ವಿದ್ಯುತ್ ಖಾಸಗೀಕರಣ ವಿರೋಧಿಸಿ ನಾಳೆ ಪ್ರತಿಭಟನೆ

Contributed byrangaswamyrangatm@gmail.com|Vijaya Karnataka
protest against privatization harming local farmers livelihoods
ವಿಕ ಸುದ್ದಿಲೋಕ ತುರುವೇಕೆರೆ

ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡಿ ಖಾಸಗೀಕರಣಗೊಳಿಸುವುದಕ್ಕೆ ಸರಕಾರ ಬದ್ಧವಾಗಿರುವುದನ್ನು ಖಂಡಿಸಿ ಜೂ.24ರಂದು ಬುಧವಾರ ತಾಲೂಕು ಕಚೇರಿ ಎಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದಸಂಸ ಜಿಲ್ಲಾಸಂಚಾಲಕ ದಂಡಿನಶಿವರ ಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿನಡೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಸರಕಾರ ರಾಜ್ಯದ ಜನರ ತೆರಿಗೆ ಹಣದಲ್ಲಿಸುಮಾರು 5.50 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ವಿದ್ಯುತ್ ಇಲಾಖೆಯನ್ನು ಕಟ್ಟಿದೆ. ಈ ಮೂಲಕ ಹಗಲಿರುಳು ದುಡಿಯುವ ರೈತರಿಗೆ ಹಾಗೂ ಜನರಿಗೆ ಸೇವೆ ಒದಗಿಸಲಾಗುತ್ತಿದೆ. ಈಗ ಸರಕಾರ ಮೈಸೂರು ಸೇರಿದಂತೆ 19 ಜಿಲ್ಲೆಗಳಲ್ಲಿಇರುವ ಚೆಸ್ಕಾಂ ನಿರ್ವಹಣೆಯನ್ನು ಟಾಟಾ ಪವರ್ ಲಿಮಿಟೆಡ್ ಖಾಸಗಿ ಕಂಪನಿಗೆ ನೀಡಲು ಮುಂದಾಗಿರುವುದು ತೀವ್ರ ಖಂಡನೀಯ. ಇದು ಯಾವುದೇ ಕಾರಣಕ್ಕೂ ಖಾಸಗೀಕರಣ ಆಗಬಾರದು ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಒಮ್ಮೆ ಖಾಸಗಿ ನಿರ್ವಹಣೆಗೆ ವಹಿಸಿದರೆ ರಾಜ್ಯದಲ್ಲಿಸುಮಾರು 32 ಸಾವಿರ ವಿದ್ಯುತ್ ಗುತ್ತಿಗೆದಾರರ ಕುಟುಂಬಗಳು ಬೀದಿಗೆ ಬರಲಿವೆ. ಜತೆಗೆ ಇಲಾಖೆಯಲ್ಲಿಕಾರ್ಯನಿರ್ವಹಿಸುವ ನೌಕರರು, ಅವರ ಕುಟುಂಬ ಕೂಡ ಬೀದಿಗೆ ಬರುವಲ್ಲಿಸಂಶಯವಿಲ್ಲ. ಜತೆಗೆ ನೌಕರರು ವೇತನಕ್ಕಾಗಿ ಅವರ ಬಳಿ ಕೈವೊಡ್ಡುವ ಪರಿಸ್ಥಿತಿ ನಿರ್ಮಾವಾಗುತ್ತದೆ. ಸರಕಾರ ಜನರ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಜನರ ಹಿತಾಸಕ್ತಿಗೆ ರಕ್ಷಣೆ ಒದಗಿಸಬೇಕು. ಆದರೆ ಇಂದಿನ ಸರಕಾರ ಕೋಟ್ಯಂತರ ಬೆಲೆ ಬಾಳುವ ವಿದ್ಯುತ್ ಇಲಾಖೆಯನ್ನೇ ಖಾಸಗೀಕರಣ ಮಾಡಲು ಹೊರಟಿರುವ ನಡೆ ಸರಿಯಿಲ್ಲಎಂದರು.

ರೈತರಿಗೆ ಇದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುವುದಲ್ಲದೆ, ಲಕ್ಷಾಂತರ ಕುಟುಂಬಗಳು ವಿದ್ಯುತ್ ದರ ಕಟ್ಟಲಾಗದೇ ಆತ್ಮಹತ್ಯೆ ಪ್ರಕರಣಗಳ ಅನಿವಾರ್ಯತೆ ಸೃಷ್ಟಿಯಾಗುವ ಆತಂಕವಿದೆ. ಹಾಗಾಗಿ ಸರಕಾರ 19 ಜಿಲ್ಲೆಗಳ ಚೆಸ್ಕಾಂ ನಿರ್ವಹಣೆಯನ್ನು ಖಾಸಗೀಕರಣಕ್ಕೆ ನೀಡಬಾರದು ಎಂದು ವಿರೋಧಿಸಿ ಜೂ.24ರಂದು ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ, ಮುಖಂಡರಾದ ತಾಳ್ಕೆರೆ ನಾಗರಾಜು, ಗೋವಿಂದರಾಜು, ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಫೋಟೋ ಕ್ಯಾಪ್ಷನ್ : 22ಟಿವಿಕೆ ಜು.01: ದಸಂಸ ಜಿಲ್ಲಾಸಂಚಾಲಕ ದಂಡಿನಶಿವರ ಕುಮಾರ್ ಸುದ್ದಿಗೋಷ್ಠಿಯಲ್ಲಿಮಾತನಾಡಿದರು.