ನೇಬಗೇರಿ ಎಸ್ಸಿ ಕಾಲೊನಿಗೆ ನುಗ್ಗುವ ಕೊಳಚೆ ನೀರು | ನಿವಾಸಿಗಳಲ್ಲಿಸಾಂಕ್ರಾಮಿಕ ರೋಗ ಭೀತಿರಸ್ತೆ ಓಕೆ, ಅವೈಜ್ಞಾನಿಕ ಚರಂಡಿ ಏಕೆ?
ಗುರುನಾಥ ಕತ್ತಿ ಮುದ್ದೇಬಿಹಾಳ
ಘ್ಕಿಜskಞಚ್ಝಿvkಃಜಞaಜ್ಝಿ.್ಚಟಞ
ಕಳೆದ 10 ವರ್ಷಗಳಿಂದ ಸುಸಜ್ಜಿತ ರಸ್ತೆ ಇಲ್ಲದೇ ಪರದಾಡುತ್ತಿದ್ದ ಗ್ರಾಮಸ್ಥರಿಗೆ ಒಂದೆಡೆ ರಸ್ತೆ ನಿರ್ಮಾಣ ಸಂತಸ ತಂದರೆ, ಮತ್ತೊಂದೆಡೆ ರಸ್ತೆ ಎರಡೂ ಬದಿಯ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಕೊಳಚೆ ನೀರು ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದೆ.
ತಾಲೂಕಿನ ದೇವೂರ ಗ್ರಾಮದಿಂದ ನೇಬಗೇರಿ ಗ್ರಾಮದವರೆಗೆ ಸುಸಜ್ಜಿತ ರಸ್ತೆ ನಿರ್ಮಾಣವಾಗಿದೆ. ಇದರಿಂದ ವಾಹನ ಸವಾರರಿಗೆ ಹಾಗೂ ರೈತರಿಗೆ ತಮ್ಮ ಜಮೀನುಗಳಿಗೆ ತೆರಲು ಅನುಕೂಲವಾಗಿದೆ. ಅಲ್ಲದೆ. ಬೀರಪ್ಪ ದೇವಸ್ಥಾನದ ಭಕ್ತರಿಗೆ ಸಹಕಾರಿಯಾಗಿದೆ. ಆದರೆ, ರಸ್ತೆಯ ಎರಡೂ ಬದಿ ನಿರ್ಮಿಸಿದ ಚರಂಡಿ ನೀರು ಗ್ರಾಮದ ಎಸ್ಸಿ ಕಾಲೊನಿಗೆ ಹರಿಯುತ್ತಿದೆ. ಊರಿನಿಂದ ಹೊರಗೆ ಹೋಗಬೇಕಾದ ಕೊಳಚೆ ನೀರು ಊರ ಒಳಗೆ ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗುತ್ತಿದೆ.
ಎಸ್ಸಿ ಕಾಲೊನಿ ಪಕ್ಕದಲ್ಲೇ ಮಾರುತಿ ದೇವಸ್ಥಾನವಿದೆ. ಪ್ರತಿ ವರ್ಷ ಜಾತ್ರೆ ನಿಮಿತ್ತ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಆಗ ಭಕ್ತರು ಚರಂಡಿ ನೀರು ತುಳಿದುಕೊಂಡೇ ಸಾಗಬೇಕಿದೆ. ಭಕ್ತರು ಹರಕೆ ತೀರಿಸಲು ದೀರ್ಘ ದಂಡ ನಮಸ್ಕಾರ ಕೊಳಚೆ ನೀರಿನ ಮಧ್ಯೆಯೇ ಹಾಕಬೇಕಾದ ದುಸ್ಥಿತಿ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ವೃದ್ಧೆಯ ಗೋಳು ಕೇಳೋರಾರ ಯರು?
ನೇಬಗೇರಿ ಗ್ರಾಮದ ವೃದ್ಧೆ ಲಕ್ಷತ್ರ್ಮವ್ವ ಎಮ್ಮೇಟಿ ಅವರ ಮನೆಯ ಮುಂದೆ ಚರಂಡಿ ನಿರ್ಮಾಣಕ್ಕಾಗಿ ರಸ್ತೆ ಅಗೆದ ಕಾರಣ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
‘‘ನನಗ ಮೊದಲ ಕಣ್ಣು ಕಾಣೋಲ್ಲ. ಅದರಾಗ್ ನನ್ನ ಮನೆ ಮುಂದೆನೇ ಚರಂಡಿ ಮಾಡಲು ರಸ್ತೆ ಅಗೆದಾರ. ರಸ್ತೆ ದಾಟುವಾಗ ಸಾಕಷ್ಟು ಬಾರಿ ಬಿದ್ದಿದ್ದೇನೆ. ಕಾಮಗಾರಿ ಮಾಡುವಾಗ್ಲೆಹೇಳಿದ್ದೆ. ಆದ್ರೆ ನನ್ನ ಮಾತು ಯಾರೂ ಕೇಳಲಿಲ್ಲ. ನನಗೆ ಅಡ್ಡಾಡಲು ಅನುಕೂಲ ಮಾಡಿಕೊಟ್ರ ಸಾಕು,’’ ಎಂದು ವೃದ್ಧೆ ಲಕ್ಷ್ಮವ್ವ ಅಳಲು ತೋಡಿಕೊಂಡರು.
--
ಮನೆಗೆ ನುಗ್ಗುವ ಕೊಳಚೆ
ನೇಬಗೇರಿ ಗ್ರಾಮದಲ್ಲಿಅಂದಾಜು 1 ಕಿಮೀನಷ್ಟು ರಸ್ತೆಯ ಅಕ್ಕಪಕ್ಕದ ಚರಂಡಿ ನೀರು ಹರಿದು ಹೋಗಲು ಸಮಪರ್ಕ ಚರಂಡಿ ನಿರ್ಮಿಸಿಲ್ಲ. ಎಸ್ಸಿ ಕಾಲೊನಿಯ ಪ್ರತಿಯೊಂದು ಮನೆಗೂ ಗಲೀಜು ನೀರು ನುಗ್ಗುವ ಭೀತಿ ಎದುರಾಗಿದೆ. ಈಗಾಗಲೇ ಈಚೆಗಷ್ಟೇ ಸುರಿದ ಅಲ್ಪ ಮಳೆಗೆ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ಸಾಕಷ್ಟು ದವಸ-ಧಾನ್ಯಗಳು ಹಾನಿಯಾಗಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
--
ಚರಂಡಿ ಅವೈಜ್ಞಾನಿಕ ನಿರ್ಮಾಣದಿಂದ ಕೊಳಚೆ ನೀರು ಊರಿನಿಂದ ಹೊರಕ್ಕೆ ಹೋಗುವ ಬದಲು ಊರಿನಲ್ಲೇ ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದೆ. ನಿತ್ಯ ಮಕ್ಕಳು, ವೃದ್ಧರಿಗೆ ನಡೆದಾಡಲು ಹಾಗೂ ದೇವಸ್ಥಾನಕ್ಕೆ ಹೋಗಲು ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ಈ ಸಮಸ್ಯೆ ಜನಪ್ರತಿನಿಧಿಗಳು, ಅಧಿಕಾರಿಗಳು ಬಗೆಹರಿಸಬೇಕು.
-ಗುರುಸಂಗಪ್ಪ ಹಂಡರಗಲ್ಲ, ನೇಬಗೇರಿ ಗ್ರಾಮಸ್ಥ.
ಧಿ--
ಚರಂಡಿ ನಿರ್ಮಾಣದಿಂದ ನೆಬಗೇರಿ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆ ಗಮನಕ್ಕೆ ಬಂದಿದೆ. ಸದ್ಯ ರಸ್ತೆ ಕಾಮಗಾರಿ ಮುಗಿದಿದೆ. ಯಾವುದಾದರೂ ಯೋಜನೆಯಲ್ಲಿಸೂಕ್ತ ಚರಂಡಿ ವ್ಯವಸ್ಥೆ ಮಾಡಿಕೊಡಲು ಬರುತ್ತದೆಯೇ ಎನ್ನುವುದರ ಬಗ್ಗೆ ಇನ್ನಿತರ ಅಧಿಕಾರಿಗಳೊಂದಿಗೆ ಚರ್ಚಿಸಿ, ಸರಿಪಡಿಸಲು ಕ್ರಮವಹಿಸಲಾಗುವುದು.
-ಎ.ಬಿ.ರೆಡ್ಡಿ
ಎಇಇ, ಲೋಕೋಪಯೋಗಿ ಇಲಾಖೆ, ಮುದ್ದೇಬಿಹಾಳ
ಫೋಟೊ
18ಎಮ್ ಡಿಬಿಎಲ್ 2ಎ
ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಗ್ರಾಮದಲ್ಲಿರಸ್ತೆ ಎರಡೂ ಬದಿಯ ಚರಂಡಿ ನೀರು ಎಸ್ಸಿ ಕಾಲೊನಿಗೆ ಹರಿದು ಹೋಗುತ್ತಿರುವುದು.