ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡಿ

Contributed bygvittalslb@gmail.com|Vijaya Karnataka
demand for rudrappa lamani to be appointed as minister for banjara community

ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡಿ

ವಿಕ ಸುದ್ದಿಲೋಕ ಕೊಪ್ಪಳ

ಲಂಬಾಣಿ ಸಮಾಜದ ಏಕೈಕ ಶಾಸಕರಾಗಿರುವ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣ್ ನಾಯಕ್

ಒತ್ತಾಯಿಸಿದ್ದಾರೆ. ಬಂಜಾರ ಸಮಾಜ ಕಾಂಗ್ರೆಸ್ ಗೆ ಮತದಾನ ಮಾಡಿದೆ. ಆದರೆ ಕಾಂಗ್ರೆಸ್ ಸಮುದಾಯಕ್ಕೆ ಅನ್ಯಾಯ ಮಾಡಿದೆ. ತಾಂಡಾಭಿವೃದ್ಧಿ ಅಧ್ಯಕ್ಷರನ್ನು ಮಾಡಿ ನಿರ್ದೇಶಕರನ್ನು

ನೇಮಕ ಮಾಡದೆ ಇರುವುದು ಮತ್ತು ತಾಂಡಾಭಿವೃದ್ಧಿಗೆ ಸಂಪೂರ್ಣ ಅಧಿಕಾರವನ್ನು ಕಿತ್ತಿಕೊಂಡು ಮತ್ತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಅದನ್ನ ನಡೆಸಿಕೊಂಡು

ಹೋಗುವ ಹಾಗೆ ಮಾಡಿದ್ದಾರೆ. ಹೀಗಾಗಿ ಸಮಾಜ ಎಲ್ಲವನ್ನು ಗಮನಿಸುತ್ತಿದೆ. ಹೀಗಾಘಿಘಿ ರುದ್ರಪ್ಪ ಲಮಾನಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ