ವಿಭಿನ್ನ ಲುಕ್ ನೀಡುವ ಹಾಗೂ ಆರಾಮ ಎನಿಸುವ ಕೇಶ ವಿನ್ಯಾಸ ಅಂದರೆ ಹಾಫ್ ಅಪ್ ಹಾಫ್ ಡೌನ್ ಸ್ಟೈಲ್ .
ಇದು ಉದ್ದ ಕೂದಲಿನ ಸೌಂದರ್ಯವನ್ನು ಎತ್ತಿ ತೋರಿಸುತ್ತದೆ. ಮುಖದ ಮೇಲೆ ಕೂದಲು ಬಾರದಂತೆ ಇಟ್ಟುಕೊಳ್ಳುವುದರಿಂದ ದಿನವಿಡೀ ತಾಜಾತನವನ್ನು ನೀಡುತ್ತದೆ. ಈ ಸ್ಟೈಲ್ ಪಡೆಯಲು ಅನುಸರಿಸಬೇಕಾದ ವಿಧಾನ ಇಲ್ಲಿದೆ. ಮೊದಲು ಕೂದಲನ್ನು ಚೆನ್ನಾಗಿ ಬಾಚಿ. ತಲೆಯ ಮುಂಭಾಗ ಮತ್ತು ಎರಡೂ ಬದಿಗಳಿಂದ ಸ್ವಲ್ಪ ಕೂದಲನ್ನು ತೆಗೆದುಕೊಳ್ಳಿ. ತೆಗೆದುಕೊಂಡ ಕೂದಲನ್ನು ಹಿಂಭಾಗದಲ್ಲಿಸೇರಿಸಿ. ಸಣ್ಣ ರಬ್ಬರ್ ಬ್ಯಾಂಡ್ ಅಥವಾ ಅಲಂಕಾರಿಕ ಕ್ಲಿಪ್ ಬಳಸಿ ಭದ್ರಪಡಿಸಿ. ಉಳಿದ ಕೂದಲನ್ನು ಸ್ವಾಭಾವಿಕವಾಗಿ ಕೆಳಗೆ ಬಿಡಿ.ಇನ್ನಷ್ಟು ಆಕರ್ಷಕವಾಗಿ ಕಾಣಲು ಕೂದಲಿನ ತುದಿಗಳಿಗೆ ಸಣ್ಣ ಅಲೆಗಳನ್ನು ಮಾಡಬಹುದು. ಬೇಕಿದ್ದರೆ ಮಲ್ಲಿಗೆ ಹೂವು, ಗುಲಾಬಿ ಅಥವಾ ಸುಂದರ ಹೇರ್ ಕ್ಲಿಪ್ ಗಳನ್ನು ಅಲಂಕರಿಸಿ. ಕೊನೆಯಲ್ಲಿಸ್ವಲ್ಪ ಹೇರ್ ಸ್ಪ್ರೇ ಬಳಸಿದರೆ ಕೇಶ ವಿನ್ಯಾಸ ಹೆಚ್ಚು ಸಮಯ ಅಚ್ಚುಕಟ್ಟಾಗಿ ಉಳಿಯುತ್ತದೆ. ಈ ಕೇಶ ವಿನ್ಯಾಸವು ಸೀರೆ, ಚೂಡಿದಾರ್ ಹಾಗೂ ಪಾಶ್ಚಾತ್ಯ ಉಡುಪುಗಳೊಂದಿಗೆ ಕೂಡ ಸುಂದರವಾಗಿ ಕಾಣುತ್ತದೆ. ಸಾಮಾನ್ಯ ಔಟಿಂಗ್ , ಫೋಟೋಶೂಟ್ ಮತ್ತು ವಿಡಿಯೋ ಕಂಟೆಂಟ್ ಗಳಿಗೆ ಇದು ಅತ್ಯುತ್ತಮ ಆಯ್ಕೆ.