-ಕೆಪಿಸಿಸಿ ಸಾರಥಿಯಾಗಿ ಹರಿಪ್ರಸಾದ್ ಪದಗ್ರಹಣ
ವಿಕ ಸುದ್ದಿಲೋಕ ಬೆಂಗಳೂರು
ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಪದಗ್ರಹಣ ಮಾಡಿದ್ದು, ಈ ಸಂದರ್ಭದಲ್ಲಿಪಕ್ಷದ ಶಕ್ತಿ ಪ್ರದರ್ಶನ ನಡೆಯಿತು. ಬೆಂಗಳೂರಿನ ಅರಮನೆ ಮೈದಾನದಲ್ಲಿಭಾನುವಾರ ನಡೆದ ‘ಸಂಕಲ್ಪ ಸಮಾವೇಶ’ದಲ್ಲಿಕೆಪಿಸಿಸಿಯ ನಿಕಟಪೂರ್ವ ಅಧ್ಯಕ್ಷ ಹಾಗೂ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹರಿಪ್ರಸಾದ್ ಅವರಿಗೆ ಪಕ್ಷದ ಧ್ವಜ ನೀಡಿ ಅಧಿಕಾರ ಹಸ್ತಾಂತರ ಮಾಡಿದರು.
1. ರಾಜಕೀಯ ಸಂಕಲ್ಪ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿಒಗ್ಗಟ್ಟು ಪ್ರದರ್ಶಿಸಿದ ನಾಯಕರು, 2028ರಲ್ಲಿರಾಜ್ಯದಲ್ಲಿಮತ್ತೆ ಅಧಿಕಾರಕ್ಕೆ ಬರುವ ಹಾಗೂ 2029ರಲ್ಲಿರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವ ಸಂಕಲ್ಪ ತೊಟ್ಟರು.
2.ಕಾರ್ಯಕರ್ತರಿಗೆ ಅಧಿಕಾರ
ಈಗಾಗಲೇ ಎರಡೂವರೆ ವರ್ಷ ನಿಗಮ ಮಂಡಳಿ ಅಧ್ಯಕ್ಷರಾದವರು ಸ್ಥಾನ ತೊರೆದು ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಬೋರ್ಡ್ , ಕಾರ್ಪೋರೇಷನ್ ಗಳಲ್ಲಿ
ಕಾರ್ಯಕರ್ತರಿಗೆ ಅಧಿಕಾರ ನೀಡುವಂತೆ ಹರಿಪ್ರಸಾದ್ ಆಗ್ರಹಿಸಿದರು.
3.ಗ್ಯಾರಂಟಿ ಸಮಿತಿ ಘೋಷಣೆ: ಫಲಾನುಭವಿಗಳ ದಾಖಲೆ ಮರುಪರಿಶೀಲಿಸಲು ಮತ್ತು ತಳಮಟ್ಟದಲ್ಲಿನಾಯಕರನ್ನು ಬೆಳೆಸಲು ರಾಜ್ಯದ ಪ್ರತಿ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ5 ಸದಸ್ಯರ ‘ಗ್ಯಾರಂಟಿ ಸಮಿತಿ’ ರಚಿಸುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ ಪ್ರಕಟಿಸಿದರು.
4.ಸಂಘದ ವಿರುದ್ಧ ವಾಗ್ದಾಳಿ
ಅಧಿಕಾರ ವಹಿಸಿಕೊಂಡ ಹರಿಪ್ರಸಾದ್ , ‘ಸಂವಿಧಾನವೇ ನಮ್ಮ ಧರ್ಮ’ ಎಂದು ಸಾರುತ್ತಾ, ಆರ್ ಎಸ್ ಎಸ್ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

