ಆರೋಗ್ಯ, ಏಕಾಗ್ರತೆಗೆ ಯೋಗ ಅವಶ್ಯ

Contributed byckganappanavar@gmail.com|Vijaya Karnataka
development of health and concentration through yoga
ಆರೋಗ್ಯ , ಏಕಾಗ್ರತೆಗೆ ಯೋಗ ಅವಶ್ಯ

ವಿಕ ಸುದ್ದಿಲೋಕ ಮುಂಡರಗಿ
ಯೋಗವು ಕೇವಲ ದೈಹಿಕ ಕಸರತ್ತು ಅಲ್ಲ, ಮನಸ್ಸು ಮತ್ತು ಶರೀರ ಸಮತೋಲನ ಕಾಯ್ದುಕೊಳ್ಳುವ ಶಕ್ತಿಯಾಗಿದೆ ಎಂದು ಹಿರಿಯ ಯೋಗ ಸಾಧಕ ಕರಬಸಪ್ಪ ಹಂಚಿನಾಳ ಹೇಳಿದರು.

ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೋಗ ಅನ್ಮೋಲ ಕೇಂದ್ರ ಆಶ್ರಯದಲ್ಲಿನಡೆದ 12ನೇ ಅಂತಾರಾಷ್ಟ್ರೀಯ ಯೋಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊಬೈಲ್ ಮತ್ತು ತಂತ್ರಜ್ಞಾನದ ಬದುಕಿನಲ್ಲಿಒತ್ತಡ ನಿವಾರಣೆಗೆ ನಿತ್ಯ 15 ರಿಂದ 20 ನಿಮಿಷ ತಪ್ಪದೆ ಯೋಗ ಪ್ರಾಣಾಯಾಮ ಮಾಡುವುದರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ. ಇದು ನಿತ್ಯದ ಯೋಗಾಸನವಾಗಬೇಕು ಎಂದರು.

ಅಶೋಕ ಹುಬ್ಬಳ್ಳಿ, ಡಾ.ಡಿ.ಸಿ.ಮಠದ, ಎಂ.ಟಿ.ಮಾಳಾಪೂರ, ಮಂಜುನಾಥ ಹಂಚಿನಾಳ, ಎಸ್ ಡಿಎಂಸಿ ಸದಸ್ಯರು, ಶಿಕ್ಷಕರು ಇತರರು ಉಪಸ್ಥಿತರಿದ್ದರು. ನಿಯಮಿತ ಯೋಗಾಭ್ಯಾಸ ಮಾಡುವವರನ್ನು ಸನ್ಮಾನಿಸಲಾಯಿತು. ಎಸ್ ಡಿಎಂಸಿ ಅಧ್ಯಕ್ಷ ಉಮೇಶ ದಂಡಿನ ಅಧ್ಯಕ್ಷತೆ ವಹಿಸಿದ್ದರು.

ಪ್ರಗು ಡಾ.ನಿಂಗು ಸೊಲಗಿ ಯೋಗ ದಿನಾಚರಣೆ ಮಹತ್ವ ಅದರಿಂದಾಗು ಪ್ರಯೋಜನ ಕುರಿತು ವಿವರಿಸಿದರು. ಬಿ.ಎಚ್ .ಹಲವಾಗಲಿ ಸ್ವಾಗತಿಸಿದರು. ಎಂ.ಆರ್ .ಗುಗ್ಗರಿ ನಿರೂಪಿಸಿದರು. ಪಿ.ಆರ್ .ಗಡಾದ ವಂದಿಸಿದರು. ಅನಿತಾ ಝಳಕಿ, ಶಿವಲೀಲಾ ಅಬ್ಬಿಗೇರಿ ಅವರು ಕಲಾತ್ಮಕ ಯೋಗ ಪ್ರದರ್ಶಿಸಿದರು.

ಪೋಟೊ: 22ಎಂಡಿಆರ್ 1:

ಮುಂಡರಗಿ ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಕರಬಸಪ್ಪ ಹಂಚಿನಾಳ ಉದ್ಘಾಟಿಸಿದರು.