(ಯೋಗ ಪ್ಯಾಕೇಜ…) ರೋಗ ಮುಕ್ತ, ಯಶಸ್ವಿ ಜೀವನಕ್ಕೆ ಯೋಗ ಅತ್ಯಗತ್ಯ

Contributed byyallappatalawar728@gmail.com|Vijaya Karnataka
yoga is essential for a disease free successful life 12th international yoga day celebration

ವಿಕ ಸುದ್ದಿಲೋಕ ರಾಯಬಾಗ

ಪ್ರತಿದಿನ ಯೋಗ ಮಾಡುವುದರಿಂದ ನಾವು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿ, ಆರೋಗ್ಯಯುತ ಜೀವನ ನಡೆಸಲು ಸಾಧ್ಯ ಎಂದು ಪುಣೆಯ ಮುದಿಥಾ ಯೋಗ ಕರಿಯರ್ ಆರ್ಕಿಟೆಕ್ಟ್ ಸಂಸ್ಥಾಪಕಿ ಸುಧಾ ಮಸೋಡಗಿ ಹೇಳಿದರು.

ತಾಲೂಕಿನ ಬಾವನಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆ ಆವರಣದಲ್ಲಿಹೊಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ, ಬಾಜೀರಾವ ಮಗದುಮ್ಮ ಪ್ರೌಢ ಶಾಲೆ, ಆದರ್ಶ ಸ್ವತಂತ್ರ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿಹಮ್ಮಿಕೊಂಡಿದ್ದ 12ನೇ ಅಂತಾರಾಷ್ಟಿ್ರೕಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿಮಾತನಾಡಿದ ಯುವ ಮುಖಂಡ ಧುಳಗೌಡ ಪಾಟೀಲ, ‘‘ಒಳ್ಳೆಯ ಶಿಕ್ಷಣ ಮತ್ತು ಆರೋಗ್ಯದಿಂದ ಉನ್ನತ ಸಾಧನೆ ಸಾಧ್ಯ. ನಮ್ಮ ಪ್ರಾಚೀನ ಯೋಗ ಪದ್ಧತಿಗೆ ಇಂದು ವಿಶ್ವ ಮಾನ್ಯತೆ ದೊರಕಿರುವುದು ಹೆಮ್ಮೆಯ ವಿಷಯ,’’ ಎಂದರು. ಇದೇ ಸಂದರ್ಭದಲ್ಲಿಸುಧಾ ಮಸೋಡಗಿ ಹಾಗೂ ಗುಜರಾತದ ಒಜಸ್ವಿನಿ ಪಟೇಲ ಅವರು ವಿದ್ಯಾರ್ಥಿಗಳಿಗೆ ಯೋಗಾಸನ ತರಬೇತಿ ನೀಡಿದರು. ಇದೇ ವೇಳೆ ಸುಧಾ ಮಸೋಡಗಿ ಬರೆದ ಯೋಗಾ ಪ್ರೆನ್ಯುರ್ ಬ್ಲೂಪ್ರಿಂಟ್ ಪುಸ್ತಕ ಬಿಡುಗಡೆ ಹಾಗೂ ಭಾರತೀಯ ಸೇನೆಗೆ ಆಯ್ಕೆಯಾದ ಗೌರವ ದೇಸಾಯಿ ಮತ್ತು ಆದಿತ್ಯ ಮಾನೆ ಅವರಿಗೆ ಸತ್ಕಾರ ನಡೆಯಿತು.

ಸಂಸ್ಥೆ ಅಧ್ಯಕ್ಷ ಈರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯೆ ವಿಲಾಸಮತಿ ಪಾಟೀಲ, ಗಣ್ಯರಾದ ಎ.ಟಿ. ಕೂಗೆ, ಬಾಬು ಜನಾಜ, ಅರಿಹಂತ ಕಾಮಗೌಡ, ಕುಮಾರ ಕಾಮಗೌಡ, ಮುಖ್ಯೋಪಾಧ್ಯಾಯರಾದ ಎ.ಕೆ. ಸಲಗರೆ, ಡಿ.ಆರ್ . ಭೆಂಡೆ, ಎಸ್ .ಎಸ್ . ರುಪ್ಪಾಳೆ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಯಲ್ಲಪ್ಪ ತಳವಾರ ಕಾರ್ಯಕ್ರಮ ನಿರ್ವಹಿಸಿದರು.

ಧಿ21ರಾಯಬಾಗ1

ಬಾವನಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿಹಮ್ಮಿಕೊಂಡಿದ್ದ 12ನೇ ಅಂತಾರಾಷ್ಟಿ್ರೕಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿಸುಧಾ ಮಸೋಡಗಿ ಅವರು ಬರೆದ ಯೋಗಾ ಪ್ರೆನ್ಯುರ್ ಬ್ಲೂಪ್ರಿಂಟ್ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು.