ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ: ಅಂಬೇಡ್ಕರ್ ವೇದಿಕೆ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ಆರೋಪ
ವಿಕ ಸುದ್ದಿಲೋಕ ಬೂದಿಕೋಟೆ ದೆಬ್ಬನಹಳ್ಳಿ ಗ್ರಾಮದಲ್ಲಿವ್ಯವಸಾಯಕ್ಕಾಗಿ ವಾರಕ್ಕೆ ನೀಡಿದ್ದ ಜಮೀನನ್ನು ವಾಪಸ್ ನೀಡದೆ ಕೃಷ್ಣಪ್ಪ ಎಂಬುವರು ಮುನಿಯಪ್ಪ ಬಿನ್ ಶಂಕರಪ್ಪನವರಿಗೆ ಒಂದು ಎಕರೆ ಜಮೀನನ್ನು ವಾಪಸ್ ನೀಡದೆ ವಂಚನೆ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲಎಂದು ಅಂಬೇಡ್ಕರ್ ವೇದಿಕೆ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ಆರೋಪಿಸಿದರು.
ತಾಲೂಕಿನ ದೆಬ್ಬನಹಳ್ಳಿ ಗ್ರಾಮದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಬ್ಬನಹಳ್ಳಿ ಗ್ರಾಮದ ಮುನಿಯಪ್ಪ ಬಿನ್ ಶಂಕರಪ್ಪನವರಿಗೆ 1992ರಲ್ಲಿದೆಬ್ಬನಹಳ್ಳಿ ಗ್ರಾಮದ ಸರ್ವೆ ನಂಬರ್ 27ರಲ್ಲಿದರಕಾಸು ಸಭೆಯಲ್ಲಿಸರಕಾರದಿಂದ ಒಂದು ಎಕರೆ 30 ಗುಂಟೆ ಮಂಜೂರಾತಿ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಇದೇ ಗ್ರಾಮದ ಕೃಷ್ಣಪ್ಪ ಎಂಬುವರಿಗೆ ವ್ಯವಸಾಯಕ್ಕಾಗಿ ವಾರಕ್ಕೆ ಎಂದು ಒಂದು ಎಕರೆ ನೀಡಿದ್ದಾರೆ. ಆದರೆ ಕೃಷ್ಣಪ್ಪ ಎಂಬುವರು ಭೂಮಿಯನ್ನು ಬಿಟ್ಟುಕೊಡಲು ನಿರಾಕರಿಸುತ್ತಿದ್ದಾರೆ.
ಮತ್ತೊಂದು ಕಡೆ ಕೃಷ್ಣಪ್ಪ ಎಂಬವರು ಗುಂಪು ಕಟ್ಟಿಕೊಂಡು ಬಂದು ದಲಿತ ಸಮುದಾಯದ ಬಡ ರೈತರ ಮೇಲೆ ಹಲ್ಲೆಮಾಡಿ ದೌರ್ಜನ್ಯ ಮಾಡುತ್ತಿದ್ದಾರೆ. ಬೂದಿಕೋಟೆ ಪೊಲೀಸ್ ಠಾಣೆಯಲ್ಲಿದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಬೇಸರದ ಸಂಗತಿ. ಎಲ್ಲಾದಾಖಲೆಗಳು ಸರಿಯಾಗಿದ್ದರೂ ಇವರಿಗೆ ನ್ಯಾಯ ದೊರಕುತ್ತಿಲ್ಲ. ಇದನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು.
ನ್ಯಾಯಕ್ಕಾಗಿ ಉಗ್ರ ಹೋರಾಟದ ಎಚ್ಚರಿಕೆ: ಈ ಕೂಡಲೇ ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ದಾಖಲೆಗಳನ್ನು ಪರಿಶೀಲಿಸಿ ಶಂಕರಪ್ಪ ಎಂಬುವರಿಗೆ ನ್ಯಾಯವನ್ನು ದೊರಕಿಸಿಕೊಡಬೇಕು. ಇಲ್ಲವಾದ ಪಕ್ಷದಲ್ಲಿಮುಂದಿನ ದಿನಗಳಲ್ಲಿಉಗ್ರ ಹೋರಾಟವನ್ನು ಅಂಬೇಡ್ಕರ್ ವೇದಿಕೆ ಕರ್ನಾಟಕ ಸಂಘಟನೆ ವತಿಯಿಂದ ಹಮ್ಮಿಕೊಳ್ಳುತ್ತವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮೊಮ್ಮಗ ಅಂಬರೀಷ್ ಮಾತನಾಡಿ, ಎರಡು ವರ್ಷಗಳ ಹಿಂದೆ ದೆಬ್ಬನಹಳ್ಳಿ ಗ್ರಾಮದ ಕೃಷ್ಣಪ್ಪ ಎಂಬುವರಿಗೆ ವ್ಯವಸಾಯಕ್ಕಾಗಿ ಒಂದು ಎಕರೆ ಜಮೀನು ನೀಡಿದ್ದೇವೆ. ಆದರೆ ಇಂದು ನಮ್ಮ ಜಮೀನನ್ನು ನಮಗೆ ಬಿಟ್ಟುಕೊಡಲು ನಿರಾಕರಿಸಿ ನಮ್ಮ ಮೇಲೆ ದೊಣ್ಣೆಗಳಿಂದ ಹಾಗೂ ಮಚ್ಚುಗಳು ಹಿಡಿದು ಹಲ್ಲೆಮಾಡಲು ಬರುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಹಾಗೆ ಪೊಲೀಸ್ ಠಾಣೆಯಲ್ಲಿದೂರು ನೀಡಿದರೂ ಪ್ರಯೋಜನವಾಗಿಲ್ಲ. ರಕ್ಷಣೆ ಕೊಡಬೇಕಾದ ಪೊಲೀಸರು ಸುಮ್ಮನೆ ಕುಳಿತಿರುವುದು ಬಹಳ ದುಃಖಕರ ಸಂಗತಿ ಆಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿಅಂಬೇಡ್ಕರ್ ಯುವ ಘಟಕ ಜಿಲ್ಲಾಧ್ಯಕ್ಷ ಸಂಜು, ಅಂಬೇಡ್ಕರ್ ವೀರಸೇನೆ ಸಂಸ್ಥಾಪಕ ಅಧ್ಯಕ್ಷ ಅರುಣ್ , ದಲಿತ ಮುಖಂಡರಾದ ಅಶೋಕ್ , ಮುನಿ ವೆಂಕಟಪ್ಪ, ಮುನಿಯಪ್ಪ, ಶಿವಶಂಕರ್ , ಸಂತೋಷ್ , ವೆಂಕಟಮ್ಮ, ಸರಿತಾ, ಸ್ವಾತಿ ಹಾಗೂ ಗ್ರಾಮಸ್ಥರು ಇದ್ದರು.
22ಬೂದಿಕೋಟೆ ಚಿತ್ರ 1: ಬೂದಿಕೋಟೆ ಹೋಬಳಿಯ ದೆಬ್ಬನಹಳ್ಳಿ ಗ್ರಾಮದಲ್ಲಿಅಂಬೇಡ್ಕರ್ ವೇದಿಕೆ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ಸುದ್ದಿಗಾರರೊಂದಿಗೆ ಮಾತನಾಡಿದರು.