ರಾಷ್ಟ್ರೀಯ ಹೆದ್ದಾರಿ ಬಂದ್ ಎಚ್ಚರಿಕೆ

Contributed byrathodjayakumar92@gmail.com|Vijaya Karnataka
national highway blockade farmers protest decision
ರೈತಸಂಘದ ತಾಲೂಕು ಅಧ್ಯಕ್ಷ ಗಂಟೆ ಸೋಮಶೇಖರ್ ಎಚ್ಚರಿಕೆ (ಕಿಕ್ಕರ್ )

ರಾಷ್ಟ್ರೀಯ ಹೆದ್ದಾರಿ ಬಂದ್ ಎಚ್ಚರಿಕೆ
ವಿಕ ಸುದ್ದಿಲೋಕ ಹೊಸಪೇಟೆ ( ವಿಜಯನಗರ )

‘‘ತುಂಗಭದ್ರಾ ಜಲಾಶಯ ನಿರ್ಮಾಣಕ್ಕೆ ಜಮೀನು ನೀಡಿದ ರೈತರಿಗೆ ಸರಕಾರ ನೀಡಿರುವ ಪರ್ಯಾಯ ಭೂಮಿಗೆ ಪಟ್ಟಾ ನೀಡಲು ಒತ್ತಾಯಿಸಿ ಜೂನ್ 25 ರಂದು ಟಿ.ಬಿ.ಡ್ಯಾಂ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲು ರಾಜ್ಯ ರೈತ ಸಂಘ ತೀರ್ಮಾನಿಸಿದೆ,’’ ಎಂದು ರೈತಸಂಘದ ತಾಲೂಕು ಅಧ್ಯಕ್ಷ ಗಂಟೆ ಸೋಮಶೇಖರ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ‘‘ಕಳೆದ 70 ವರ್ಷಗಳಿಂದ ಪಟ್ಟಾ ಸಿಗದ ಹಿನ್ನೆಲೆಯಲ್ಲಿಸಾಗುವಳಿ ಮಾಡುತ್ತಿದ್ದರೂ ಪಟ್ಟಾ ಇಲ್ಲದ ಕಾರಣ ರೈತರಿಗೆ ಬೆಳೆ ಪರಿಹಾರ ಹಾಗೂ ಸಾಲ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಸಂತ್ರಸ್ತ ರೈತರು ಆತ್ಮಹತ್ಯೆಯ ಹಾದಿ ಹಿಡಿಯುವ ಪರಿಸ್ಥಿತಿ ಇದ್ದು, ಮುಖ್ಯಮಂತ್ರಿಗಳ ಗಮನ ಸೆಳೆಯಲು ಈ ಹೋರಾಟ ಹಮ್ಮಿಕೊಳ್ಳಲಾಗಿದೆ,’’ ಎಂದರು.

‘‘ಜಲಾಶಯಕ್ಕಾಗಿ ನೂರಾರು ರೈತರು ತಮ್ಮ ಜಮೀನು, ಮನೆಗಳನ್ನು ತ್ಯಾಗ ಮಾಡಿದ್ದಾರೆ. ಕಳೆದ ಏಳು ದಶಕಗಳಿಂದ ಪರ್ಯಾಯ ಜಮೀನಿನಲ್ಲಿಸಾಗುವಳಿ ಮಾಡುತ್ತಿದ್ದರೂ ಸರಕಾರ ಈವರೆಗೆ ಪಟ್ಟಾ ನೀಡಿಲ್ಲ. ಇದರಿಂದಾಗಿ ರೈತರಿಗೆ ಬೆಳೆ ಪರಿಹಾರವಾಗಲಿ, ಬ್ಯಾಂಕ್ ಸಾಲವಾಗಲಿ ಸಿಗುತ್ತಿಲ್ಲ. ಹಕ್ಕುಪತ್ರ ಇಲ್ಲದ ಕಾರಣ ರೈತರು ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದು, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ,’’ ಎಂದರು.

ಪ್ರಮುಖರಾದ ಹನುಮಂತಪ್ಪ, ಆರ್ .ಹುಚ್ಚುಸಾಬ್ , ಕೆ.ಯಮುನೂರ, ಹುಸೇನ್ ಸಾಬ್ , ನಾಗರಾಜ, ಇಬ್ರಾಹಿಂ, ಅಲ್ಲಾಭಕ್ಷಿ ಇದ್ದರು.