ಸಂಕೇಶ್ವರ ಸಿಎಚ್ ಸಿಯಲ್ಲಿಸೇವೆ ಅಸ್ತವ್ಯಸ್ತ

Contributed byshashankm102@gmail.com|Vijaya Karnataka
service disruption due to lack of doctors at sankeshwar health center

ವೈದ್ಯರು, ಸಿಬ್ಬಂದಿ ಇಲ್ಲದೆ ರೋಗಿಗಳ ಪರದಾಟ | ಖಾಲಿ ಹುದ್ದೆ ಭರ್ತಿಯಾಗದಿದ್ದರೆ ಸಮಸ್ಯೆ ಇನ್ನೂ ತೀವ್ರ

ಶಶಾಂಕ್ ಮಾಳಿ ಸಂಕೇಶ್ವರ

ಖhasha್ಞkಞ102ಃಜಞaಜ್ಝಿ.್ಚಟಞ

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಕೊರತೆ ತೀವ್ರಗೊಂಡಿದ್ದು, ಪ್ರಮುಖ ಹುದ್ದೆಗಳು ಖಾಲಿ ಉಳಿದಿರುವ ಪರಿಣಾಮ ಸೇವೆ ಅಸ್ತವ್ಯಸ್ತಗೊಂಡಿದೆ. ಮುಖ್ಯ ವೈದ್ಯಾಧಿಕಾರಿ, ಸ್ತಿ್ರೕರೋಗ, ಅರಿವಳಿಕೆ, ಮಕ್ಕಳ ತಜ್ಞರು ಹಾಗೂ ಸ್ಟಾಫ್ ನರ್ಸ್ ಸೇರಿದಂತೆ ಹಲವು ಹುದ್ದೆಗಳು ತೆರವಾಗಿದ್ದು, ರೋಗಿಗಳು ಹಾಗೂ ಗರ್ಭಿಣಿಯರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

50 ಹಾಸಿಗೆಗಳ ಸಾಮರ್ಥ್ಯದೊಂದಿಗೆ ಮೇಲ್ದರ್ಜೆಗೇರಿರುವ ಆಸ್ಪತ್ರೆಯಲ್ಲಿಅಗತ್ಯ ಮೂಲಸೌಕರ್ಯಗಳು ಲಭ್ಯವಿದ್ದರೂ, ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಯ ಸೇವಾ ಸಾಮರ್ಥ್ಯಕ್ಕೆ ಹಿನ್ನಡೆಯಾಗಿದೆ. ಖಾಲಿ ಹುದ್ದೆಗಳ ಭರ್ತಿಯಲ್ಲಿಆರೋಗ್ಯ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿಅಸಮಾಧಾನ ವ್ಯಕ್ತವಾಗಿದೆ.

ಆರೋಗ್ಯ ಇಲಾಖೆ ನಿರಾಸಕ್ತಿ:

ಸಾಮಾನ್ಯ ವರ್ಗಾವಣೆ ಹಿನ್ನೆಲೆಯಲ್ಲಿವೈದ್ಯರು ಹಾಗೂ ಸಿಬ್ಬಂದಿ ಸೇರಿ ಹಲವು ಹುದ್ದೆಗಳು ತೆರವಾಗಿದ್ದರೂ ತ್ವರಿತವಾಗಿ ಭರ್ತಿ ಮಾಡುವಲ್ಲಿಆರೋಗ್ಯ ಇಲಾಖೆ ನಿರಾಸಕ್ತಿ ತೋರಿದೆ. ಎರಡು ದಿನಗಳ ಹಿಂದಷ್ಟೇ ಒಬ್ಬ ವೈದ್ಯರನ್ನು ನಿಯೋಜಿಸಲಾಗಿದ್ದರೂ ಸಾಕಾಗುತ್ತಿಲ್ಲ. ವಿಶೇಷವಾಗಿ ಹೆರಿಗೆ ಸೇವೆಗೆ ತೀವ್ರ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿಸ್ತಿ್ರೕರೋಗ ತಜ್ಞರ ಹುದ್ದೆಯನ್ನು ತುರ್ತಾಗಿ ಭರ್ತಿ ಮಾಡಬೇಕೆಂಬ ಒತ್ತಾಯ ಹೆಚ್ಚಾಗಿದೆ. ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಗೆ ಅವಲಂಬಿತರಾಗಿರುವ ಸಾವಿರಾರು ಜನರು ಸಂಕಷ್ಟ ಅನುಭವಿಸುತ್ತಿದ್ದು, ಲಭ್ಯವಿರುವ ಸಿಬ್ಬಂದಿ ಮೇಲಿನ ಕಾರ್ಯಭಾರವೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ನಿತ್ಯ 250-300 ರೋಗಿಗಳು:

ಸುಮಾರು 50 ಸಾವಿರಕ್ಕೂ ಅಧಿಕ ಜನಸಂಖ್ಯೆಯಿರುವ ಸಂಕೇಶ್ವರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ 250 ರಿಂದ 300 ಹೊರರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಆದರೆ ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಎಲ್ಲರಿಗೂ ಸಕಾಲದಲ್ಲಿಚಿಕಿತ್ಸೆ ಒದಗಿಸುವುದು ಸವಾಲಾಗಿ ಪರಿಣಮಿಸಿದೆ.

ಸಮರ್ಥ ನಿರ್ವಹಣೆಗೆ ಹಿನ್ನಡೆ:

ಹೆಚ್ಚುವರಿ ಹಾಸಿಗೆ ವ್ಯವಸ್ಥೆ, ಅಗತ್ಯ ಔಷಧ ದಾಸ್ತಾನು, ಪೂರಕ ಆಂಬ್ಯುಲೆನ್ಸ್ ಸೇವೆ ಹಾಗೂ ಸುಸಜ್ಜಿತ ಸೌಲಭ್ಯ ಹೊಂದಿರುವ ಆಸ್ಪತ್ರೆ, ಸಮರ್ಪಕ ವೈದ್ಯರು ಮತ್ತು ಮಾನವ ಸಂಪನ್ಮೂಲದ ಕೊರತೆಯಿಂದ ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ತಕ್ಷಣ ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸಿದರೆ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಸ್ತಿ್ರೕರೋಗ ತಜ್ಞರಿಲ್ಲದೆ ಹಿನ್ನಡೆ:

ಕಾರ್ಯನಿರ್ವಹಿಸುತ್ತಿದ್ದ ವೈದ್ಯರ ವರ್ಗಾವಣೆ ಬಳಿಕ ಹೆರಿಗೆ ಸೇವೆಗೆ ತೀವ್ರ ಹಿನ್ನಡೆಯಾಗಿದ್ದು, ಗರ್ಭಿಣಿಯರಲ್ಲಿಆತಂಕ ಹೆಚ್ಚಾಗಿದೆ. ತಿಂಗಳಿಗೆ 25 ರಿಂದ 30 ಹೆರಿಗೆ ಆಗುತ್ತಿದ್ದರೂ ನಿರೀಕ್ಷಿತ ಪ್ರಗತಿ ಸಾಧ್ಯವಾಗದ ಕಾರಣ ವೈದ್ಯರನ್ನು ವರ್ಗಾವಣೆ ಮಾಡಲಾಗಿದೆ. ಪರಿಣಾಮವಾಗಿ ಆಸ್ಪತ್ರೆಯಲ್ಲಿಹೆರಿಗೆಗಳ ಸಂಖ್ಯೆ ಗಣನೀಯ ಕುಸಿದಿದ್ದು, ಗರ್ಭಿಣಿಯರು ಹೆರಿಗೆಗಾಗಿ ಅಮ್ಮಣಗಿ (ನಿಡಸೋಸಿ ಗೇಟ್ ), ಹುಕ್ಕೇರಿ ಹಾಗೂ ಬೆಳಗಾವಿಯ ಆಸ್ಪತ್ರೆ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಇತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೂ ಇದೇ ರೀತಿ ತೊಂದರೆ ಉಂಟಾಗುತ್ತಿದ್ದು, ಸಮಸ್ಯೆಯ ಗಂಭೀರತೆ ಅರಿತು ಆರೋಗ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕ್ವೋಟ್ ...1

ಈಗಾಗಲೇ ಅನುಭವಿ ವೈದ್ಯರ ನೇಮಕಕ್ಕೆ ಆದೇಶ ಹೊರಡಿಸಲಾಗಿದೆ. ಬಾಕಿ ಉಳಿದಿರುವ ಖಾಲಿ ಸ್ಥಾನಗಳಿಗೂ ಶೀಘ್ರ ನೇಮಕ ಮಾಡಲಾಗುವುದು.

-ಡಾ.ಉದಯ ಕುಡಚಿ | ತಾಲೂಕು ವೈದ್ಯಾಧಿಕಾರಿ, ಹುಕ್ಕೇರಿ

ಫೋಟೋ18ಎಸ್ ಎನ್ ಕೆ1: ಸಂಕೇಶ್ವರ ಸಮುದಾಯ ಆರೋಗ್ಯ ಕೇಂದ್ರ.