ಲಕ್ಷ್ಯ, ತನ್ವಿಗೆ ಭಾರತದ ಸಾರಥ್ಯ

Contributed bymanjunath.gowda@timesgroup.com|Vijaya Karnataka
lakshya and tanvi lead india in us open badminton tournament
ಯುಎಸ್ ಓಪನ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಿ

ಫುಲ್ಲೆರ್ಟನ್ (ಯುಎಸ್ ಎ): ಲಕ್ಷ್ಯ ಸೇನ್ ಮತ್ತು ಉದಯೋನ್ಮುಖ ತಾರೆ ತನ್ವಿ ಶರ್ಮಾ ಮಂಗಳವಾರ ಆರಂಭವಾಗಲಿರುವ ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿಭಾರತ ತಂಡದ ಸವಾಲನ್ನು ಮುನ್ನಡೆಸಲಿದ್ದಾರೆ.
ಮಾಜಿ ವಿಶ್ವ ಚಾಂಪಿಯನ್ ಷಿಪ್ ನ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಸೇರಿದಂತೆ ಭಾರತವು ಸಿಂಗಲ್ಸ್ ನಲ್ಲಿಅಪಾರ ಸಂಖ್ಯೆಯಲ್ಲಿಕಣಕ್ಕಿಳಿಯುತ್ತಿದೆ. ವಿಶ್ವದ 14ನೇ ರಾರ ಯಂಕ್ ನ ಮತ್ತು ಪ್ಯಾರಿಸ್ ಒಲಿಂಪಿಕ್ ಸೆಮಿಫೈನಲಿಸ್ಟ್ ಸೇನ್ , ಪುರುಷರ ಸಿಂಗಲ್ಸ್ ನ ಆರಂಭಿಕ ಪಂದ್ಯದಲ್ಲಿಬೆಲ್ಜಿಯಂನ ಜೂಲಿಯನ್ ಕ್ಯಾರಾಗ್ಗಿ ಅವರನ್ನು ಎದುರಿಸಲಿದ್ದಾರೆ.