ಜಮೀನಿನಲ್ಲಿಕಾವಲು ಕಾಯುತ್ತಿದ್ದ ರೈತನ ಮೇಲೆ ಕಾಡುಹಂದಿ ದಾಳಿ ನಡೆಸಿ, ಗಾಯಗೊಂಡಿರುವ ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.ತಾಲೂಕಿನ ಹಳೇಹೆಗ್ಗುಡಿಲು ಗ್ರಾಮದ ಸುರೇಶ್ ಎಂಬುವವರು ಕಾಡುಹಂದಿಯಿಂದ ದಾಳಿಗೊಳದವರು. ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಸಮೀಪದ ಜಮೀನಿನಲ್ಲಿಮೆಕ್ಕೆಜೋಳ ಬಿತ್ತನೆ ಮಾಡಿದ್ದು, ತೆನೆ ಕಚ್ಚುವ ಹಂತದಲ್ಲಿವೆ. ಆದರೆ, ಜಮೀನಿನಲ್ಲಿಕಾಡುಪ್ರಾಣಿಗಳ ಹಾವಳಿ ಜೋರಾಗಿದೆ. ಇದನ್ನು ನಿಯಂತ್ರಿಸಲು ನಿತ್ಯ ಕಾವಲು ಕಾಯುತ್ತಿದ್ದಾರೆ. ಸೋಮವಾರ ಬೆಳಗ್ಗೆ ಜಮೀನಿನತ್ತ ಹೋಗಿದ್ದಾಗ ಜಮೀನಿನಲ್ಲಿಮೆಕ್ಕೆಜೋಳ ಮೇಯುತ್ತಿದ್ದ ಕಾಡುಹಂದಿ ಸುರೇಶ್ ಅವರ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಸುರೇಶ್ ತೊಡೆಯ ಭಾಗಕ್ಕೆ ಪೆಟ್ಟಾಗಿದ್ದು, ರಕ್ತಸ್ರಾವವಾಗಿದೆ ಎನ್ನಲಾಗಿದೆ. ಕೂಡಲೇ ಗ್ರಾಮಸ್ಥರು ಸುರೇಶ್ ಅವರನ್ನು ಕರೆತಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿ ಕಾರಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕಾಡುಪ್ರಾಣಿ ಹಾವಳಿ ತಡೆಗಟ್ಟಿ: ತಾಲೂಕಿನ ಹಳೇಹೆಗ್ಗುಡಿಲು, ಹಳೆಯೂರು, ದಡದಹಳ್ಳಿ ಸೇರಿದಂತೆ ಕಾಡಂಚಿನ ಗ್ರಾಮಗಳ ಜಮೀನಿನಲ್ಲಿಬೆಳೆಯಲಾದ ಬೆಳೆಗಳನ್ನು ಕಾಡುಪ್ರಾಣಿಗಳು ದಾಳಿ ನಡೆಸಿ, ತಿಂದು ಹಾಳು ಮಾಡುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ರಾತ್ರಿ ಕಾವಲು ಕಾಯುತ್ತಿಲ್ಲ. ಒಂದೆಡೆ ಕುಳಿತು ಕಾವಲು ಕಾಯುವುದಾಗಿ ಸಾಬೂಬು ಹೇಳುತ್ತಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಬೇಕು. ಇದಲ್ಲದೆ ಮೊಳೆಯೂರು ವಲಯ ಅರಣ್ಯ ಪ್ರದೇಶದ ಗೂಳುಮುಂಟಿಯಿಂದಲೂ ನಾಲ್ಕೈದು ಕಾಡಾನೆಗಳು ಬರುತ್ತಿವೆ. ಇಲಾಖೆ ಕಾಡುಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪೋಟೋ ಕ್ಯಾಪ್ಶನ್ ...
ಎಂವೈಎಸ್ ಎಸ್ ಆರ್ ಜಿ ನ್ಯೂಸ್ 22-6-2026(1)
ಸರಗೂರು ತಾಲೂಕಿನ ಹಳೇಹೆಗ್ಗುಡಿಲು ಗ್ರಾಮದ ಸುರೇಶ್ ಎಂಬವರ ಮೇಲೆ ಕಾಡುಹಂದಿ ದಾಳಿ ನಡೆಸಿ, ಗಾಯಗೊಳಿಸಿರುವುದು.