ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗೆ ಅರ್ಜಿ ಆಹ್ವಾನ

Contributed bysrinivas.hullahalli@gmail.com|Vijaya Karnataka
invitation for farmers to apply for horticulture department schemes
ವಿಕ ಸುದ್ದಿಲೋಕ ನಂಜನಗೂಡು

ತೋಟಗಾರಿಕೆ ಇಲಾಖೆ ವತಿಯಿಂದ 2026-27 ನೇ ಸಾಲಿನ ವಿವಿಧ ಯೋಜನೆಗಳಿಗೆ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಿ.ಚಂದ್ರು ಪ್ರಕಟಣೆಯಲ್ಲಿತಿಳಿಸಿದ್ದಾರೆ.
ರಾಷ್ಟಿ್ರೕಯ ಎಣ್ಣೆತಾಳೆ ಅಭಿಯಾನ ಯೋಜನೆಯಡಿ ಹೊಸದಾಗಿ ಪ್ರದೇಶ ವಿಸ್ತರಣೆ, ನಿರ್ವಹಣೆ ಮತ್ತು ಅಂತರ ಬೆಳೆ ಬೆಳಯಲು ಸಹಾಯಧನ ನೀಡಲಾಗುವುದು, ರಾಷ್ಟಿ್ರೕಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ಲಾಸ್ಟಿಕ್ ಹೊದಿಕೆ, ಅಂಗಾಂಶ ಬಾಳೆ, ಕಂದು ಬಾಳೆ, ತರಕಾರಿ ಬೆಳೆ ಬೆಳೆಯಲು ಸಹಾಯಧನ ನೀಡಲಾಗುವುದು, ಜೊತೆಗೆ ಸದರಿ ಯೋಜನೆಯಡಿ ತರಕಾರಿ ಬೆಳೆಗಾರರರಿಗೆ ಅನುಕೂಲವಾಗುವಂತೆ ಶೇ.50 ರ ರಿಯಾಯಿತಿ ದರದಲ್ಲಿಲಘು ಪೋಷಕಾಂಶಗಳನ್ನು ವಿತರಣೆ ಮಾಡಲಾಗುವುದು. ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿನೀರಾವರಿ ಪದ್ಧತಿ ಅಳವಡಿಸಲು ಸಹಾಯಧನ ನೀಡಲಾಗುವುದು. ಕೇಂದ್ರ ಪುರಸ್ಕೃತ ಯೋಜನೆಯಾದ ಕೃಷಿ ವಿಸ್ತರಣೆ ಮತ್ತು ತರಬೇತಿ ಅಭಿಯಾನ ಯೋಜನೆಯಡಿ ತೋಟಗಾರಿಕೆಯಲ್ಲಿರೈತರಿಗೆ ಯಾಂತ್ರೀಕರಣ ಘಟಕಗಳಿಗೆ ಸಹಾಯಧನ ನೀಡಲಾಗುವುದು. ಸಮಗ್ರ ತೋಟಗಾರಿಕೆ ಯೋಜನೆಯಡಿ ನಂಜನಗೂಡು ರಸಬಾಳೆಗೆ 0.20 ಗುಂಟೆ ಬೆಳೆಯಲು ಸಹಾಯಧನ·ನೀಡಲಾಗುವುದು. ರಾಷ್ಟಿ್ರೕಯ ಕೃಷಿ ವಿಕಾಸ ಯೋಜನೆಯಡಿ ತೆಂಗು ಶೇಖರಣಾ ಘಟಕ, ಲಘು ಪೋಷಕಾಂಶಗಳನ್ನು ಸಹಾಯಧನದಲ್ಲಿನೀಡಲಾಗುವುದು. ಈ ಎಲ್ಲಾ ಯೋಜನೆಗಳಿಗೆ ರೈತರು ಅರ್ಜಿ ಸಲ್ಲಿಸಿ, ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.