ಡಿವೈಡರ್ ಗೆ ಬೈಕ್ ಡಿಕ್ಕಿ, ಸಾವು

Contributed bymanjunathrd59@gmail.com|Vijaya Karnataka
bike collision tragic death of individual
ಹಾವೇರಿ: ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ನಗರದ ರಾಣೇಬೆನ್ನೂರು ರಸ್ತೆಯ ಶಿವಲಿಂಗನಗರ ಬಳಿ ನಡೆದಿದೆ. ಹಾವೇರಿ ತಾಲೂಕು ಕನವಳ್ಳಿ ಗ್ರಾಮದ ಅಬ್ದುಲ್ ರಹೀಂ ಹಜರತ್ ಅಲಿ ಸಕ್ಕರಖಾನವರ (40) ಮೃತರು. ಬೈಕ್ ಸವಾರ ಹಾವೇರಿಯಿಂದ ಬ್ಯಾಡಗಿ ಕಡೆಗೆ ಅತೀ ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿರುವಾಗ ರಸ್ತೆ ಮಧ್ಯೆ ಡಿವೈಡರ್ ಹಾಗೂ ಬೀದಿ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದಾನೆ. ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಮೃತನ ಸಹೋದರ ಇಸ್ಮಾಯಿಲ್ ಸಾಬ್ ಸಕ್ಕರಖಾನವರ ಪೊಲೀಸರಿಗೆ ನೀಡಿದ ದೂರಿನಲ್ಲಿತಿಳಿಸಿದ್ದಾರೆ. ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.