40 ಸಾವಿರ ರೂ. ವರೆಗೆ ಆದಾಯ ಘೋಷಿಸಿದರೂ ತ್ಯಾಜ್ಯ ಸಂಗ್ರಹಣೆ ಕ್ರಿಯಾಪಡೆಗೆ ಸದಸ್ಯರ ಕೊರತೆ

Contributed bycrastalp19@gmail.com|Vijaya Karnataka
lack of members for waste collection despite income declaration of 40 thousand rupees
ವಿಕ ಸುದ್ದಿಲೋಕ ಕಾಸರಗೋಡು

ಕಾಸರಗೋಡು ನಗರದ ತ್ಯಾಜ್ಯ ತೆರವುಗೊಳಿಸಿ ‘ ಕ್ಲೀನ್ ಕೇರಳ ’ ಕಂಪನಿಗೆ ಹಸ್ತಾಂತರಿಸಿದರೆ 40 ಸಾವಿರ ರೂ.ವರೆಗೆ ಆದಾಯ ಲಭಿಸುತ್ತದೆ. ಆದರೆ ನಗರಸಭಾ ವ್ಯಾಪ್ತಿಯ ತ್ಯಾಜ್ಯ ತೆರವುಗೊಳಿಸಿ ಈ ಆದಾಯ ಪಡೆಯಲು ಅಗತ್ಯದಷ್ಟು ಸದಸ್ಯರೇ ಲಭಿಸದ ದುಸ್ಥಿತಿ ಹಸಿರುಕ್ರಿಯಾ ಪಡೆಯದ್ದಾಗಿದೆ.
ಹಸಿರು ಕ್ರಿಯಾಪಡೆಗೆ ಕಾಸರಗೋಡು ನಗರಸಭೆಯ 39 ವಾರ್ಡ್ ಗಳಲ್ಲಿ78 ಮಂದಿಯ ಅಗತ್ಯವಿದೆ. ಆದರೆ ಇಲ್ಲಿರುವುದು ಒಟ್ಟು 42 ಮಂದಿ ಮಾತ್ರ. ಒಂದು ವಾರ್ಡ್ ನಲ್ಲಿಇಬ್ಬರು ಹಸಿರು ಕ್ರಿಯಾಪಡೆ ಸದಸ್ಯರು ಬೇಕು. ಇದರಿಂದ ನಗರಸಭೆಯ ಹಲವು ವಾರ್ಡ್ ಗಳಲ್ಲಿತ್ಯಾಜ್ಯ ತೆರವುಗೊಳಿಸುವ ಕಾರ ್ಯ ಮಂದಗತಿಯಲ್ಲಿಸಾಗುತ್ತಿದೆ.ಪ್ಲಾಸ್ಟಿಕ್ , ಗಾಜು, ಬ್ಯಾಗ್ , ಬಟ್ಟೆ, ಬಾಟಲಿ ಮೊದಲಾದ ಸಾಮಗ್ರಿಗಳನ್ನು ಸಂಗ್ರಹಿಸಿ ವರ್ಗೀಕರಿಸಿ ಕ್ಲೀನ್ ಕೇರಳಕ್ಕೆ ಹಸ್ತಾಂತರಿಸಬೇಕಿದೆ.ಇದೀಗ ಇತರ ವಾರ್ಡ್ ಗಳ ಹಸಿರು ಕ್ರಿಯಾ ಪಡೆಯ ಸದಸ್ಯರು ನಾನಾ ವಾರ್ಡ್ ಗಳಲ್ಲಿ ತ್ಯಾಜ್ಯ ತೆರವುಗೊಳಿಸುತ್ತಾರೆ.

ನೆಲ್ಲಿಕುಂಜೆ, ಕಡಪ್ಪುರ, ಫೋರ್ಟ್ ರೋಡ್ , ತಾಯಲಂಗಾಡಿ, ತೆರುವತ್ ಕಡವತ್ , ತಳಂಗರೆ ಮತ್ತಿತರ 18 ವಾರ್ಡ್ ಗಳಲ್ಲಿಹಸಿರುಕ್ರಿಯಾಪಡೆ ಸದಸ್ಯರಿಲ್ಲ. ಮಳೆಗಾಲ ಆರಂಭಗೊಂಡಿರುವುದರಿಂದ ಸೊಳ್ಳೆ, ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಾರಣವಾಗಲಿದೆ. ನಗರಸಭೆಯ 39 ವಾರ್ಡ್ ಗಳಲ್ಲಿತ್ಯಾಜ್ಯ ತೆರವುಗೊಳಿಸುವ ಮೂಲಕ ಹಸಿರು ಕ್ರಿಯಾಪಡೆಗೆ ತಿಂಗಳಿಗೆ ಏಳೂವರೆ ಲಕ್ಷ ರೂ. ಆದಾಯವಿದೆ.ಒಬ್ಬ ಸದಸ್ಯನಿಗೆ ಕನಿಷ್ಠ 10 ಸಾವಿರ ರೂ. ಲಭಿಸಬಹುದು.

ಪ್ರಾಯೋಜಕರ ಮೂಲಕ ನಗರಸಭೆಗೆ ನೀಡಿದ ಟೆಂಪೋ ರಿಕ್ಷಾವನ್ನು ಸ್ವಯಂ ಚಲಾಯಿಸಿ ತ್ಯಾಜ್ಯ ಸಂಗ್ರಹಿಸಿ ವರ್ಗೀಕರಿಸಿ ಕ್ಲೀನ್ ಕೇರಳಕ್ಕೆ ಹಸಿರು ಕ್ರಿಯಾಪಡೆ ಕನ್ ಸೋರ್ಶಿಯಂ ಕಾರ ್ಯದರ್ಶಿ ಗಾಯತ್ರಿ ಕಿಣಿ ಅವರಿಗೆ ತಿಂಗಳಿಗೆ 40 ಸಾವಿರ ರೂ.ವರೆಗೆ ಲಭಿಸುತ್ತದೆ. ತ್ಯಾಜ್ಯ ಸಂಗ್ರಹಣೆಗೆ 30 ಸಾವಿರ ರೂ. ಹಾಗೂ ವರ್ಗೀಕರಿಸಿ ನೀಡಿದ್ದಕ್ಕೆ 10ಸಾವಿರ ರೂ. ಲಭಿಸುತ್ತದೆ. ಕರಂದಕ್ಕಾಡು ಪೇಟೆ ಭಾಗದಲ್ಲಿಇವರ ಸೇವೆ ಲಭಿಸುತ್ತದೆ. ತ್ಯಾಜ್ಯ ಸಂಗ್ರಹಣೆಯ ಅನುಸಾರ ಆದಾಯ ಲಭಿಸುತ್ತದೆ. ವಾರಕ್ಕೊಂದು ಬಾರಿ ತ್ಯಾಜ್ಯ ಸಂಗ್ರಹಿಸುವವರಿಗೆ ದೊಡ್ಡ ಮೊತ್ತ ಲಭಿಸುತ್ತದೆ ಎಂದು ಗಾಯತ್ರಿ ಹೇಳುತ್ತಾರೆ.

ನೆಲ್ಲಿಕುಂಜೆ ನಿವಾಸಿಯಾದ ಜಯಶೀಲ ಅವರು ಕೂಡಾ ನಗರಸಭೆ ವ್ಯಾಪ್ತಿಯಲ್ಲಿ ಸ್ವಯಂ ರಿಕ್ಷಾ ಟೆಂಪೋ ಚಲಾಯಿಸಿ ತ್ಯಾಜ್ಯ ಸಂಗ್ರಹಿಸಿ ವರ್ಗೀಕರಿಸಿ ನೀಡಿ ಆದಾಯ ಪಡೆಯುತ್ತಿರುವ ನಗರಸಭೆಯ ಹಸಿರು ಕ್ರಿಯಾ ಪಡೆಯ ಇನ್ನೊಬ್ಬ ಸದಸ್ಯರಾಗಿದ್ದಾರೆ. ನಗರಸಭೆಯ ಹಸಿರುಕ್ರಿಯಾಪಡೆಗೆ ಮೂರು ವಾಹನಗಳಿವೆ. ಇನ್ನೊಂದು ವಾಹನವನ್ನು ಚಾಲಕರನ್ನು ನೇಮಿಸಿ ಚಲಾಯಿಸಲಾಗುತ್ತಿದೆ.

ಚಿತ್ರ: 21ಕೆಎಸ್ ಎಲ್ ನಗರಸಭೆ-ಸ್ವಯಂ ವಾಹನ ಚಲಾಯಿಸಿ ತ್ಯಾಜ್ಯ ಸಂಗ್ರಹಿಸಿ ಹಸ್ತಾಂತರಿಸುತ್ತಿರುವ ಹಸಿರು ಕ್ರಿಯಾ ಪಡೆ ಸದಸ್ಯರಾದ ಗಾಯತ್ರಿ ಕಿಣಿ ಹಾಗೂ ಜಯಶೀಲ.