ಡಲ್ಲಾಸ್ : ಅರ್ಜೆಂಟೀನಾ ತಂಡದ ತಾರಾ ಆಟಗಾರ ಲಯೊನೆಲ್ ಮೆಸ್ಸಿ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿಸಾರ್ವಕಾಲಿಕ ಅತ್ಯಧಿಕ ಗೋಲ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಡಲ್ಲಾಸ್ ಕ್ರೀಡಾಂಗಣದಲ್ಲಿಸೋಮವಾರ ರಾತ್ರಿ ನಡೆದ ‘ಜೆ’ ಗುಂಪಿನ ಪಂದ್ಯದ ಮೊದಲಾರ್ಧದಲ್ಲಿಆಸ್ಟ್ರೀಯಾ ವಿರುದ್ಧ ಗೋಲ್ ಗಳಿಸಿದ 38 ವರ್ಷದ ಮೆಸ್ಸಿ, ಹಾಲಿ ಟೂರ್ನಿಯಲ್ಲಿನಾಲ್ಕು ಗೋಲ್ ಸೇರಿದಂತೆ ವಿಶ್ವಕಪ್ ನಲ್ಲಿಒಟ್ಟು 17 ಗೋಲ್ ಗಳಿಸಿದರು. ಇದರೊಂದಿಗೆ ಜರ್ಮನಿ ದಿಗ್ಗಜ ಆಟಗಾರ ಮಿರೊಸ್ಲಾವ್ ಕ್ಲೋಸ್ ಅವರ 16 ಗೋಲ್ ಗಳ ದಾಖಲೆಯನ್ನು ಹಿಂದಿಕ್ಕಿದರು.