ಇಂಟ್ರೊನಾಲಿಗೆಯ ರುಚಿ ತಣಿಸುವ, ಕಣ್ಮನ ಸೆಳೆಯುವ, ಸಿಹಿಯ ಸಿಂಗಾರದೊಂದಿಗೆ ಪುಟಾಣಿ ಬೆಂಟೊ ಈಗ ಕೇಕ್ ಗಳ ಲೋಕದಲ್ಲಿಸಂಚಲನ ಮೂಡಿಸಿದೆ.
ಶುಭಾ ವಿಕಾಸ್
ಅಲ್ಲಿಸಿಹಿಯ ಸಡಗರವಿದೆ. ಹಿತವಾಗಿ ಕಾಡುವ ಬಣ್ಣದ ಸೊಬಗಿದೆ. ಭಾವದಲ್ಲಿಮಿಂದೆದ್ದ ಚಿತ್ತಾರದೊಂದಿಗೆ ಅಂಗೈಯೊಳಗೆ ತೆರೆದುಕೊಳ್ಳುತ್ತದೆ ಸವಿಯ ಪುಟ್ಟ ಪ್ರಪಂಚ. ಅದಕ್ಕೆ ತನ್ನ ಗಾತ್ರ ಹೆಚ್ಚಿಸಿಕೊಳ್ಳುವ ಹಠ ಇಲ್ಲ. ದಿನಗಟ್ಟಲೆ ಇದ್ದು ಬಿಡುವ ಇರಾದೆಯೂ ಇಲ್ಲ. ಅತಿಯಾಗದ ಹಿತವಾದ ಮಿತಿಯೊಂದಿಗೆ ತನ್ನ ಅಸ್ತಿತ್ವವನ್ನು ಸಾರ್ಥಕ್ಯಗೊಳಿಸುವ ಬಯಕೆಯಲ್ಲಿಹುಟ್ಟುತ್ತದೆ ಬೆಂಟೊ ಎಂಬ ಪುಟಾಣಿ ಕೇಕ್ .
ಬೆಂಟೊ ಬೈಟ್
ಬೆಂಟೊ ಕೇಕ್ ಗಳು ಮಕ್ಕಳು ಹಾಗೂ ಯುವಜನತೆಯನ್ನು ಸೆಳೆಯುತ್ತಿದ್ದು, ಆಕರ್ಷಕ ವಿನ್ಯಾಸ, ಬಣ್ಣ, ರುಚಿಯ ಮೂಲಕ ಮೋಡಿ ಮಾಡುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿಇದರ ಕ್ರೇಜ್ ಜೋರಾಗಿದೆ. ಆನ್ ಲೈನ್ ಫುಡ್ ಆ್ಯಪ್ ಗಳಲ್ಲೂಬೆಂಟೊ ಬೆರಗು ಮೂಡಿಸಿದೆ. ಕೆಫೆ, ಬೇಕರಿ ಹಾಗೂ ಹೋಮ್ ಬೇಕರ್ ಗಳ ಮಾರುಕಟ್ಟೆ ವಿಸ್ತರಿಸಲು ಪುಟಾಣಿ ಕೇಕ್ ಗಳು ಸಾಥ್ ನೀಡಿವೆ. ಗ್ರಾಹಕರ ಅಗತ್ಯಕ್ಕೆ ಕಸ್ಟ್ಟಮೈಸ್ ಮಾಡಿಕೊಡುವ ನೂರಾರು ಸ್ಟಾರ್ಟಪ್ ಗಳು ಹುಟ್ಟಿಕೊಂಡಿವೆ. ಸಾಂಪ್ರದಾಯಿಕ ಬೇಕರಿ ಬ್ರಾಂಡ್ ಗಳು ಈಗ ತಮ್ಮ ಮೆನುವಿನಲ್ಲಿಬೆಂಟೊ ಸೆಕ್ಷನ್ ಸೇರಿಸಿಕೊಳ್ಳುತ್ತಿವೆ. ಈ ಮೂಲಕ ದೊಡ್ಡ ದೊಡ್ಡ ಕ್ರೀಮ್ ಲೇಯರ್ ಗಳ ಕೇಕ್ ಗಳನ್ನು ಮೀರಿ ಕೆಲವೇ ತುತ್ತುಗಳಿಗೆ ಸೀಮಿತವಾಗುವ ಪುಟ್ಟ ಕೇಕ್ ಗಳು ತಮ್ಮ ಸಿಹಿ ಸಾಮ್ರಾಜ್ಯ ವಿಸ್ತರಿಸಲು ಸಜ್ಜಾಗಿವೆ. ಹಾಗಂತ ದೊಡ್ಡ ಕೇಕ್ ಗಳ ಟ್ರೆಂಡ್ ಮುಗೀತಾ? ಇಲ್ಲ, ಅವುಗಳ ಉದ್ದೇಶವೇ ಬೇರೆ. ದೊಡ್ಡ ಗುಂಪು, ಸಮಾರಂಭದ ಅಗತ್ಯವನ್ನು ಇವು ಪೂರೈಸುತ್ತವೆ.
ದೊಡ್ಡ ಭಾವದ ಪುಟ್ಟ ಪ್ಯಾಕ್
ಬೆಂಟೊ ಕೇಕ್ ಅನ್ನು ಲಂಚ್ ಬಾP್ಸ… ಕೇಕ್ ಎಂದೂ ಕರೆಯುತ್ತಾರೆ. ಬೆಂಟೊ ಎಂಬುದು ಮೂಲತಃ ಜಪಾನಿ ಪದ. ಜಪಾನ್ ನಲ್ಲಿಒಬ್ಬರಿಗೆ ಅಥವಾ ಸಣ್ಣ ಬಾಕ್ಸ್ ನಲ್ಲಿಪ್ಯಾಕ್ ಮಾಡಿದ ಊಟವನ್ನು ಬೆಂಟೊ ಎನ್ನಲಾಗುತ್ತದೆ. ಇದೇ ಪರಿಕಲ್ಪನೆ ಬಳಸಿ ಪುಟ್ಟ ಕೇಕ್ ತಯಾರಿಸಲು ಆರಂಭಿಸಿದ್ದರಿಂದ ಇದಕ್ಕೆ ಬೆಂಟೊ ಕೇಕ್ ಎಂಬ ಹೆಸರು ಬಂತು ಎಂಬುದು ಇದರ ಇತಿಹಾಸ. ಇವು ಕೇವಲ 2ರಿಂದ 4 ಇಂಚು ವ್ಯಾಸ ಹೊಂದಿರುತ್ತವೆ ಹಾಗೂ ಸುಮಾರು 250-300 ಗ್ರಾಂ ತೂಕವಿರುತ್ತವೆ. ಹೀಗಾಗಿ ಇದರ ನೋಟ, ಪ್ಯಾಕೇಜಿಂಗ್ ಆಕರ್ಷಕ. ಒಂದು ಖುಷಿಯನ್ನು ಇಬ್ಬರೇ ಹಂಚಿಕೊಳ್ಳಲು ಸಿಹಿಯಾದ ಮಾಧ್ಯಮವಿದು. ಇಬ್ಬರು ಸೇರಿ ಆಚರಿಸುವ ಸಣ್ಣ ಬತ್ ರ್ ಡೇ ಅಥವಾ ಆ್ಯನಿವರ್ಸರಿಗಳಿಗೆ ಇದು ಬೆಸ್ವ್ . ದೊಡ್ಡ ಕೇಕ್ ತಂದು ಅದು ವ್ಯರ್ಥವಾಗಬಾರದು ಅಂದುಕೊಳ್ಳುವವರಿಗೆ ಇದು ಸೂಕ್ತ ಆಯ್ಕೆ. ಉಡುಗೊರೆಗಾಗಿ ಹೂವಿನ ಬೊಕ್ಕೆ ಕೊಡುವ ಬದಲು ಬೆಂಟೊ ಬಾP್ಸ… ಕೊಡುವ ಟ್ರೆಂಡ್ ಬೆಳೆಯುತ್ತಿದೆ.
ರುಚಿ ಮತ್ತು ಬಣ್ಣದ ಮೆರುಗು
ಬೆಂಟೊ ಕೇಕ್ ಗಳಲ್ಲಿಹೆಚ್ಚಾಗಿ ಪಾಸ್ಟೆಲ್ ಬಣ್ಣಗಳನ್ನು ಬಳಸಲಾಗುತ್ತದೆ. ಇವು ಕಣ್ಣಿಗೆ ಹಿತ ಮತ್ತು ಕ್ಲಾಸಿ ಲುಕ್ ನೀಡುತ್ತವೆ. ಬೇಬಿ ಪಿಂಕ್ , ಸಾ´್ಟ… ಲ್ಯಾವೆಂಡರ್ , ಮಿಂಟ್ ಗ್ರೀನ್ , ಪೌಡರ್ ಬ್ಲೂಮತ್ತು ಪೀಚ್ ಬಣ್ಣಗಳು ಪ್ರಮುಖವಾಗಿ ಕಾಣುತ್ತವೆ. ಇದರ ಮೇಲೆ ಮಿನಿಮಲಿಸ್ಟಿಕ್ ವಿನ್ಯಾಸದ ಸೊಗಸು ಕಾಣುತ್ತದೆ. ಸಣ್ಣದಾಗಿ ಏನಾದರೂ ಬರೆಯಲು ಅಥವಾ ಚಿಕ್ಕದಾದ ಕಾರ್ಟೂನ್ , ಹೂವಿನ ಚಿತ್ರ ಬಿಡಿಸಲು ಮಾತ್ರ ಇದರಲ್ಲಿಜಾಗವಿರುತ್ತದೆ. ಸಣ್ಣ ಕರಡಿ ಮುಖ, ಪುಟ್ಟ ಹಾರ್ಟ್ ಸಿಂಬಲ್ಸ್ , ಸೂರ್ಯಕಾಂತಿ ಹೂವು ಅಥವಾ ಕ್ಲೌಡ್ ಡಿಸೈನ್ ಗಳು ಗಮನ ಸೆಳೆದಿವೆ. ಕ್ಲಾಸಿಕ್ ಬೆಲ್ಜಿಯನ್ ಚಾಕೊಲೇಟ್ , ಸಾಲ್ಟೆಡ್ ಕ್ಯಾರಮೆಲ್ , ರೆಡ್ ವೆಲ್ವೆಟ್ ಹಾಗೂ ಹವಾಮಾನಕ್ಕೆ ತಕ್ಕಂತೆ ಬ್ಲೂಬೆರ್ರಿ, ಸ್ಟ್ರಾಬೆರ್ರಿ ಮತ್ತು ಲಿಚಿಯಂತಹ ಫ್ರೂಟಿ ಫ್ಲೇವರ್ ಗಳ ಬೆಂಟೊ ಕೇಕ್ ಗಳಿಗೆ ಬೇಡಿಕೆ ಇದೆ.
ಬಾಕ್ಸ್
ತಾಳ್ಮೆಯ ಕಲೆಯಿದು
ದೊಡ್ಡ ಕೇಕ್ ಮಾಡುವುದಕ್ಕಿಂತ ಬೆಂಟೊ ಕೇಕ್ ಮಾಡುವುದು ಬೇಕರ್ಸ್ ಗೆ ಸವಾಲು. ಕೇವಲ 2-3 ಇಂಚಿನ ಪುಟ್ಟ ಜಾಗದಲ್ಲಿಐಸಿಂಗ್ ಮಾಡುವುದು, ಅದರ ಮೇಲೆ ಅಕ್ಷರಗಳನ್ನು ಬರೆಯುವುದು ಸೂಕ್ಷ್ಮ ಹಾಗೂ ತಾಳ್ಮೆಯ ಕೆಲಸ. ದೊಡ್ಡ ಕೇಕ್ ಗೆ ಬಳಸುವಷ್ಟೇ ಸಮಯ ಮತ್ತು ಶ್ರಮ ಇದರ ತಯಾರಿಕೆಗೂ ಬೇಕಾಗುತ್ತದೆ ಎಂಬುದು ಹೋಮ್ ಬೇಕರ್ ಸಾರಿಕಾ ಗೋಡ್ಕಿಂಡಿ ಅಭಿಪ್ರಾಯ.
ಕೋಟ್
ದೊಡ್ಡ ಕೇಕ್ ತಂದು ಹೆಚ್ಚು ಸೇವಿಸುವ ಅಥವಾ ಮರುದಿನ ಇಟ್ಟು ತಿನ್ನುವ, ಬಿಸಾಡಿ ವ್ಯರ್ಥ ಮಾಡುವುದಕ್ಕಿಂತ ಸಣ್ಣ ಸಿಹಿಯೊಂದಿಗೆ ಸಂಭ್ರಮ ಮುಗಿಸುವವರ ಆರೋಗ್ಯ ಕಾಳಜಿ, ಆಹಾರ ವ್ಯರ್ಥ ಮಾಡಬಾರದು ಎಂಬ ಮನೋಭಾವ ಬೆಂಟೊ ಕೇಕ್ ಗ್ರಾಹಕರ ಹಿಂದಿದೆ. ಹಲವು ರುಚಿಗಳನ್ನು ಒಂದೇ ಸಲ ಟೇಸ್ಟ್ ಮಾಡಲು ಬೆಂಟೊ ಪೂರಕ. ಕೇಕ್ ಕಾರ್ನಿವಾಲ್ ಗಳಲ್ಲಿಇಂತಹ ಕೇಕ್ ಗಳು ಸೆಳೆಯುತ್ತವೆ.