ಅಂಕೇಗೌಡರ ಪುಸ್ತಕ ಸಂರಕ್ಷಿಸಿ: ಸಿಎಂ

Contributed byshashidhar.nandikal@timesgroup.com|Vijaya Karnataka
cms initiative to save 20 lakh books of anke gowda
ವಿಕ ಸುದ್ದಿಲೋಕ ಬೆಂಗಳೂರು ಪದ್ಮಶ್ರೀ ಪುರಸ್ಕೃತ ಅಂಕೇಗೌಡ ರ ಸಂಗ್ರಹದಲ್ಲಿರುವ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ರಕ್ಷಣೆಗೆ ಸೂಕ್ತ ಜಾಗ ಹುಡುಕಿ ಸುಸಜ್ಜಿತ ಕಟ್ಟಡದ ವ್ಯವಸ್ಥೆ ಮಾಡುವಂತೆ ಸಿಎಂ ಡಿ.ಕೆ.ಶಿವಕುಮಾರ್ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಸೂಚಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರೊಂದಿಗೆ ಅಂಕೇಗೌಡ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿಸೋಮವಾರ ಭೇಟಿಯಾದರು. ಈ ಸಂದರ್ಭದಲ್ಲಿಅಂಕೇಗೌಡರನ್ನು ಸನ್ಮಾನಿಸಿದ ಸಿಎಂ, ಪುಸ್ತಕ ರಕ್ಷಣೆಗೆ ಕ್ರಮದ ಭರವಸೆ ನೀಡಿದರು. ತಮ್ಮ ಬಳಿಯಿರುವ ಅಪರೂಪದ ನಾಣ್ಯಗಳು, ಅಂಚೆ ಚೀಟಿಗಳನ್ನು ಸಿಎಂ ಅವರಿಗೆ ತೋರಿಸಿದ ಅಂಕೇಗೌಡರು ಇದರ ಬಗ್ಗೆ ವಿವರಣೆ ನೀಡಿದರು. ಸಿಎಂ ಇವನ್ನೆಲ್ಲಕುತೂಹಲದಿಂದ ವೀಕ್ಷಿಸಿದರು. ‘‘ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ‘ಅಂಕೇಗೌಡ ಜ್ಞಾನ ಪ್ರತಿಷ್ಠಾನ’ದಿಂದ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ದೇಶದ ಅತಿ ದೊಡ್ಡ ವೈಯಕ್ತಿಕ ಗ್ರಂಥಾಲಯ ಇದಾಗಿದೆ,’’ ಎಂದು ಸಿಎಂ ಅವರಿಗೆ ಮಾಹಿತಿ ನೀಡಿದರು. ದಿನೇಶ್ ಗೂಳಿಗೌಡ ಪತ್ರ: ಅಂಕೇಗೌಡರಿಗೆ ಪದ್ಮಶ್ರೀ ಪುರಸ್ಕಾರ ಬಂದ ಸಂದರ್ಭದಲ್ಲಿರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಪುಸ್ತಕಗಳ ರಕ್ಷಣೆಗೆ ಜಾಗ ಒದಗಿಸಿ ಕಟ್ಟಡ ನಿರ್ಮಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಅಂದಿನ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು.