ನ್ಯಾನೊ ಗೊಬ್ಬರ, ಡ್ರೋಣ್ ಬಳಸಿ

Contributed byvkhdlreporter@gmail.com|Vijaya Karnataka
usage of nano fertilizer and drones in agriculture guidance for farmers
ನ್ಯಾನೊ ಗೊಬ್ಬರ , ಡ್ರೋಣ್ ಬಳಸಿ

ವಿಕ ಸುದ್ದಿಲೋಕ ಹೂವಿನಹಡಗಲಿ
ಪಟ್ಟಣದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಕೃಷಿ ಇಲಾಖೆ , ಕೋರಮಂಡಲ್ ಇಂಟರ್ ನ್ಯಾಷನಲ್ ಕಂ.ಲಿ., ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಯೋಗದಿಂದ ಕೃಷಿಯಲ್ಲಿನ್ಯಾನೊ ರಸಗೊಬ್ಬರ ಮತ್ತು ಡ್ರೋಣ್ ಬಳಕೆ ಕುರಿತು ವಿಚಾರ ಸಂಕಿರಣ ಸೋಮವಾರ ನಡೆಯಿತು.

ಈ ವೇಳೆ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಕೆ.ಟಿ., ‘‘ಕೃಷಿಯಲ್ಲಿನ್ಯಾನೊ ಯೂರಿಯಾ,ಡಿಎಪಿ ಇತರ ರಸಗೊಬ್ಬರ ಬಳಕೆ ಮಾಡಿಕೊಳ್ಳಬಹುದಾಗಿದೆ. ಇತ್ತೀಚೆಗೆ ರೈತರು ರಸಗೊಬ್ಬರದ ಮೇಲೆ ಹೆಚ್ಚು ಅವಲಂಬನೆಯಾಗಿದ್ದು, ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿಸರಕಾರ ಮತ್ತು ಕಂಪನಿಗಳು ನ್ಯಾನೊ ರಸಗೊಬ್ಬರ ಉತ್ಪಾದಿಸಿ ರೈತರಿಗೆ ನೆರವಾಗುತ್ತಿವೆ. ನ್ಯಾನೊ ರಸಗೊಬ್ಬರ ಮೂಲ ಗೊಬ್ಬರಗಳಿಗಿಂತ ಹೆಚ್ಚು ಫಲವತ್ತತೆ ಕೊಡುತ್ತವೆ. ಆದ್ದರಿಂದ ರೈತರು ನ್ಯಾನೊ ಗೊಬ್ಬರ ಬಳಕೆ ಮಾಡಬೇಕು,’’ ಎಂದು ಸಲಹೆ ನೀಡಿದರು.

ಮಿಶ್ರ ಬೆಳೆ ಬೆಳೆಯಿರಿ:

ಕೃಷಿ ವಿಜ್ಞಾನಿ ಡಾ.ಸಿಎಂ.ಕಾಲಿಬಾವಿ ಮಾತನಾಡಿ, ‘‘ಕೃಷಿಯಲ್ಲಿರೈತರು ಒಂದೇ ಬೆಳೆ ಮೇಲೆ ಅವಲಂಬಿತರಾಗದೆ ಪರ್ಯಾಯ ಮತ್ತು ಮಿಶ್ರ ಬೆಳೆ ಬೆಳೆಯಬೇಕಿದೆ.ಇದರಿಂದ ಒಂದು ಬೆಳೆ ಕೈಕೊಟ್ಟರೆ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಇದರಿಂದ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗುತ್ತದೆ,’’ ಎಂದರು.

ಹಿರಿಯ ಬೇಸಾಯ ತಜ್ಞ ಕಿರಣ್ ಕುಮಾರ್ ನ್ಯಾನೊ ರಸಗೊಬ್ಬರ ಮತ್ತು ಡ್ರೋಣ್ ಬಳಕೆ ಕುರಿತು ಮಾಹಿತಿ ನೀಡಿದರು. ಎಸ್ .ಕಳಸದಮಠ, ಕರ್ಣಂ ವೀರೇಶ, ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಿಜ್ಞಾನಿಗಳು , ತಾಲೂಕಿನ ರೈತ ಸಂಘದ ಪದಾಧಿಕಾರಿಗಳು, ರೈತರು ಪಾಲ್ಗೊಂಡಿದ್ದರು.

ಚಿತ್ರ:ವಿಎನ್ ಆರ್ 22ಎಚ್ ಡಿಎಲ್ ಪಿ6-ಹೂವಿನಹಡಗಲಿಯಲ್ಲಿನ್ಯಾನೊ ರಸಗೊಬ್ಬರ ಮತ್ತು ಡ್ರೋಣ್ ಬಳಕೆ ಕುರಿತು ವಿಚಾರ ಸಂಕಿರಣ ಮತ್ತು ರೈತರಿಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು.