ಯೋಗ ವ್ಯಾಯಾಮವಲ್ಲ, ಅದೊಂದು ವಿಜ್ಞಾನ

Contributed byrudraiah4084@gmail.com|Vijaya Karnataka
yoga importance for physical and mental health

ಯೋಗ ವ್ಯಾಯಾಮವಲ್ಲ, ಅದೊಂದು ವಿಜ್ಞಾನ

ವಿಕ ಸುದ್ದಿಲೋಕ ಚಿಕ್ಕಮಗಳೂರು

ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗ್ಡೆ ಹೇಳಿದರು.

12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿನಗರದ ನ್ಯಾಯಾಲಯದ ಆವರಣದಲ್ಲಿಭಾನುವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯೋಗ ಕೇವಲ ವ್ಯಾಯಾಮವಲ್ಲ. ಅದೊಂದು ಮಹಾನ್ ವಿಜ್ಞಾನ ಹಾಗೂ ಶಾಸ್ತ್ರವಾಗಿದೆ. ಆರೋಗ್ಯ ರಕ್ಷಣೆಗೆ ನಿತ್ಯ ಯೋಗಾಭ್ಯಾಸ ಮಾಡುವುದು ಅತ್ಯಗತ್ಯ. ಇಂದಿನ ಯಾಂತ್ರಿಕ ಯುಗದಲ್ಲಿಒತ್ತಡದಿಂದ ಕೆಲಸ ಮಾಡುತ್ತಿರುವುದರಿಂದ ಬಿಪಿ, ಮಧುಮೇಹ, ಮಾನಸಿಕ ಖಿನ್ನತೆ ಮತ್ತಿತರೆ ಕಾಯಿಲೆ ಸಾಮಾನ್ಯವಾಗಿವೆ. ಇವುಗಳಿಂದ ದೂರ ಉಳಿಯಬೇಕಾದರೆ ಯೋಗವನ್ನು ನಮ್ಮ ದೈನಂದಿನ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಮಾತನಾಡಿದರು. ಯೋಗ ತರಬೇತುದಾರರಾದ ಸ್ವಪ್ನಾ ಯೋಗೀಶ್ , ಉಷಾ ಕುಮಾರ್ ಅವರು ಯೋಗಾಸನಗಳು ಮತ್ತು ಪ್ರಾಣಾಯಾಮ ಹಾಗೂ ಧ್ಯಾನದ ಪ್ರಾತ್ಯಕ್ಷಿಕೆಯನ್ನು ನೀಡಿ ಅವುಗಳ ಮಹತ್ವವನ್ನು ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ಸುಜೇಂದ್ರ, ನ್ಯಾಯಾಂಗ ಇಲಾಖೆ ಅಧಿಕಾರಿಗಳು, ವಕೀಲರು ಭಾಗವಹಿಸಿದ್ದರು.

21ರುದ್ರಯ್ಯ-ಪಿ9

ಚಿಕ್ಕಮಗಳೂರಿನ ನ್ಯಾಯಾಲಯದ ಆವರಣದಲ್ಲಿಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿನ್ಯಾಯಾಧೀಶರಾದ ರವೀಂದ್ರ ಹೆಗ್ಡೆ, ಇತರೆ ನ್ಯಾಯಾಧೀಶರು, ನ್ಯಾಯಾಂಗ ಅಧಿಕಾರಿಗಳು ಯೋಗಾಭ್ಯಾಸ ಮಾಡಿದರು.