ವಿಕ ಸುದ್ದಿಲೋಕ ವಿಜಯಪುರ.ಆರೋಗ್ಯವೇ ಮಾನವನ ಜೀವನದ ಅತ್ಯಂತ ಅಮೂಲ್ಯವಾದ ಸಂಪತ್ತು. ಉತ್ತಮ ಆರೋಗ್ಯವಿಲ್ಲದೆ ಬದುಕಿನಲ್ಲಿಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲಎಂದು ಶ್ರೀಸಾಯಿ ಜ್ಞಾನಗಂಗಾ ಎಜುಕೇಷನ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಮಂಜುನಾಥ್ ಹೇಳಿದರು.
ಶ್ರೀಸಾಯಿ ಜ್ಞಾನಗಂಗಾ ಎಜುಕೇಷನ್ ಚಾರಿಟಟೆಬಲ್ ಟ್ರಸ್ಟ್ ಶ್ರೀಸಾಯಿ ಶಿಕ್ಷಣ ಸಮೂಹ ಸಂಸ್ಥೆಗಳು, ಇವರ ವತಿಯಿಂದ ಶ್ರೀಸಾಯಿ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಟ್ರಸ್ಟ್ ಕೇವಲ ಶಿಕ್ಷಣ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ ಆರೋಗ್ಯ, ಕಾನೂನು ಅರಿವು, ಮಹಿಳಾ ಸಬಲೀಕರಣ ಹಾಗೂ ಯುವಜನರ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಮತ್ತು ಆರೋಗ್ಯದ ಸೌಲಭ್ಯಗಳು ತಲುಪಬೇಕು ಎಂಬ ದೃಢ ಸಂಕಲ್ಪ ನಮ್ಮದಾಗಿದೆ ಎಂದರು.
ಶಿಬಿರದಲ್ಲಿಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯ ದಂತ ಶಸ್ತ್ರಚಿಕಿತ್ಸಕ ಡಾ.ದೀಕ್ಷಿತ್ ಕುಮಾರ್ .ಎಂ.ಆರ್ . ವೈದ್ಯ ಡಾ.ದಿಲೀಪ್ ಕುಮಾರ್ ಹಾಗೂ ನರ್ಸಿಂಗ್ ಅಧಿಕಾರಿ ಪ್ರದೀಪ್ ಕುಮಾರ್ ಸಿ. ಅವರು ಪಾಲ್ಗೊಂಡು ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸೇವೆ ಹಾಗೂ ಮಾರ್ಗದರ್ಶನ ನೀಡಿದರು.
ಶಿಬಿರದಲ್ಲಿಭಾಗವಹಿಸಿದ್ದವರಿಗೆ ರಕ್ತದೊತ್ತಡ ಮಧುಮೇಹ, ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ದಂತ ಆರೋಗ್ಯ ತಪಾಸಣೆ ನಡೆಸಿದರು.
ವಿಶ್ವನಾಥ್ ಗೌಡ, ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಮುರಳೀಧರ್ , ಶ್ರೀಸಾಯಿ ಜ್ಞಾನಗಂಗಾ ಪಿಯು ಕಾಲೇಜು ಪ್ರಾಂಶುಪಾಲ ನಾರಾಯಣಸ್ವಾಮಿ.ಬಿ.ಕೆ,ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರದೀಪ್ .ಎಸ್ .ಎಸ್ . ಶ್ರೀಸಾಯಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸದಾಶಿವ ಕಾಂಬ್ಳೆ ಹಾಜರಿದ್ದರು.
22.ವಿಜಯಪುರ 03: ವಿಜಯಪುರ ಹೋಬಳಿ ನಾರಾಯಣಪುರದ ಶ್ರೀ ಸಾಯಿ ಜ್ಞಾನಗಂಗಾ ಕಾಲೇಜಿನಲ್ಲಿಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ, ವಿದ್ಯಾರ್ಥಿಗಳು ತಪಾಸಣೆ ಮಾಡಿಸಿಕೊಂಡರು.