ಶಿರಸಿಯಲ್ಲಿವಿವಿಧ ಸಂಘಟನೆಗಳಿಂದ ಯೋಗದಿನಾಚರಣೆ *ನೂರಾರು ಜನರಿಂದ ಯೋಗಾಭ್ಯಾಸ
ಬೆಳ್ಳಂಬೆಳಗ್ಗೆ ಯೋಗಾಯೋಗದ ಮುದ
ವಿಕ ಸುದ್ದಿಲೋಕ ಶಿರಸಿ
ಇನ್ನೂ ನಸುಕು ಹರಿಯುವ ಮುನ್ನವೇ ನೂರಾರು ಜನರು ಒಂದೆಡೆ ಸೇರಿದರು. ಪಾರಂಪರಿಕ ವಿಧಾನವಾದ ಯೋಗಾಭ್ಯಾಸದ ವಿವಿಧ ಆಸನಗಳನ್ನು ಕೈಗೊಂಡರು. ತಜ್ಞರಿಂದ ಯೋಗ ಸಂದೇಶ ಪಡೆದುಕೊಂಡರು.
ನಗರದ ನೆಮ್ಮದಿ ರಂಗಧಾಮದ ಆವರಣದಲ್ಲಿಭಾನುವಾರ ಬೆಳಗ್ಗೆ ಇಂಥ ಸನ್ನಿವೇಶ ಕಂಡು ಬಂತು. 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಬೆಳಗಿನ ಜಾವ ಸಾರ್ವಜನಿಕ ಕಾರ್ಯಕ್ರಮ ಏರ್ಪಾಟಾಗಿತ್ತು. ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡು ತಾಸಿಗೂ ಹೆಚ್ಚು ಕಾಲ ಯೋಗಾಭ್ಯಾಸ ನಡೆಸಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಮುಖ ಸಂತೋಷ ಹಳ್ಳೂರು ನಿರ್ದೇಶನದಲ್ಲಿ ನೀನಾ ಸಂತೋಷ, ಗಣಪತಿ ಭಟ್ , ಸಂತೋಷ ಹೆಗಡೆ, ಪ್ರೀಯಾ ಬಾಲ್ಸೆ ವೇದಿಕೆಯಲ್ಲಿಯೋಗ ಪ್ರಾತ್ಯಕ್ಷಿಕೆ ನೀಡಿದರು.
ಆರಂಭದಲ್ಲಿದೀಪ ಬೆಳಗುವ ಮೂಲಕ ಯೋಗಾಚಾರ್ಯ ಶಂಕರನಾರಾಯಣ ಶಾಸ್ತ್ರಿ ಚಾಲನೆ ನೀಡಿದರು. ಕಳೆದ ಹನ್ನೆರಡು ವರ್ಷಗಳ ಹಿಂದೆ ಯೊಗ ದಿನಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ ನಂತರ ಜಗತ್ತಿನ 137ದೇಶಗಳಲ್ಲೂಆರಂಭವಾಯಿತು. ಇದರಿಂದ ಭಾರತದ ಬಗ್ಗೆ ಜಗತ್ತಿನ ದೇಶಗಳಿಗೆ ಪ್ರೀತಿ, ವಾತ್ಸಲ್ಯ ತುಂಬುವಂತಾಯಿತು. ಯೋಗದಿಂದ ಮಾನಸಿಕವಾಗಿ ಎಲ್ಲರನ್ನೂ ಒಟ್ಟಿಗೆ ತರುವ ಕೆಲಸ ಆಗುತ್ತಿದೆ ಎಂದರು.
ಸಾಮಾಜಿಕ ಮುಖಂಡ ಅನಂತಮೂರ್ತಿ ಹೆಗಡೆ, ಡಾ.ಶಿವರಾಮ ಕೆ.ವಿ, ಡಾ.ದಿನೇಶ ಹೆಗಡೆ, ವಿ.ಪಿ.ಹೆಗಡೆ ವೈಶಾಲಿ, ಮನೋಹರ ಮಲ್ಮನೆ, ಸುಬೇದಾರ ರಾಮು ಸೇರಿದಂತೆ ಹಲವರಿದ್ದರು.
ಉತ್ತರಕನ್ನಡ ಯೋಗ ಫೆಡರೇಶನ್ ಅಧ್ಯಕ್ಷ ಅನಿಲ ಕರಿ ಪ್ರಾಸ್ತಾವಿಕ ಮಾತನಾಡಿದರು. ಪ್ರಿಯಾಂಕಾ ಹೆಗಡೆ ನಿರೂಪಿಸಿದರು. ಯೋಗ ದಿನಾಚರಣೆ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ
ಶ್ರೀಕಾಂತ ಹೆಗಡೆ ವಂದಿಸಿದರು.
ಇದೇ ವೇಳೆ ನಿವೃತ್ತ ಯೋಧ ಸುಬೇದಾರ ರಾಮು ಸಂಗ್ರಹಿಸಿದ್ದ ಯೋಗ ಅಂಚೆ ಚೀಟಿಗಳ ಪ್ರದರ್ಶನವೂ ಗಮನಸೆಳೆಯಿತು.
ಉತ್ತರಕನ್ನಡ ಯೋಗ ಫೆಡರೇಶನ್ , ರೋಟರಿ ಕ್ಲಬ್ ಮತ್ತು ಐಎಂಎ ಯೋಗ ಶಿಕ್ಷಣ ಕೇಂದ್ರ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಲಯನ್ಸ್ ಕ್ಲಬ್ , ರೋಟರಿ ಕ್ಲಬ್ , ಲಿವ್ ಫಿಟ್ , ನಯನ ಫೌಂಡೇಶನ್ , ಇಂಜಿನಿಯರ್ಸ್ ಅಸೋಸಿಯೇಷನ್ , ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ಸಮಿತಿ, ಆದರ್ಶ ವನಿತಾ ಸಮಾಜ, ಸೀನಿಯರ್ಸ್ ಚೇಂಬರ್ಸ್ , ಗಾಯತ್ರಿ ಬಳಗ, ಆರೋಗ್ಯ ಭಾರತಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಉತ್ತರಕನ್ನಡ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಹಕಾರದಲ್ಲಿಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಬಾಕ್ಸ್
ಯೋಗ ಮಹಾಸಾಗರ
ಯೋಗ ಅದೊಂದು ಮಹಾಸಾಗರ, ಎರಡೂವರೆ ಸಾವಿರ ವರ್ಷಗಳ ಹಿಂದೆ ಪತಂಜಲಿ ಮಹಾಮುನಿಗಳು ಅಧ್ಯಯನ, ಸಂಶೋಧನೆ ಮೂಲಕ ಯೋಗವಿಜ್ಞಾನವನ್ನು ಜಗತ್ತಿಗೆ ನೀಡಿದ್ದಾರೆ. ಯೋಗದಿಂದ ದೈಹಿಕ ದೃಢತೆ ಜತೆ ಮಾನಸಿಕ ನೆಮ್ಮದಿಯೂ ಸಾಧ್ಯ. ಇದರಿಂದ ಆರೋಗ್ಯ ವೃದ್ಧಿಯೂ ಆಗುತ್ತದೆ. ಮನುಷ್ಯನ ಬಾಹ್ಯ ಹಾಗೂ ಆಂತರಿಕ ಅಂಗಾಗಗಳಿಗೆ ಚೈತನ್ಯ ದೊರೆಯುತ್ತದೆ ಎಂದು ಯೋಗಾಚಾರ್ಯ ಶಂಕರನಾರಾಯಣ ಶಾಸ್ತ್ರಿ ಹೇಳಿದರು.
ಕೋಟ್
ಮಕ್ಕಳಲ್ಲಿಏಕಾಗ್ರತೆ ಕೊರತೆ ಕಾಡುತ್ತಿದೆ. ಒಂದು ವಿಷಯದಲ್ಲಿಅವರ ಮನಸ್ಸನ್ನು ಕೇಂದ್ರಿಕರಿಸಲು ಯೋಗಾಭ್ಯಾಸ ಅಗತ್ಯವಾಗಿ ಕೈಗೊಳ್ಳಬೇಕು.
-ಶಂಕರನಾರಾಯಣ ಶಾಸ್ತ್ರಿ, ಯೋಗಾಚಾರ್ಯ
21ಎಸ್ಸಾರೆಸ್ 2ಎ,ಬಿ,ಸಿ,ಡಿ,ಇ
ಶಿರಸಿಯ ನೆಮ್ಮದಿ ರಂಗಧಾಮದಲ್ಲಿನಡೆದ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಯೋಗಾಚಾರ್ಯ ಶಂಕರನಾರಾಯಣ ಶಾಸ್ತ್ರಿ ಉದ್ಘಾಟಿಸಿದರು.
ಶಿರಸಿ ನೆಮ್ಮದಿ ರಂಗಮಂದಿರದಲ್ಲಿ ನೂರಾರು ಜನರು ಯೋಗಾಭ್ಯಾಸ ಕೈಗೊಂಡರು.

