ಕೆಎಸ್ ಆರ್ ಟಿಸಿ ಹೊಸ ಬಸ್ ಸಂಚಾರ ಶುರು

Contributed bylingarajv84@gmail.com|Vijaya Karnataka
new ksrtc bus service new opportunities for students and public
ಕಿಕ್ಕರ್ : ಸಂಚಾರ ವೇಳಾಪಟ್ಟಿ ಬದಲಿಗೆ ಗ್ರಾಮಸ್ಥರ ಒತ್ತಾಯ

----
ಕೆಎಸ್ ಆರ್ ಟಿಸಿ ಹೊಸ ಬಸ್ ಸಂಚಾರ ಶುರು

ವಿಕ ಸುದ್ದಿಲೋಕ ಬಸವಾಪಟ್ಟಣ

ಬಹುದಿನದ ಬೇಡಿಕೆಗೆ ಸ್ಪಂದಿಸಿದ ಕೆಎಸ್ ಆರ್ ಟಿಸಿ, ದಾವಣಗೆರೆ-ಬಸವಾಪಟ್ಟಣ ಮಾರ್ಗವಾಗಿ ಹೊನ್ನಾಳಿ-ಶಿವಮೊಗ್ಗಕ್ಕೆ ಹೊಸ ಬಸ್ ಸಂಚಾರ ಆರಂಭಿಸಿದ್ದಕ್ಕೆ ಸುತ್ತಲ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೇ ಬಸ್ ವೇಳಾಪಟ್ಟಿಯಲ್ಲಿಸಣ್ಣ ಬದಲಾವಣೆ ಮಾಡಿದರೆ ಸಾವಿರಾರು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ದಾವಣಗೆರೆ-ಹೊನ್ನಾಳಿ-ಶಿವಮೊಗ್ಗ ಮಾರ್ಗದ ಹೊಸ ಕೆಎಸ್ ಆರ್ ಟಿಸಿ ಬಸ್ ಗೆ ಕೋಟೆಹಾಳ್ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೋಮವಾರ ಪೂಜೆ ಸಲ್ಲಿಸಿ, ಸಿಹಿ ಹಂಚಿದರು.

ದಾವಣಗೆರೆ-ಹೊನ್ನಾಳಿ-ಶಿವಮೊಗ್ಗ ಬಸ್ ಪ್ರತಿದಿನ ಹೊನ್ನಾಳಿಯಿಂದ ಬೆಳಗ್ಗೆ 8ಕ್ಕೆ ಹೊರಟು ದಾವಣಗೆರೆಗೆ 9.45ಕ್ಕೆ ತಲುಪುತ್ತಿದೆ. ವಾಪಸ್ ದಾವಣಗೆರೆಯಿಂದ 10.30ಕ್ಕೆ ಹೊರಟು ಮಧ್ಯಾಹ್ನ 12.30ಕ್ಕೆ ಹೊನ್ನಾಳಿ ತಲುಪುತ್ತಿದೆ. ಮಧ್ಯಾಹ್ನ 1ಕ್ಕೆ ಮತ್ತೆ ದಾವಣಗೆರೆಯಿಂದ ಹೊರಟು ಕೊನೆಯ ಸಂಚಾರ ಮಾತ್ರ ಶಿವಮೊಗ್ಗಕ್ಕೆ ಹೋಗಿ ವಾಪಸ್ ಹೊನ್ನಾಳಿಗೆ ಬಂದು ನಿಲ್ಲುತ್ತದೆ ಎಂದು ಬಸ್ ಸಿಬ್ಬಂದಿ ತಿಳಿಸಿದರು.

ವಿದ್ಯಾರ್ಥಿಗಳಿಗೆ ಸಮಸ್ಯೆ:

ಹೊಸ ಬಸ್ ಬಂದಿದ್ದಕ್ಕೆ ಸಂತೋಷ ಪಟ್ಟಿರುವ ಬಸವಾಪಟ್ಟಣ ಸುತ್ತಲ ಹಳ್ಳಿಗಳ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರು, ಬೆಳಗಿನ ಬಸ್ 8ಕ್ಕೆ ಹೊನ್ನಾಳಿಯಿಂದ ಹೊರಟರೆ, ಬಸವಾಪಟ್ಟಣಕ್ಕೆ 8.30-8.45ಕ್ಕೆ ಬರುತ್ತದೆ. ಕಾಲೇಜು 9ಕ್ಕೆ ಆರಂಭವಾಗುತ್ತದೆ. ಬಸ್ ತಡವಾದರೆ ವಿದ್ಯಾರ್ಥಿಗಳಿಗೆ ತರಗತಿಗೆ ತಡವಾಗುವ ಭಯವಿದೆ ಎಂದು ಹೇಳಿದರು. 20ಕ್ಕೂ ಹೆಚ್ಚು ಗ್ರಾಮಗಳ ವಿದ್ಯಾರ್ಥಿಗಳು, ರೋಗಿಗಳು, ವ್ಯಾಪಾರಿಗಳ ಹಿತದೃಷ್ಟಿಯಿಂದ ವೇಳಾಪಟ್ಟಿ ಪರಿಷ್ಕರಿಸಿ ಅನುಮೋದನೆ ನೀಡಬೇಕೆಂದು ಜಿಲ್ಲಾವಿಭಾಗೀಯ ನಿಯಂತ್ರಕರಲ್ಲಿಗ್ರಾಮಸ್ಥರು ಮನವಿ ಮಾಡಿದರು.

------

* ಎರಡು ಬೇಡಿಕೆಗಳು

- ಬೆಳಗಿನ ಬಸ್ ಮುಂದಕ್ಕೆ: ಹೊನ್ನಾಳಿಯಿಂದ ಬೆಳಗ್ಗೆ 8ರ ಬದಲು 7.30ಕ್ಕೆ ಬಸ್ ಹೊರಟರೆ, ಬಸವಾಪಟ್ಟಣಕ್ಕೆ 7.30-7.45ಕ್ಕೆ ಬರುತ್ತದೆ. ವಿದ್ಯಾರ್ಥಿಗಳು 9 ಗಂಟೆಗೆ ಕ್ಲಾಸಿಗೆ ಆರಾಮಾಗಿ ತಲುಪಬಹುದು.

- ಸಂಜೆ ಬಸ್ ಹಿಂದಕ್ಕೆ: ದಾವಣಗೆರೆಯಿಂದ ಸಂಜೆ 5ಕ್ಕೆ ಒಂದು ಬಸ್ ಬಿಟ್ಟರೆ, ಕಾಲೇಜು ಮುಗಿಸಿಕೊಂಡು ಬರುವ ವಿದ್ಯಾರ್ಥಿಗಳಿಗೆ ಹಾಗೂ ಆಸ್ಪತ್ರೆ, ಕೆಲಸ ಮುಗಿಸಿಕೊಂಡು ಬರುವ ಜನರಿಗೆ ಅನುಕೂಲವಾಗುತ್ತದೆ.

----

22ಬಿಪಿಟಿ2

ದಾವಣಗೆರೆ-ಹೊನ್ನಾಳಿ-ಶಿವಮೊಗ್ಗ ಮಾರ್ಗದ ಹೊಸ ಕೆಎಸ್ ಆರ್ ಟಿಸಿ ಬಸ್ ಗೆ ಕೋಟೆಹಾಳ್ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೋಮವಾರ ಪೂಜೆ ಸಲ್ಲಿಸಿ, ಸಿಹಿ ಹಂಚಿದರು.