ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾಂಗ್ರೆಸ್ಸೇ ಕಾರಣ: ಅಶೋಕ್

Contributed byshashidhar.nandikal@timesgroup.com|Vijaya Karnataka
ashok congress is responsible for students hardships
ಬೆಂಗಳೂರು: ಕಾಂಗ್ರೆಸ್ ಸಮಾವೇಶದಿಂದಲೇ ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಪರೀಕ್ಷೆ ತಪ್ಪಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್ .ಅಶೋಕ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ‘‘ಕಾಂಗ್ರೆಸ್ ನಾಯಕರಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ತಮ್ಮ ಪ್ರಚಾರವೇ ಮುಖ್ಯವಾಗಿತ್ತು,’’ ಎಂದು ಆಕ್ಷೇಪಿಸಿದರು. ಕಮಿಷನ್ ವ್ಯವಹಾರ:‘‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿಕಮಿಷನ್ ವ್ಯವಹಾರ ನಡೆಯುತ್ತಿದೆ. ಈಗ ಅದಾನಿ ಕಂಪನಿಯ ಯೋಜನೆಗಳ ವಿಚಾರದಲ್ಲೂಅನುಮಾನ ಉಂಟಾಗಿದೆ. ಬಡವರ ಹೆಸರಿನಲ್ಲಿಕೋಟ್ಯಂತರ ರೂ. ವೆಚ್ಚದ ಯೋಜನೆ ಘೋಷಿಸಿದ ಕಾಂಗ್ರೆಸ್ ಸರಕಾರ ವಾಸ್ತವದಲ್ಲಿಕಮಿಷನ್ ವಸೂಲಿಗಾಗಿಯೇ ಆಡಳಿತ ನಡೆಸುತ್ತಿದೆ. ಅದಾನಿ ಸಂಸ್ಥೆಯ ಯೋಜನೆ ಸಂಬಂಧದಲ್ಲಿಕಾಂಗ್ರೆಸ್ ನಾಯಕರು ಚುನಾವಣೆಗೂ ಮೊದಲು ಒಂದು ರೀತಿ ಮಾತನಾಡಿದ್ದರು. ಈಗ ಅವರ ವರ್ತನೆ ಬೇರೆಯಾಗಿದೆ,’’ ಎಂದು ಆಪಾದಿಸಿದರು.