ಕುವೆಂಪು ಕನ್ನಡ ಸಂಸ್ಥೆಯಲ್ಲಿಸ್ವಚ್ಛತಾ ಕಾರ್ಯಕ್ರಮ

Contributed bynagaraj.navimane@timesgroup.com|Vijaya Karnataka
cleanliness initiatives at kuvempu kannada institution
ಕುವೆಂಪು ಕನ್ನಡ ಸಂಸ್ಥೆಯಲ್ಲಿಸ್ವಚ್ಛತಾ ಕಾರ್ಯಕ್ರಮ

ವಿಕ ಸುದ್ದಿಲೋಕ ಮೈಸೂರು
ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಪರಿಸರ ದಿನದ ಅಂಗವಾಗಿ ಸೋಮವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ಒಳ ಮತ್ತು ಹೊರ ಆವರಣದ ಸುತ್ತಲೂ ಕಸ, ಕಡ್ಡಿ, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ಆಯ್ದು ಪರಿಸರ ದಿನ ಆಚರಿಸಲಾಯಿತು. ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಮಾತನಾಡಿ, ‘‘ಪರಿಸರ ದಿನ ಆಚರಣೆಯ ಅಂಗವಾಗಿ ಹಾಗೂ ಶೈಕ್ಷಣಿಕ ಚಟುವಟಿಕೆ ಭಾಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ ಎಷ್ಟು ಮುಖ್ಯವೋ ಸ್ವಚ್ಛ ಪರಿಸರ ಅಷ್ಟೇ ಮುಖ್ಯವಾಗಿರುತ್ತದೆ. ಗಂಗೋತ್ರಿ ಹಸಿರಾಗಿದೆ. ಸ್ವಚ್ಛವಾಗಿ ಇಟ್ಟುಕೊಳ್ಳೋಣ,’’ ಎಂದರು.

ಹಿರಿಯ ಪ್ರಾಧ್ಯಾಪಕಿ ಪ್ರೊ.ಎಸ್ .ಡಿ.ಶಶಿಕಲಾ, ಕಾರ್ಯನಿರ್ವಾಹಕ ಅಧಿಕಾರಿ ಕುಮುದಾ, ಅಧ್ಯಾಪಕಿ ಶೈಲಾ, ಡಾ.ಎಚ್ .ಪಿ.ಮಂಜು, ಡಾ.ಸುರೇಶ್ , ಡಾ.ದುಂಡಯ್ಯ, ಸಹಾಯಕ ಸಂಶೋಧಕರಾದ ಯೋಗೇಶ್ , ಕುಮಾರ್ , ಪೂರ್ಣಿಮ, ದಿವ್ಯ, ದೀಪ, ಬೋಧಕ ಸಿಬ್ಬಂದಿಗಳಾದ ರುದ್ರಣ್ಣ, ಪ್ರದೀಪ್ , ಶಾಲಿನಿ, ನಾಗವೇಣಿ, ಸಂಶೋಧನಾ ವಿದ್ಯಾರ್ಥಿಗಳಾದ ಕಲ್ಲಹಳ್ಳಿ ಕುಮಾರ್ , ವರಹಳ್ಳಿ ಆನಂದ, ಸತೀಶ್ , ದಿವ್ಯ, ಅನಿತಾ, ಮಹದೇವಮ್ಮ, ಪ್ರಕಾಶ್ , ರಾಜೇಶ್ , ಸಂತೋಷ್ , ಸೋಮಶೇಖರ್ ಮೆಣಸಗಿ, ಪ್ರಸನ್ನ, ನಟರಾಜು, ಧನಲಕ್ಷ್ಮೇ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಾದ ವಿಶ್ವ, ಮಣಿಕಂಠ, ಚಂದ್ರು ಭಾಗಿಯಾಗಿದ್ದರು.

----ಕೋಟ್ -----

ಪ್ರಕೃತಿಯಿಂದ ಬಂದ ನಾವು ಪ್ರಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ ಆಗಬೇಕು. ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ನಾವೆಲ್ಲ ಶ್ರಮಿಸಬೇಕು.

- ಪ್ರೊ. ಎಂ.ನಂಜಯ್ಯ ಹೊಂಗನೂರು, ನಿರ್ದೇಶಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ.

(ಫೋಟೋ ಇದೆ)