* ಸಂಸದ ಈ.ತುಕಾರಾಮ್ ಹೇಳಿಕೆನಾರಿಹಳ್ಳ ಬಳಿ 12 ಕೋಟಿಯಲ್ಲಿಬೃಂದಾವನ
ವಿಕ ಸುದ್ದಿಲೋಕ ಸಂಡೂರು
‘‘ಯೋಗ ಮತ್ತು ಪೌಷ್ಟಿಕ ಆಹಾರದಿಂದ ಆರೋಗ್ಯ ಭಾಗ್ಯ ಸಿಗುತ್ತದೆ. ಆದ್ದರಿಂದ ಯೋಗಾಭ್ಯಾಸ ಎಲ್ಲರಿಗೂ ಅಗತ್ಯವಾಗಿದೆ,’’ ಎಂದು ಸಂಸದ ಈ.ತುಕಾರಾಮ್ ಹೇಳಿದರು.
ಪಟ್ಟಣದ ಬಾಲಕಿಯರ ಸರಕಾರಿ ಪ್ರೌಢಶಾಲೆ ಆವರಣದಲ್ಲಿಸ್ಕಂದಸಿರಿ ಯೋಗ ಕೇಂದ್ರದ ದಶಮಾನೋತ್ಸವ ಕಾರ್ಯಕ್ರಮದಲ್ಲಿಮಾತನಾಡಿದರು.
‘‘ಪಟ್ಟಣದಲ್ಲಿ30 ಕೋಟಿ ರೂ.ಬಸ್ ನಿಲ್ದಾಣ ನಿರ್ಮಿಸಲು ಸರಕಾರ ಒಪ್ಪಿದೆ. ಈ ಶಾಲೆಯ ಮೈದಾನವನ್ನು 40-60 ಲಕ್ಷ ರೂ.ವೆಚ್ಚದಲ್ಲಿಒಳಾಂಗಣ ಕ್ರೀಡಾಂಗಣ ಮಾಡುವೆ, ಯೋಗ ಕೇಂದ್ರಕ್ಕೆ ಡಿಜಿಟಲ್ ಟಚ್ ಕೊಡಲಾಗುತ್ತದೆ. ನಾರಿಹಳ್ಳ ಜಲಾಶಯದ ಬಳಿ 12 ಕೋಟಿ ರೂ.ವೆಚ್ಚದಲ್ಲಿಬೃಂದಾವನ, ಆಡಿಟೋರಿಯಂ, ಹಗರಿಬೊಮ್ಮನಹಳ್ಳಿಯಲ್ಲಿ1.50 ಕೋಟಿ ರೂ.ವೆಚ್ಚದಲ್ಲಿಕಲ್ಯಾಣ ಮಂಟಪ ನಿರ್ಮಿಸಲಾಗುತ್ತದೆ,’’ ಎಂದರು.
ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಪ್ರಭು ಸ್ವಾಮೀಜಿ ಮಾತನಾಡಿ, ‘‘ಯೋಗಜ್ಞಾನವನ್ನು ವಿಶ್ವ ಸಂಸ್ಥೆ, ಆಯುರ್ವೇದವನ್ನು ಜಗತ್ತು ಒಪ್ಪಿದೆ. ಯೋಗದಿಂದ ಸಹಜವಾಗಿ ಆರೋಗ್ಯ ಹೊಂದಬಹುದಾಗಿದೆ. ಯೋಗ ಪ್ರತಿದಿನದ ಭಾಗವಾಗಬೇಕು, ಬಿಕೆಎಸ್ ಅಯ್ಯಂಗಾರ್ , ಮಲ್ಲಾರಹಳ್ಳಿ ರಾಘವೇಂದ್ರ, ಸಣ್ಣ ಯಲಿಯಪ್ಪ ರಾಜ್ಯ ಸೇರಿ ರಾಷ್ಟ್ರೀಯ ಮಟ್ಟದಲ್ಲಿಯೋಗವನ್ನು ಕಟ್ಟಿ ಬೆಳೆಸಿದರು, ಇದೀಗ ಪಾಶ್ಚಿಮಾತ್ಯರೂ ಯೋಗದ ಕಡೆಗೆ ವಾಲುತ್ತಿದ್ದಾರೆ,’’ ಎಂದರು.
ಸ್ಕಂದಗಿರಿ ಯೋಗ ಕೇಂದ್ರದ ಷಣ್ಮುಖಸ್ವಾಮಿ ಕೇಂದ್ರ ಬೆಳೆದುಬಂದ ದಾರಿ, ಮಾಡಿದ ಸಮಾಜ ಸೇವೆಯನ್ನು ವಿವರಿಸಿದರು.
ಬೆಂಗಳೂರಿನ ಯೋಗಕ್ಷೇಮ ಧಾಮದ ಸಂಸ್ಥಾಪಕ ವಿರೂಪಾಕ್ಷ ಬೆಳವಾಡಿ, ಕೊಟ್ಟೂರಿನ ಜಾಗಟಗೇರಿ ಆನಂದ ಯೋಗ ಟ್ರಸ್ಟ್ ನ ಮಂಜುನಾಥ ಗುರೂಜಿ, ಬೆಂಗಳೂರಿನ ಆದಿತ್ಯ ಯೋಗ ಕುಟೀರದ ನಾಗೇಶ ಶರ್ಮಾ ಅವರು ಯೋಗದ ಮಹತ್ವವನ್ನು ವಿವರಿಸಿದರು.
ತಹಸೀಲ್ದಾರ್ ಜಿ.ಅನಿಲ್ ಕುಮಾರ್ , ತಾಲೂಕು ಕಸಾಪ ಅಧ್ಯಕ್ಷ ಡಾ.ಬಿ.ನಾಗನಗೌಡ, ವೆಸ್ಕೊ ಸಂಸ್ಥೆಯ ಶಶಿಧರ ಮಂದಾಲ್ , ಸ್ಕಂದಗಿರಿ ಯೋಗ ಕೇಂದ್ರದ ಗುರು ಟಿ.ಶ್ರೀನಿವಾಸ ಸೇರಿದಂತೆ ಇತರರು ಇದ್ದರು.
ಬಿಎಲ್ ವೈ 22 ಎಸ್ಡಿಆರ್ 1:
ಸಂಡೂರಿನ ಬಾಲಕಿಯರ ಸರಕಾರಿ ಪ್ರೌಢಶಾಲೆ ಆವರಣದಲ್ಲಿಸ್ಕಂದಸಿರಿ ಯೋಗ ಕೇಂದ್ರದ ದಶಮಾನೋತ್ಸವದಲ್ಲಿಭಾಗಿಯಾಗಿದ್ದ ಯೋಗ ಸಾಧಕರು.