ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಒಂದೇ ದಿನ 15 ಲಕ್ಷ ಸ್ಥಳೀಯ ಸಸಿ ನೆಡಲು ಗುರುತಿಸಿರುವ 243 ಎಕರೆ ಪ್ರದೇಶವನ್ನು 49 ವಲಯಗಳು ಹಾಗೂ 314 ಸಸಿ ನೆಡುವ ಸ್ಥಳಗಳಾಗಿ ವಿಭಜಿಸಿದ್ದು, ಪ್ರತಿ ವಲಯಕ್ಕೂ ಓರ್ವ ವಲಯ ಕಮಾಂಡರ್ ಉಪಸ್ಥಿತರಿರಲಿದ್ದಾರೆ ಎಂದು ಬಿಡಿಎ ಆಯುಕ್ತ ಪಿ. ಮಣಿವಣ್ಣನ್ ತಿಳಿಸಿದರು.ಜಿಬಿಎ ಮುಖ್ಯ ಕಚೇರಿಯಲ್ಲಿಸೋಮವಾರ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ದಿನ ಸುಗಮ ಸಂಚಾರಕ್ಕಾಗಿ ಮೆಟ್ರೊ ರೈಲುಗಳ ಸಂಚಾರ ಹೆಚ್ಚಿಸಲಾಗುವುದು. ಜತೆಗೆ, ಮೆಟ್ರೊ ನಿಲ್ದಾಣಗಳಿಂದ ಸಸಿ ನೆಡುವ ಸ್ಥಳಗಳವರೆಗೆ ಉಚಿತ ಬಸ್ ವ್ಯವಸ್ಥೆ ಒದಗಿಸಲಾಗುತ್ತದೆ. ಅಲ್ಲದೆ, ಆಹಾರ, ಪೋರ್ಟಬಲ್ ಶೌಚಾಲಯಗಳೂ ಸೇರಿದಂತೆ ಎಲ್ಲಾಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ. ಆರೋಗ್ಯ ತುರ್ತು ಪರಿಸ್ಥಿತಿಗಳಿಗಾಗಿ ವೈದ್ಯರು ಹಾಗೂ ನರ್ಸ್ ಗಳು ಸ್ಥಳದಲ್ಲಿಹಾಜರಿರಲಿದ್ದಾರೆ. ಸಮರ್ಪಕ ಬೆಳಕು, ವಾಹನ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಮ್ಯಾರಥಾನ್ ಕಾರ್ಯಕ್ರಮಕ್ಕೆ ಆಹ್ವಾನ:
ನಾಡಪ್ರಭು ಕೆಂಪೇಗೌಡರ ದಿನಾಚರಣೆ ಅಂಗವಾಗಿ ಜೂ. 27ರ ಬೆಳಗ್ಗೆ 6ಕ್ಕೆ 10ಕೆ ಹಾಗೂ 5ಕೆ ಮ್ಯಾರಥಾನ್ ಆಯೋಜಿಸಲಾಗಿದೆ. ಇದು ಎಂಎಆರ್ ನಿಂದ ಚಲ್ಲಘಟ್ಟ ಮೆಟ್ರೊ ನಿಲ್ದಾಣದವರೆಗೆ ನಡೆಯಲಿದೆ. ಇದರಲ್ಲಿಭಾಗವಹಿಸುವವರು ಈ hಠಿಠಿps://ಞysaಞay.ಜ್ಞಿ/ಛಿ/kಛಿಞpಛಿಜಟಡಿda್ಟ್ಠ್ಞ ಲಿಂಕ್ ಬಳಸಿಕೊಂಡು ನೋಂದಣಿ ಮಾಡಿಕೊಳ್ಳಬಹುದು.
ಸಸಿ ನೆಡುವ ಅಭಿಯಾನದಲ್ಲಿಭಾಗವಹಿಸಲಿಚ್ಛಿಸುವವರು ಘ್ಕಿhಠಿಠಿps://ಜ್ಟಛಿಛ್ಞಿಚಿಛ್ಞಿಜa್ಝ್ಠ್ಟ್ಠಚಿyಚಿda.ಜ್ಞಿ ಭೇಟಿ ನೀಡಬಹುದು. ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಹಾಯಕ್ಕಾಗಿ ಸಹಾಯವಾಣಿ 9483166622 ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದರು.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ‘‘ಹಸಿರು ಬೆಂಗಳೂರಿನ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಸಸಿ ನೆಡುವ ಈ ಬೃಹತ್ ಅಭಿಯಾನದಲ್ಲಿನಾಗರಿಕರು ಸಕ್ರಿಯವಾಗಿ ಭಾಗವಹಿಸಬೇಕು,’’ ಎಂದು ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ಅಗತ್ಯವಿರುವ ಸಸಿಗಳು, ಉಪಕರಣಗಳು, ಮಾರ್ಗಸೂಚಿ ಫಲಕಗಳು ಹಾಗೂ ಇತರೆ ಸಾಮಗ್ರಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಪ್ರತಿ ಹಂತದಲ್ಲೂಸಮರ್ಪಕ ಮೇಲ್ವಿಚಾರಣೆ ಹಾಗೂ ಪರಿಣಾಮಕಾರಿ ಸಮನ್ವಯ ಇರಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಭಾಗವಹಿಸುವವರಿಗೆ ಪ್ರಮಾಣಪತ್ರ ಮತ್ತು ಗೌರವ:
ಕಾರ್ಯಕ್ರಮದಲ್ಲಿಭಾಗವಹಿಸುವ ಪ್ರತಿಯೊಬ್ಬರಿಗೂ ಅಧಿಕೃತ ಡಿಜಿಟಲ್ ಪ್ರಮಾಣಪತ್ರ ನೀಡಲಾಗುವುದು. ಜತೆಗೆ ಹಸಿರು ಬೆಂಗಳೂರು ರೂವಾರಿಗಳು ಎಂಬ ಗೌರವ ಸಿಗಲಿದೆ. ಅತ್ಯುತ್ತಮ ಕೊಡುಗೆ ನೀಡುವವರಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ನಗರ ಪಾಲಿಕೆಗಳ ಆಯುಕ್ತ ರಮೇಶ್ ಡಿ.ಎಸ್ ., ಪೊಮ್ಮಲ ಸುನೀಲ್ ಕುಮಾರ್ , ಕೆ.ಎನ್ . ರಮೇಶ್ , ಡಾ. ರಾಜೇಂದ್ರ ಕೆ.ವಿ., ಬೆಂ.ಘ.ನಿ.ನಿ.ದ ಸಿಇಒ ಕರೀಗೌಡ, ವಿಶೇಷ ಆಯುಕ್ತ ವೆಂಕಟಾಚಲಪತಿ, ನಗರ ಪಾಲಿಕೆಗಳ ಜಂಟಿ ಆಯುಕ್ತರು, ಬಿಡಿಎ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.