ಶಿವಸಂಗಮ ಸಂಸ್ಥೆಯಲ್ಲಿಯೋಗ ದಿನ
ವಿಕ ಸುದ್ದಿಲೋಕ ಗದಗ
ಯೋಗ ದಿನಾಚರಣೆ ಅಂಗವಾಗಿ ಶಿವಸಂಗಮ ಸಮೂಹ ಸಂಸ್ಥೆಯ ಶಿವಸಂಗಮ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದಿಂದ ವಿಶ್ವ ಯೋಗ ಶಿಬಿರ ಆಯೋಜಿಸಲಾಯಿತು.
ಶಿಬಿರದಲ್ಲಿಗದಗನ ಖ್ಯಾತ ವೈದ್ಯರು ಹಾಗೂ ಕೆಡಿಎಂ ಜುವೆಲರ್ಸ್ ಮಾಲೀಕ ಡಾ. ಕೆ.ಡಿ. ಮೂರಶಿಳ್ಳಿ ಯೋಗ ತರಬೇತಿ ನೀಡಿ,ಯೋಗದ ಮಹತ್ವ, ಆರೋಗ್ಯಕರ ಜೀವನಶೈಲಿಯಲ್ಲಿಯೋಗದ ಪಾತ್ರ ಹಾಗೂ ದೈಹಿಕ-ಮಾನಸಿಕ ಆರೋಗ್ಯ ಕಾಪಾಡುವ ವಿಧಾನಗಳ ಕುರಿತು ಅವರು ಮಾಹಿತಿ ನೀಡಿದರು.
ಶಿವಸಂಗಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಹೇಶ ಗಾಣಗೇರ, ಯುವ ಅಧ್ಯಕ್ಷ ನಂದೀಶ ಪಲ್ಲೇದ, ವ್ಯವಸ್ಥಾಪಕರಾದ ಶಿವಕುಮಾರ ಹಳ್ಳಿಕೇರಿ, ರಾಘವೇಂದ್ರ ಬಿನ್ನಾಳ, ಮಲ್ಲಿಕಾರ್ಜುನ ಬಡಿಗೇರ ಭಾಗವಹಿಸಿದ್ದರು.
21ಜಿಡಿಜಿ1-ಗದಗ ಶಿವಸಂಗಮ ಸಂಸ್ಥೆಯಲ್ಲಿವಿಶ್ವ ಯೋಗ ದಿನ ಆಚರಿಸಲಾಯಿತು.

