ವಿದ್ಯಾಭ್ಯಾಸಕ್ಕೆ ತಕ್ಕಂತೆ ಒಂದು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬುದು ಪ್ರತಿಯೊಬ್ಬರ ಕನಸು. ಓದುವ ಹಂತದಲ್ಲೇ ಉದ್ಯೋಗ ಒದಗಿಸುವ ಮೂಲಕ ಆ ಕನಸನ್ನು ನನಸು ಮಾಡುವ ಮೂಲಕ ಚೆನ್ನೈಸ್ ಅಮಿರ್ತಾ ಗ್ರೂಪ್ ಆಫ್ ಇನ್ಸ್ ಟಿಟ್ಯೂಶನ್ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟಿದೆ. ಹೋಟೆಲ್ ಮ್ಯಾನೇಜ್ ಮೆಂಟ್ , ಏವಿಯೇಷನ್ ಕೋರ್ಸ್ ಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕುತ್ತಿರುವ ಚೆನ್ನೈಸ್ ಅಮಿರ್ತಾ ಗ್ರೂಪ್ ಆಫ್ ಇನ್ಸ್ ಟಿಟ್ಯೂಶನ್ ಈ ಬಾರಿಯ ವಿಕ ಹಾಗೂ ಬಿ.ಎಂ. ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ ಪಡೆದುಕೊಂಡಿದೆ.
2010ರಲ್ಲಿಭೂಮಿನಾಥನ್ ಅವರಿಂದ ಚೆನ್ನೈನಲ್ಲಿ ಆರಂಭವಾದ ಈ ಶಿಕ್ಷಣ ಸಂಸ್ಥೆ, ಈಗ 5 ಕ್ಯಾಂಪಸ್ ಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದೆ. 60-70 ವಿದ್ಯಾರ್ಥಿಗಳ ಮೂಲಕ ಆರಂಭವಾದ ಚೆನ್ನೈಸ್ ಅಮಿರ್ತಾ ವಿದ್ಯಾಸಂಸ್ಥೆ ಈವರೆಗೆ ಬರೋಬ್ಬರಿ 31,651 ವಿದ್ಯಾರ್ಥಿಗಳಿಗೆ ದೇಶ-ವಿದೇಶಗಳಲ್ಲಿಉದ್ಯೋಗ ಕಲ್ಪಿಸಿಕೊಟ್ಟಿದೆ. 2018ರಲ್ಲಿಬೆಂಗಳೂರಿನಲ್ಲಿಸ್ಥಾಪನೆಯಾದ ಕ್ಯಾಂಪಸ್ ನಲ್ಲಿಕೂಡ ಅತ್ಯುತ್ತಮ ಮೂಲಸೌಕರ್ಯ, ಉತ್ತಮ ಗುಣಮಟ್ಟದ ತರಬೇತಿ ಜತೆಗೆ, ಉದ್ಯಮಗಳ ಬೇಡಿಕೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕೆಲಸವಾಗುತ್ತಿದೆ. ಇದೇ ಶೈಕ್ಷಣಿಕ ವರ್ಷದಿಂದ ಬಹುಬೇಡಿಕೆಯಿರುವ ಲಾಜಿಸ್ಟಿಕ್ ಕೋರ್ಸ್ ನ್ನು ಕೂಡ ಆರಂಭಿಸಿದೆ.
ವಿದ್ಯಾಭ್ಯಾಸ ಮುಗಿದ ಬಳಿಕ ಕೆಲಸ ಸಿಗುತ್ತದೆಯೇ ? ಎಂಬ ಆತಂಕದಲ್ಲಿರುವ ಯುವಜನತೆಗೆ ಓದುವಾಗಲೇ ಪಾರ್ಟ್ ಟೈಮ್ ಉದ್ಯೋಗಕ್ಕೆ ಅವಕಾಶ ನೀಡುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಿ ರೂಪಿಸುವ ಕೆಲಸವನ್ನು ಚೆನ್ನೈಸ್ ಅಮಿರ್ತಾ ಸಮೂಹ ಸಂಸ್ಥೆ ಮಾಡುತ್ತಿದೆ. ಕೋರ್ಸ್ ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ಶೇ.100ರಷ್ಟು ಉದ್ಯೋಗ ಗ್ಯಾರಂಟಿಯ ಭರವಸೆ ನೀಡುವ ಮೂಲಕ ಚೆನ್ನೈಸ್ ಅಮಿರ್ತಾ, ಇತರೆ ವಿದ್ಯಾಸಂಸ್ಥೆಗಳಿಗಿಂತ ಭಿನ್ನ ಸ್ಥಾನ ಪಡೆದುಕೊಂಡಿದೆ. ಉದ್ಯೋಗಕ್ಕೆ ಸೇರಿದ ಬಳಿಕ ಉಂಟಾಗುವ ಸವಾಲುಗಳು, ಬೇರೆ ಕೆಲಸದ ಹಂಬಲ ಎಲ್ಲದಕ್ಕೂ ನೆರವು ನೀಡುವ ಮೂಲಕ ವಿದ್ಯಾರ್ಥಿಗಳ ಮನಗೆದ್ದಿದೆ.
ಹೋಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪಂಚತಾರಾ ಹೋಟೆಲ್ ಗಳಲ್ಲಿನ ಕೌಶಲಗಳನ್ನು ಪ್ರಾಯೋಗಿಕವಾಗಿ ಕಲಿಸುವ ಮೂಲಕ ಭವಿಷ್ಯದ ಉದ್ಯೋಗಕ್ಕೆ ಸಜ್ಜುಗೊಳಿಸುವ ಮೂಲಕ ಚೆನ್ನೈಸ್ ಅಮಿರ್ತಾ ವಿಶೇಷ ಸ್ಥಾನ ಪಡೆದುಕೊಂಡಿದೆ. ಚೆನ್ನೈನಲ್ಲಿರುವ ಕ್ಯಾಂಪಸ್ ನಲ್ಲಿಏವಿಯೇಷನ್ ಕೋರ್ಸ್ ಸೇರಿದ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ನಲ್ಲೇ ವಿಮಾನವನ್ನು ಇರಿಸಿ, ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. ಪೈಲೆಟ್ ಗಳ ಕಾರ್ಯನಿರ್ವಹಣೆ, ವಿಮಾನದ ಸಿಬ್ಬಂದಿಯ ಕೆಲಸದ ಕಾರ್ಯವೈಖರಿಗಳನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಬೋಧಿಸುವ ವ್ಯವಸ್ಥೆಯಿದೆ.
ಚೆನ್ನೈಸ್ ಅಮಿರ್ತಾ ಸಮೂಹ ಸಂಸ್ಥೆಯಲ್ಲಿಉದ್ಯಮಿಗಳು, ಕಂಪನಿಗಳ ತಜ್ಞರ ಜತೆ , ಚರ್ಚಿಸಿ ಪಠ್ಯಕ್ರಮ ಸಿದ್ಧಪಡಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿಉದ್ಯೋಗಕ್ಕೆ ಸಹಕಾರಿಯಾಗುವ ಮಾದರಿಯಲ್ಲೇ ಪಠ್ಯ ಅಳವಡಿಸಿಕೊಳ್ಳುವ ವ್ಯವಸ್ಥೆಯಿದೆ. ಪ್ರಸಿದ್ಧ ಹೋಟೆಲ್ ಗಳು, ವಿಮಾನಯಾನ ಸಂಸ್ಥೆಗಳಲ್ಲಿಕೆಲಸ ಮಾಡಿದ ಅನುಭವವಿರುವ ನುರಿತ ಬೋಧಕರಿದ್ದಾರೆ. ಕಳೆದ ವರ್ಷ ಚೆನ್ನೈಸ್ ಅಮಿರ್ತಾ ಸಮೂಹ ಸಂಸ್ಥೆಯಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ , ಏವಿಯೇಷನ್ ಕೋರ್ಸ್ ಮುಗಿಸಿದ ಸುಮಾರು 140ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿಉದ್ಯೋಗವಕಾಶ ಕಲ್ಪಿಸಲಾಗಿದೆ. ಸಿಂಗಾಪೂರ್ , ಮಲೇಶಿಯಾ, ಸ್ವಿಜರ್ ಲ್ಯಾಂಡ್ , ಫ್ರಾನ್ಸ್ ಸೇರಿದಂತೆ ವಿವಿಧ ದೇಶಗಳಲ್ಲಿಇಲ್ಲಿನ ವಿದ್ಯಾರ್ಥಿಗಳಿಗೆ ಉದ್ಯೋಗ ಒದಗಿಸಲಾಗಿದೆ.
ಬಾಕ್ಸ್ :
ದೇಶ-ವಿದೇಶದಲ್ಲೂಚಾಂಪಿಯನ್
ಪ್ರತಿ ವರ್ಷ ಜರ್ಮನಿಯಲ್ಲಿನಡೆಯುವ ಒಲಿಂಪಿಕ್ ಮಾದರಿಯ ಅಡುಗೆ ಸ್ಪರ್ಧೆಯಲ್ಲಿಚೆನ್ನೈಸ್ ಅಮಿರ್ತಾ ಹೋಟೆಲ್ ಮ್ಯಾನೇಜ್ ಮೆಂಟ್ ನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಅಡುಗೆ ಸ್ಪರ್ಧೆಯಲ್ಲಿಬರೋಬ್ಬರಿ 5 ಚಿನ್ನದ ಪದಕ ಪಡೆದುಕೊಂಡಿದ್ದು, ಈ ಪೈಕಿ ಬೆಂಗಳೂರು ಕ್ಯಾಂಪಸ್ ನ ವಿದ್ಯಾರ್ಥಿಗಳು 4 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಳೆದ 125 ವರ್ಷಗಳಿಂದ ಭಾರತದ ಯಾವುದೇ ಕಾಲೇಜಿನ ವಿದ್ಯಾರ್ಥಿಗಳು ತೋರದ ಸಾಧನೆಯನ್ನು ಚೆನ್ನೈಸ್ ಅಮಿರ್ತಾ ವಿದ್ಯಾರ್ಥಿಗಳು ಮಾಡಿದ್ದಾರೆ.
ಇದಲ್ಲದೇ, ಸೌತ್ ಇಂಡಿಯನ್ ಕಲ್ನರಿ ಚಾಂಪಿಯನ್ ಶಿಪ್ ನಲ್ಲೂಸಾಧನೆ ತೋರಿದ್ದಾರೆ. ದಿಲ್ಲಿಯಲ್ಲಿನಡೆಯುವ ಆಹಾರ್ , ಮುಂಬಯಿಯಲ್ಲಿನಡೆಯುವ ಇನ್ ಗ್ರೆಡೆಬಲ್ ಚೆಫ್ ಚಾಲೆಂಜ್ (ಐಸಿಸಿ)ನಲ್ಲೂಚೆನ್ನೈಸ್ ಅಮಿರ್ತಾ ವಿದ್ಯಾರ್ಥಿಗಳು ತಮ್ಮ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಬಾಕ್ಸ್ :
6 ಬಾರಿ ಟೈಮ್ಸ್ ಆಫ್ ಇಂಡಿಯಾ ಅವಾರ್ಡ್
ಶಿಕ್ಷಣ ಕ್ಷೇತ್ರದಲ್ಲಿನ ಅದ್ಭುತ ಸಾಧನೆಗೆ ಟೈಮ್ಸ್ ಆಫ್ ಇಂಡಿಯಾದಿಂದ ನೀಡುವ ಅವಾರ್ಡ್ ಗೆ ಚೆನ್ನೈಸ್ ಅಮಿರ್ತಾ ಸಮೂಹ ಸಂಸ್ಥೆ ಸತತ 6 ಬಾರಿ ಭಾಜನವಾಗಿದೆ.
ಕೋಟ್ ...
ಚೆನ್ನೈಸ್ ಅಮಿರ್ತಾ ಸಮೂಹ ಸಂಸ್ಥೆಯಲ್ಲಿಉದ್ಯಮಕ್ಷೇತ್ರಕ್ಕೆ ಅಗತ್ಯವಾದ ವಿಷಯಗಳ ಬೋಧನೆ, ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ನುರಿತ ಬೋಧಕರ ಜತೆಗೆ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿಉದ್ಯೋಗ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಗಳಿಕೆ ಮಾಡಲು ಪಾರ್ಟ್ ಟೈಮ್ ಕೆಲಸಗಳ ಮೂಲಕ ಅವಕಾಶ ಕಲ್ಪಿಸಲಾಗುತ್ತಿದೆ. ಭವಿಷ್ಯದ ಉದ್ಯಮಿಗಳನ್ನು ಸೂಕ್ತ ತರಬೇತಿ ಮೂಲಕ ಸಜ್ಜುಗೊಳಿಸುತ್ತಿದ್ದೇವೆ.
-ಸ್ವಾಮಿನಾಥನ್ , ಪ್ರಾಂಶುಪಾಲ, ಚೆನ್ನೈಸ್ ಅಮಿರ್ತಾ ಕಾಲೇಜು
***
ಫೊಟೊ :
ಚೆನ್ನೈಸ್ ಅಮಿರ್ತಾ ಗ್ರೂಪ್ ಆಫ್ ಇನ್ಸ್ ಟಿಟ್ಯೂಷನ್ ನ ಸಂಸ್ಥಾಪಕ ಭೂಮಿನಾಥನ್ ಅವರ ಪರವಾಗಿ ಚೆನ್ನೈಸ್ ಅಮಿರ್ತಾ ಕಾಲೇಜಿನ ಪ್ರಾಂಶುಪಾಲ ಸ್ವಾಮಿನಾಥನ್ ವಿಕ-ಬಿಎಂ ಎಜುಕೇಷನ್ ಎಕ್ಸಲೆನ್ಸ್ ಪ್ರಶಸ್ತಿ ಸ್ವೀಕರಿಸಿದರು.