ದಿನಾಂಕ : ಜೂನ್ 23
(ವೃಷಭ, ಸಿಂಹ, ಮಕರ-ಈ ರಾಶಿಯವರಿಗೆ ಚತುಗ್ರ್ರಹಿ ಯೋಗ)
ಮೇಷ : ಸಮಾಜ ಸೇವೆಯನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ನಿಮಗೆ ಅದರಿಂದ ಪ್ರಚಾರದ ಜೊತೆಗೆ ರಾಜಕೀಯ ಸೇರಲು ಆಹ್ವಾನ ದೊರೆಯಲಿದೆ. ವಿದ್ಯುತ್ ವಲಯದ ಕಾರ್ಮಿಕರು ಹೆಚ್ಚಿನ ಜಾಗ್ರತೆಯನ್ನು ವಹಿಸಿ.(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಕೆಂಪು)
ವೃಷಭ :ಬಾಕಿ ಉಳಿದಂತಹ ಕೆಲಸಗಳೆಲ್ಲವೂ ಅಂತಿಮ ಹಂತಕ್ಕೆ ಬಂದು ತಲುಪುವವು. ಹತ್ತಿರದವರೊಂದಿಗೆ ಮುಕ್ತವಾದ ಮಾತುಕತೆಯು ಭೂ ವ್ಯವಹಾರದಲ್ಲಿಲಾಭವನ್ನು ತಂದುಕೊಡಲಿದೆ. (ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ನೀಲಿ)
ಮಿಥುನ :ಕೈ ಬಿಟ್ಟಿರುವ ಯೋಜನೆಗಳನ್ನು ಮತ್ತೆ ಮುಂದುವರಿಸಲು ಒತ್ತಡ ಬರಬಹುದು. ಇನ್ನೊಬ್ಬರ ನಯವಾದ ಮಾತುಗಳಿಗೆ ಮರುಳಾಗಬೇಡಿ. ಅನಿವಾರ್ಯವಿದ್ದರೂ ಸಂಬಂಧಿಕರಲ್ಲಿಹಣದ ವ್ಯವಹಾರ ನಡೆಸಬೇಡಿ. (ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಗುಲಾಬಿ)
ಕಟಕ :ಕೆಲಸದ ಒತ್ತಡ ಕಡಿಮೆಯಾಗುವುದಲ್ಲದೇ ಲಾಭಕರವಾಗಿ ಮುಗಿಯುವುದು. ಆಪ್ತರು ನಿಮ್ಮ ನೆರವಿಗಾಗಿ ಕಾದು ಕುಳಿತುಕೊಳ್ಳಬಹುದು. ಹೂಡಿಕೆ ವಿಚಾರದಲ್ಲಿದೀರ್ಘಾಲೋಚನೆ ನಡೆಸುವುದು ಉತ್ತಮ. (ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಹಸಿರು)
ಸಿಂಹ :ತಪ್ಪು ತಿಳುವಳಿಕೆಯಿಂದಾಗಿ ಅಥವಾ ಅತಿಯಾದ ಆಸೆಯಿಂದಾಗಿ ಹಣವನ್ನು ಕಳೆದುಕೊಳ್ಳುವ ಸನ್ನಿವೇಶಗಳು ಎದುರಾಗಬಹುದು. ಬಾಲ್ಯದಲ್ಲಿನಿಮ್ಮ ಯೋಗಕ್ಷೇಮವನ್ನು ನೋಡಿದವರನ್ನು ಭೇಟಿಯಾಗುವಿರಿ. (ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಸಿಂಧೂರ ಕೆಂಪು)
ಕನ್ಯಾ :ಭವಿಷ್ಯದ ಭದ್ರತೆ ಕುರಿತು ನಿಮ್ಮ ಕಾಳಜಿ ಕುಟುಂಬದವರಿಗೆ ಸಂತೃಪ್ತಿಯನ್ನು ತಂದು ಕೊಡುವುದು. ನಿಮ್ಮ ಆಸೆ-ಆಕಾಂಕ್ಷೆಗಳಿಗೆ ಅಥವಾ ಯೋಚನೆಗಳಿಗೆ ನಿಮ್ಮವರಿಂದಲೇ ಅಡ್ಡಿ ಎದುರಾಗಬಹುದು.(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಆಲೀವ್ )
ತುಲಾ :ಮನುಷ್ಯ ಪ್ರಯತ್ನದ ಜೊತೆ ಗಣಪತಿಯ ಮೊರೆ ಹೋಗುವುದರಿಂದ ಕಾರ್ಯಸಿದ್ಧಿಯಾಗಲಿದೆ. ನಿತ್ಯದ ದಿನಚರಿಯಲ್ಲಿಬದಲಾವಣೆ ಇರುವುದಿಲ್ಲ. ಆರ್ಥಿಕತೆಗಿಂತ ಸಂಬಂಧ ಮುಖ್ಯ ಎಂಬುದನ್ನು ಮರೆಯದಿರಿ. (ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಕೇಸರಿ)
ವೃಶ್ಚಿಕ :ಕುಟುಂಬ ನಿರ್ವಹಣೆಯಲ್ಲಿವಿಪರೀತ ಖರ್ಚು ಕಾಣಿಸಲಿದೆ. ಆದರೆ ಆದಾಯಕ್ಕೆ ಕೊರತೆ ಇಲ್ಲ. ವಿದ್ಯಾಭ್ಯಾಸದಲ್ಲಿವಿದ್ಯಾರ್ಥಿಗಳು ಹೆಚ್ಚು ಶ್ರಮ ವಹಿಸಬೇಕು. ಕೆಲಸದಲ್ಲಿಬಡ್ತಿ ಅಥವಾ ಬದಲಾವಣೆಯ ಯೋಚನೆ ಬರಲಿದೆ. (ಶುಭ ಸಂಖ್ಯೆ :6, ಅದೃಷ್ಟ ಬಣ್ಣ : ಕಪ್ಪು)
ಧನು :ಇಂದು ಜರುಗಲಿರುವ ಸಂಗತಿಯೊಂದು ಗಾಢ ಪರಿಣಾಮ ಬೀರಿ ನಿಮ್ಮ ವೃತ್ತಿಗೆ ಸಂಬಂಧಿಸದಂತೆ ಉತ್ತಮ ನಿರ್ಧಾರ ಕೈಗೊಳ್ಳಲು ಸಹಾಯವಾಗಲಿದೆ. ಅನಿರೀಕ್ಷಿತ ಪ್ರಯಾಣವು ಬದುಕಿನ ಹೊಸ ದಾರಿಗೆ ಕಾರಣವಾಗಲಿದೆ.(ಶುಭ ಸಂಖ್ಯೆ 3, ಅದೃಷ್ಟ ಬಣ್ಣ :ಬಿಳಿ)
ಮಕರ :ವಿದ್ಯಾರ್ಥಿ ಜೀವನ ನಡೆಸುತ್ತಿರುವವರು ಮನರಂಜನೆಗಿಂತ ಓದಿನ ಮೇಲೆ ಆದಷ್ಟು ಗಮನಹರಿಸುವುದು ಒಳ್ಳೆಯದು. ವೈದ್ಯರಾಗಿದ್ದಲ್ಲಿನಿಮ್ಮ ಕೈ ಗುಣದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಕೇಳಲಿದ್ದೀರಿ. (ಶುಭ ಸಂಖ್ಯೆ :7, ಅದೃಷ್ಟ ಬಣ್ಣ : ಕಂದು)
ಕುಂಭ :ಮಾತಿನ ಚತುರತೆಯಿಂದ ಇತರರನ್ನು ಗೆಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ಆದರೆ ನಿಮ್ಮ ಮಾತುಗಳು ಬೇರೆಯರವರ ದು:ಖಕ್ಕೆ ಕಾರಣವಾಗದಂತೆ ಗಮನಿಸಿ. ಭೋಜನದ ಕ್ರಮ ಅಥವಾ ಸಮಯದಲ್ಲಿವ್ಯತ್ಯಾಸಗಳಾಗಬಹುದು. (ಶುಭ ಸಂಖ್ಯೆ :9, ಅದೃಷ್ಟ ಬಣ್ಣ : ಬೂದು)
ಮೀನ :ಹವ್ಯಾಸಿ ಕಲಾವಿದರಾದ ನೀವು ಇಂದು ಕತೆ-ಕವನಗಳ ಬರವಣಿಗೆಯಲ್ಲಿಹೆಚ್ಚಿನ ಸಮಯ ಕಳೆಯುವಿರಿ. ಈ ದಿನ ನಿಮ್ಮ ಪ್ರತಿಭೆಯು ಸಂಬಂಧಪಟ್ಟವರ ಗಮನ ಸೆಳೆಯಲಿದೆ. ಮಕ್ಕಳು ನಿಮಗೆ ಸಂತಸ ತರಲಿದ್ದಾರೆ. (ಶುಭ ಸಂಖ್ಯೆ 1, ಅದೃಷ್ಟ ಬಣ್ಣ : ಸುವರ್ಣ)

