Farmers Protest Led By State Farmers Association Against Electricity Privatization
ವಿದ್ಯುತ್ ಖಾಸಗೀಕರಣ ಮಾಡಬೇಡಿ
Contributed by: BASAVARAJU KG|Vijaya Karnataka•
ಕಿಕ್ಕರ್ : ರಾಜ್ಯ ರೈತ ಸಂಘದ ನೇತೃತ್ವದಲ್ಲಿರೈತರ ಪ್ರತಿಭಟನೆ | ಕೇಂದ್ರ ಸರಕಾರದ ನಡೆ ವಿರುದ್ಧ ಆಕ್ರೋಶ
---- ವಿದ್ಯುತ್ ಖಾಸಗೀಕರಣ ಮಾಡಬೇಡಿ
ವಿಕ ಸುದ್ದಿಲೋಕ ದಾವಣಗೆರೆ
ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ನಡೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿರೈತರು ನಗರದ ಬೆಸ್ಕಾಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ದೇಶಾದ್ಯಂತ ಸರಕಾರಿ ಸ್ವಾಮ್ಯದಲ್ಲಿರುವ ವಿದ್ಯುತ್ ವಿತರಣೆ ವ್ಯವಸ್ಥೆಯನ್ನು ಟಾಟಾ ಪವರ್ ಕಂಪನಿಗೆ ವಹಿಸಿ ಕೊಡುವ ಮೂಲಕ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಕೇಂದ್ರದ ಈ ಖಾಸಗೀಕರಣ ನೀತಿಯನ್ನು ರಾಜ್ಯ ಸರಕಾರ ಒಪ್ಪಬಾರದು. ಒಂದೊಮ್ಮೆ ವಿದ್ಯುತ್ ವಲಯ ಖಾಸಗೀಕರಣವಾದರೆ ರೈತರ ಕೃಷಿ ಪಂಪ್ ಸೆಟ್ ಗೆ ಬಳಸುವ ವಿದ್ಯುತ್ ಗೆ ದುಬಾರಿ ಬಿಲ್ ಪಾವತಿಸುವ ಸಂದರ್ಭ ಎದುರಾಗಲಿದೆ ಎಂದು ರೈತ ಮುಖಂಡರು ಆತಂಕ ವ್ಯಕ್ತಪಡಿಸಿದರು.
40 ಸಾವಿರ ಪಂಪ್ ಸೆಟ್ ಗಳು:
ರಾಜ್ಯದಲ್ಲಿಬೆಸ್ಕಾಂ, ಎಸ್ಕಾಂ, ಚೆಸ್ಕಾಂ ಸೇರಿ ಇತರೆ ಸರಕಾರಿ ಸ್ವಾಮ್ಯದ ಕಂಪನಿಗಳನ್ನು ಟಾಟಾ ಪವರ್ ಕಂಪನಿಗೆ ವಹಿಸುವ ಪ್ರಸ್ತಾಪ ರಾಜ್ಯ ಸರಕಾರದ ಮುಂದಿದೆ. ಪ್ರತಿ ಜಿಲ್ಲೆಯಲ್ಲೂಸುಮಾರು 40 ಸಾವಿರ ಕೃಷಿ ಪಂಪ್ ಸೆಟ್ ಗಳಿವೆ. ಈ ಎಲ್ಲಪಂಪ್ ಸೆಟ್ ಗಳಿಗೆ ಸಪರ್ಮಕವಾಗಿ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿಸರಕಾರ ವಿದ್ಯುತ್ ವಿತರಣೆ ವ್ಯವಸ್ಥೆಯಲ್ಲಿಸುಧಾರಣೆ ತರಬೇಕೇ ಹೊರತು ಖಾಸಗಿಯವರಿಗೆ ವಹಿಸಿ ಕೈತೊಳೆದು ಕೊಳ್ಳಬಾರದು ಎಂದು ಆಗ್ರಹಿಸಿದರು.
ವಿದ್ಯುತ್ ಖಾಸಗೀಕರಣ ಪ್ರಕ್ರಿಯೆ ಸಂಬಂಧ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರಕಾರ ಅವಕಾಶ ಕಲ್ಪಿಸಿದೆ. ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಆಗದಂತೆ ರಾಜ್ಯದ ಜನಪ್ರತಿನಿಧಿಗಳು ಎಚ್ಚರ ವಹಿಸಬೇಕು. ಸರಕಾರವು ಕೂಡಲೆ ಈ ನಿರ್ಧಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಬೆಸ್ಕಾಂ ಕಚೇರಿ ಎದುರು ಪ್ರತಿಭಟಿಸಿದ ರೈತ ಮುಖಂಡರು, ವಿದ್ಯುತ್ ಖಾಸಗೀಕರಣ ಮಾಡದಂತೆ ಆಗ್ರಹಿಸಿ ಬೆಸ್ಕಾಂ ಅಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿಸಂಘದ ರಾಜ್ಯ ಕಾರ್ಯದರ್ಶಿ ಅರುಣಕುಮಾರ್ ಕುರಡಿ, ಜಿಲ್ಲಾಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ, ಐರಣಿ ಚಂದ್ರು, ಆಮ್ ಆದ್ಮಿ ಪಕ್ಷದ ಆದಿಲ್ ಖಾನ್ , ಕರಿಲಕ್ಕೇನಹಳ್ಳಿ ರೇವಣಸಿದ್ದಪ್ಪ, ಎಸ್ .ಟಿ. ಪರಮೇಶ್ವರಪ್ಪ ಬುಳ್ಳಾಪುರ, ಈಚಘಟ್ಟದ ಉದಯಕುಮಾರ್ , ಕಂಪಳೇಶ್ ಇತರರಿದ್ದರು.
----
* ಖಾಸಗೀಕರಣದ ಪರಿಣಾಮ
- ಸರಕಾರದ ಖಾಸಗೀಕರಣ ನಡೆಯಿಂದಾಗಿ ವಿದ್ಯುತ್ ದರ ಹೆಚ್ಚಳ ಸಾಧ್ಯತೆ.
- ರೈತರು ಕೃಷಿ ಚಟುವಟಿಕೆಯಿಂದ ವಿಮುಖರಾಗುವ ಸಾಧ್ಯತೆ ಇದೆ.
- ಆಹಾರ ಕೊರತೆ ಮತ್ತು ನಿರುದ್ಯೋಗ ಸಮಸ್ಯೆ ತಲೆದೋರುವ ಅಪಾಯ.
- ಕಾರ್ಪೊರೇಟ್ ಕಂಪನಿಗಳು ಲಾಭಕ್ಕಾಗಿ ರೈತರ ಆರ್ಥಿಕ ಶೋಷಣೆ.
- ಮೊಬೈಲ್ ರೀಚಾಜ್ ರ್ ಮಾದರಿಯಲ್ಲಿಹಣ ವಸೂಲಿಗೆ ಇಳಿಯುವ ಕಂಪನಿ.
----
22ಡಿವಿಜಿ07, 08 (ವಿವೇಕ್ )
ವಿದ್ಯುತ್ ಖಾಸಗೀಕರಣ ವಿರೋಧಿಸಿ ದಾವಣಗೆರೆಯ ಬೆಸ್ಕಾಂ ಕಚೇರಿ ಎದುರು ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿರೈತರು ಪ್ರತಿಭಟನೆ ನಡೆಸಿದರು.