*ಬಿಜೆಪಿ ಪ್ರಭಾರಿ ಡಾ.ಸೋನಾಲಿ ಸರ್ನೋಬತ್ ಸಲಹೆ | ಮತದಾರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ವಿಶೇಷ ಸಭೆ
ವಿಕ ಸುದ್ದಿಲೋಕ ಯಮಕನಮರಡಿ
ಬಿಎಲ್ ಒ-2 ಅವರು ಮತದಾರ ಪಟ್ಟಿಯಿಂದ ಅರ್ಹರು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಯಮಕನಮರಡಿ ಮತಕ್ಷೇತ್ರದ ಬಿಜೆಪಿ ಪ್ರಭಾರಿ ಡಾ.ಸೋನಾಲಿ ಸರ್ನೋಬತ್ ಹೇಳಿದರು.
ಯಮಕನಮರಡಿ ಬಿಜೆಪಿ ಕಾರ್ಯಾಲಯದಲ್ಲಿನಡೆದ ಮತಕ್ಷೇತ್ರದ ಮತದಾರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ (ಎಸ್ ಐಆರ್ )ವಿಶೇಷ ಸಭೆಯಲ್ಲಿಮಾತನಾಡಿದ ಅವರು, ‘‘ಮತದಾರ ಪಟ್ಟಿ ಪರಿಷ್ಕರಣೆ ಜೂನ್ ಮತ್ತು ಜುಲೈ ತಿಂಗಳಲ್ಲಿನಡೆಯಲಿದೆ. ಹಾಗಾಗಿ, ನಮ್ಮವರು ಯಾರೂ ಯಾದಿಯಿಂದ ದೂರ ಉಳಿಯಬಾರದು. 2028ಕ್ಕೆ ಯಮಕನಮರಡಿ ಕ್ಷೇತ್ರದಲ್ಲಿಗೋಕಾಕ ಸಾಹುಕಾರ ಬೇಡ. ಇಲ್ಲಿಯ ಬಿಜೆಪಿ ಅಭ್ಯರ್ಥಿ ಆಯ್ಕೆ ಆಗಬೇಕು. ಆ ನಿಟ್ಟಿನಲ್ಲಿಕೆಲಸ ಮಾಡಬೇಕು,’’ ಎಂದರು.
ರಾಜ್ಯ ಎಸ್ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ ಮಾತನಾಡಿ, ‘‘ ಚುನಾವಣೆ ಸಂದರ್ಭದಲ್ಲಿಮಾತ್ರ ಮುಖ ತೋರಿಸುವ ಕಾರ್ಯಕರ್ತರು ಬೇಡ. ವರ್ಷಪೂರ್ತಿ ಕೆಲಸ ಮಾಡುವ ಕಾರ್ಯಕರ್ತರು ಬೇಕು,’’ಎಂದು ತಿಳಿಸಿದರು.
ಈ ಸಂದರ್ಭದಲ್ಲಿಹುಕ್ಕೇರಿ ಕೆಇಬಿ ನಿರ್ದೇಶಕ ಕಲಗೌಡ ಪಾಟೀಲ, ರಾಜು ಮಠಪತಿ, ಮಹಾವೀರ ನಾಶಿಪುಡಿ, ಶ್ರೀಶೈಲ ಯಮಕನಮರಡಿ, ಅಪ್ಪಯ್ಯ ಜಾಜರಿ, ಬಾಳಯ್ಯಾ ತವಗಮಠ, ಬಸು ಗಡಕರಿ, ಸಂತೋಷ ಪಾಟೀಲ, ಈರಣ್ಣ ಗುರವ, ಈರಪ್ಪ ಪಾಟೀಲ, ಗಣವೀರ ಕೇದನೂರಿ, ಯಲ್ಲಪ್ಪಾ ನಾಯಿಕ, ಶಂಕರ ಶಿಗಿಹೋಳಿ, ರವಿ ಪಾಟೀಲ ತರರು ಉಪಸ್ಥಿತರಿದ್ದರು.
ಫೋಟೋ:19ವಾಯ್ ಎಂಡಿ1: ಯಮಕನಮರಡಿಯಲ್ಲಿನಡೆದ ಎಸ್ ಐಆರ್ ವಿಶೇಷ ಸಭೆಯಲ್ಲಿಡಾ.ಸೋನಾಲಿ ಸರ್ನೋಬತ್ ಮಾತನಾಡಿದರು.

