ಕೃಷಿ ಹೊಂಡಗಳ ಪರಿಶೀಲನೆ ನಡೆಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಪಿ.ಚಂದ್ರಪ್ಪ ಸಲಹೆ
ವಿಕ ಸುದ್ದಿಲೋಕ ಮಾಲೂರುಸುರಕ್ಷತೆಯ ದೃಷ್ಟಿಯಿಂದ ಕೃಷಿ ಹೊಂಡಗಳಿಗೆ ರೈತರು ತಂತಿ ಬೇಲಿ ಅಳವಡಿಸಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಪಿ.ಚಂದ್ರಪ್ಪ ತಿಳಿಸಿದ್ದಾರೆ.
ತಾಲೂಕಿನ ಲಕ್ಕೂರು ಗ್ರಾಮದ ರೈತರು ತಮ್ಮ ಜಮೀನಿನಲ್ಲಿಕೃಷಿ ಇಲಾಖೆಯ ಆರ್ಥಿಕ ಸಹಕಾರದಿಂದ ನಿರ್ಮಿಸಿಕೊಂಡಿರುವ ಕೃಷಿ ಹೊಂಡ ಇರುವ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿ ಸುರಕ್ಷತೆಗಾಗಿ ತಂತಿ ಬೇಲಿ ನಿರ್ಮಿಸಿಕೊಳ್ಳುವಂತೆ ಜಾಗೃತಿ ಮೂಡಿಸಿ ಮಾತನಾಡಿದರು. ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಿಸಲು ಕೃಷಿ ಇಲಾಖೆಯಿಂದ ಸಹಾಯಧನ ನೀಡಲಾಗುತ್ತಿದೆ. ಕೃಷಿ ಹೊಂಡಗಳಿಗೆ ತಂತಿಬೇಲಿ ಅಳವಡಿಸುವುದು ಕಡ್ಡಾಯ. ತಾಲೂಕಿನಲ್ಲಿ2023-24ರಿಂದ 2025-26ರ ವರೆಗೆ ಒಟ್ಟು 319 ಕೃಷಿ ಗೊಂಡಗಳನ್ನು ನಿರ್ಮಿಸಲಾಗಿದೆ. ರೈತರ ಹೊಲಕ್ಕೆ ಇಲಾಖೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಮನವೊಲಿಸಿ ಕೃಷಿ ಹೊಂಡಗಳಿಗೆ ತಂತಿ ಬೇಲಿ ನಿರ್ಮಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಒಂದು ತಿಂಗಳಲ್ಲಿಶ್ರಮವಹಿಸಿ ಶೇ.80ಪೂರ್ಣಗೊಂಡಿದೆ. ಉಳಿದ ಫಲಾನುಭವಿಗಳು ತಂತಿ ಬೇಲಿ ನಿರ್ಮಿಸಲು ಬೇಕಾಗುವ ಕಂಬ ಮತ್ತು ಮುಳ್ಳುತಂತಿಯನ್ನು ಖರೀದಿಸಿದ್ದಾರೆ. ಎಲ್ಲಾಕಾಮಗಾರಿಗಳು ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿಇಲಾಖೆಯಿಂದ ಸಹಾಯಧನ ಪಡೆದ ಎಲ್ಲಾಕೃಷಿ ಹೊಂಡಗಳಿಗೆ ತಂತಿ ಬೇಲಿ ಅಳವಡಿಕೆ ಮುಕ್ತಾಯಗೊಳ್ಳಲಿದೆ. ಕೃಷಿ ಹೊಂಡದಲ್ಲಿಹಗ್ಗಗಳನ್ನು ಇಳಿಬಿಡುವುದು, ಗಾಳಿ ತುಂಬಿದ ಟ್ಯೂಬ್ ಗಳನ್ನು ತೇಲಿಬಿಡುವುದು ಮಾಡುವುದರಿಂದ ಸಾವು ನೋವುಗಳು ತಡೆಯಬಹುದು ಎಂದು ಹೇಳಿದರು.
ಕಡಲೆಕಾಯಿ ಬಿತ್ತನೆ : ಮುಂಗಾರು ಮಳೆ ಸಾಧಾರಣವಾಗಿ ಆಗುತ್ತಿರುವುದರಿಂದ ರೈತರು ತಮ್ಮ ಜಮೀನುಗಳಲ್ಲಿಉಳುಮೆ ಮಾಡಿ ಹದ ಮಾಡಿಕೊಂಡು ಕಡಲೆ ಕಾಯಿ ಬಿತ್ತನೆ ಮಾಡುತ್ತಿದ್ದಾರೆ. ಟೇಕಲ್ ಹಾಗೂ ಮಾಸ್ತಿ ಹೋಬಳಿಗಳಲ್ಲಿಮಳೆಗಾಗಿ ಕಾಯುತ್ತಿದ್ದು ಎರಡು ದಿನಗಳಿಂದ ಸಾಧಾರಣವಾಗಿ ಆಗುತ್ತಿರುವುದರಿಂದ ರೈತರು ತಮ್ಮ ಜಮೀನುಗಳ ಕಡೆ ಮುಖ ಮಾಡಿದ್ದು ಹಳೆಯ ಬೇಸಾಯ ಪದ್ಧತಿ ಅಳವಡಿಸಿಕೊಂಡು ರೈತರು ಎತ್ತುಗಳ ಮೂಲಕ ಉಳುಮೆಮಾಡಿ ತಮ್ಮ ಕೃಷಿ ಚಟುವಟಿಕೆಯಲ್ಲಿತೊಡಗಿಸಿಕೊಂಡು ಕಡಲೆಕಾಯಿ ಬಿತ್ತನೆ ಮಾಡುತ್ತಿದ್ದಾರೆ. ಕೃಷಿ ಇಲಾಖೆಯ ಸಂಪರ್ಕ ಕೇಂದ್ರಗಳಲ್ಲಿಲಭ್ಯವಿರುವ ಬಿತ್ತನೆ ಬೀಜಗಳು, ಪೋಷಕಾಂಶ ಗೊಬ್ಬರಗಳನ್ನು ಪಡೆದು ಸಕಾಲಕ್ಕೆ ಬಿತ್ತನೆ ಕಾರ್ಯ ಕೈಗೊಳ್ಳುವಂತೆ ತಿಳಿಸಿದ್ದಾರೆ.
22 ಮಾಲೂರು ಫೋಟೋ 1 ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ ರೈತರ ಜಮೀನಿನಲ್ಲಿರುವ ಕೃಷಿ ಹೊಂಡಕ್ಕೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಪಿ.ಚಂದ್ರಪ್ಪ ಭೇಟಿ ನೀಡಿ ವೀಕ್ಷಿಸಿ ತಂತಿ ಬೇಲಿ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರು.