ ಕೇಂದ್ರಕ್ಕೆ ಸರಾಸರಿ 40-50 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಫೋಟೊ: ನೀಟ್

