ಶಬರಿಮಲೆ ಕರ್ತವ್ಯಕ್ಕೆ ವೈದ್ಯರ ನಿಯೋಜನೆ ವಿಚಾರ

Contributed byajithswarga@gmail.com|Vijaya Karnataka
appointment of doctors for shabarimala pilgrimage conflicting departments under the minister
ಒಂದೇ ಸಚಿವರ ಎರಡು ಇಲಾಖೆಗಳ

ಪತ್ರ ಸಮರಕ್ಕೆ ಸಿಐಟಿಯು ಆಕ್ಷೇಪ
ತಿರುವನಂತಪುರ: ಮುಂಬರುವ ಶಬರಿಮಲೆ ತೀರ್ಥಯಾತ್ರೆಯ ಕರ್ತವ್ಯಕ್ಕೆ ವೈದ್ಯರನ್ನು ನಿಯೋಜಿಸುವ ವಿಚಾರದಲ್ಲಿ ಕೇರಳ ಸರಕಾರದ ದೇವಸ್ವಂ ಮತ್ತು ಆರೋಗ್ಯ ಇಲಾಖೆಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದೆ.

ದೇವಸ್ವಂ ಮತ್ತು ಆರೋಗ್ಯ ಇಲಾಖೆಗಳ ಜವಾಬ್ದಾರಿಯನ್ನು ಸಚಿವ ಕೆ. ಮುರಳೀಧರನ್ ಅವರೊಬ್ಬರೇ ನಿರ್ವಹಿಸುತ್ತಿದ್ದರೂ, ಇಲಾಖೆಗಳ ನಡುವಿನ ಜಟಾಪಟಿಯನ್ನು ಕಮ್ಯುನಿಸ್ಟ್ ಟ್ರೇಡ್ ಯೂನಿಯನ್ ಭಗಿನಿ ಸಂಸ್ಥೆಯಾದ ಸಿಐಟಿಯು ತೀವ್ರವಾಗಿ ಟೀಕಿಸಿದೆ.

ತೀರ್ಥಯಾತ್ರೆಯ ಅವಧಿಯಲ್ಲಿ ಭಕ್ತರ ವೈದ್ಯಕೀಯ ಅಗತ್ಯಗಳಿಗಾಗಿ ಆರೋಗ್ಯ ಇಲಾಖೆಯ ವೈದ್ಯರನ್ನು ನಿಯೋಜಿಸುವಂತೆ ಕೋರಿ ದೇವಸ್ವಂ ಇಲಾಖೆಯು ಆರೋಗ್ಯ ಇಲಾಖೆಗೆ ಅಧಿಕೃತ ಪತ್ರ ಬರೆದಿತ್ತು. ಆದರೆ ಈ ಬೇಡಿಕೆಯನ್ನು ತಿರಸ್ಕರಿಸಿದ ಆರೋಗ್ಯ ಇಲಾಖೆಯು, ತೀವ್ರ ಸಿಬ್ಬಂದಿ ಕೊರತೆ ಮತ್ತು ಆರ್ಥಿಕ ಹೊರೆಯ ಕಾರಣ ನೀಡಿ ಶಬರಿಮಲೆ ಕರ್ತವ್ಯಕ್ಕೆ ವೈದ್ಯರನ್ನು ಒದಗಿಸಲು ಸಾಧ್ಯವಿಲ್ಲ ಎಂದು ಮರುಪತ್ರ ಬರೆದಿದೆ. ಅಲ್ಲದೆ, ಗುರುವಾಯೂರು ದೇವಸ್ವಂ ಮಾದರಿಯಲ್ಲಿದೇವಸ್ವಂ ಮಂಡಳಿಯೇ ಸ್ವಂತಂತ್ರ್ಯವಾಗಿ ವೈದ್ಯರನ್ನು ಕಂಡುಕೊಳ್ಳುವಂತೆ ಪುಕ್ಕಟೆ ಸಲಹೆ ನೀಡಿದೆ.

ಒಂದೇ ಸಚಿವರ ಅಧೀನದಲ್ಲಿರುವ ಎರಡು ಪ್ರಮುಖ ಇಲಾಖೆಗಳು ಪರಸ್ಪರ ಪತ್ರ ವ್ಯವಹಾರ ನಡೆಸುತ್ತಾ, ಜಗಳವಾಡುತ್ತಿರುವುದನ್ನು ಸಿಐಟಿಯು ತನ್ನ ಅಧಿಕೃತ ಫೇಸ್ ಬುಕ್ ಪುಟದಲ್ಲಿಲೇವಡಿ ಮಾಡಿದೆ. ಮುಂಬರುವ ತೀರ್ಥಯಾತ್ರೆಯ ಸಿದ್ಧತೆಗಳ ನಡುವೆ ಇಂತಹ ಬೇಜವಾಬ್ದಾರಿತನ ಉಂಟಾಗಿರುವುದು ಕೇರಳದಲ್ಲಿಇಲಾಖೆಗಳ ನಡುವಿನ ಸಮನ್ವಯತೆಯ ಪ್ರಸ್ತುತ ಸ್ಥಿತಿ’’ ಎಂದು ವ್ಯಂಗ್ಯವಾಡಿದೆ.

ಯಾವುದೇ ಆಂತರಿಕ ಚರ್ಚೆ ಅಥವಾ ಸಂವಹನವಿಲ್ಲದೆ ನೇರವಾಗಿ ಅಧಿಕೃತ ಪತ್ರಗಳ ಮೂಲಕವೇ ಇಲಾಖೆಗಳು ಸಂಘರ್ಷಕ್ಕೆ ಇಳಿದಿರುವುದು ಸರಕಾರದ ಆಡಳಿತ ವೈಖರಿಯ ವೈಫಲ್ಯವನ್ನು ತೋರಿಸುತ್ತದೆ ಎಂದು ಸಂಘಟನೆ ದೂರಿದೆ.

ಈ ವಿವಾದವು ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಎಚ್ಚೆತ್ತ ಸರಕಾರ, ಸರಕಾರದ ಅನುಮತಿ ಇಲ್ಲದೆ ದೇವಸ್ವಂ ಇಲಾಖೆಗೆ ಇಂತಹ ಪತ್ರ ಬರೆದಿದ್ದಕ್ಕಾಗಿ ಆರೋಗ್ಯ ಸೇವೆಗಳ ನಿರ್ದೇಶಕಿ (ಡಿಎಚ್ ಎಸ್ ) ಡಾ.ಕೆ.ಜೆ.ರೀನಾ ಅವರನ್ನು ಹುದ್ದೆಯಿಂದ ವರ್ಗಾವಣೆ ಮಾಡಿದೆ. ಭಕ್ತರ ಹಿತಾಸಕ್ತಿ ಕಾಪಾಡುವುದು ಸರಕಾರದ ಜವಾಬ್ದಾರಿಯಾಗಿದ್ದು, ಸರಕಾರದ ನೀತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ. ಮುರಳೀಧರನ್ ತಿಳಿಸಿದ್ದಾರೆ.

( 22ಪಿಎಲ್ ಹೆಲ್ತ್ )