ಕೊಥಿಂಬೀರ್ ವಡಿ

Contributed bybabitha.salian@timesgroup.com|Vijaya Karnataka
easy recipe for making coriander wadi at home
ಕೊಥಿಂಬೀರ್ ವಡಿ

ಮಹಾರಾಷ್ಟ್ರದ ಜನಪ್ರಿಯ ಮತ್ತು ಸಾಂಪ್ರದಾಯಿಕ ತಿನಿಸು ಕೊಥಿಂಬೀರ್ ವಡಿಯು ತಾಜಾ ಕೊತ್ತಂಬರಿ ಸೊಪ್ಪು ಮುಖ್ಯ ಸಾಮಗ್ರಿಯಾಗಿ ಸುಲಭ ಮತ್ತು ಕಡಿಮೆ ಅವಧಿಯಲ್ಲಿತಯಾರಾಗುವ ಆರೋಗ್ಯಕರ ಸ್ನ್ಯಾಕ್ಸ್ . ಇದು ಸಂಜೆಯ ಕಾಫಿ, ಚಹಾಕ್ಕೆ ಒಳ್ಳೆಯ ಜೋಡಿ.
ಸಾಮಗ್ರಿ: ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು-2 ಕಪ್ , ಕಡಲೆ ಹಿಟ್ಟು-1 ಕಪ್ , ಅಕ್ಕಿ ಹಿಟ್ಟು-ಕಾಲು ಕಪ್ , ಬಿಳಿ ಎಳ್ಳು-2 ಚಮಚ, ಅರಿಶಿಣ ಪುಡಿ-ಕಾಲು ಚಮಚ, ಇಂಗು-ಕಾಲು ಚಮಚ, ಧನಿಯಾ ಪುಡಿ-ಅರ್ಧ ಚಮಚ, ಜೀರಿಗೆ ಪುಡಿ-ಅರ್ಧ ಚಮಚ, ಅಚ್ಚ ಮೆಣಸಿನ ಪುಡಿ-1 ಚಮಚ, ಶುಂಠಿ ಮತ್ತು ಹಸಿ ಮೆಣಸಿನಕಾಯಿ ಪೇಸ್ಟ್ -1 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಮಿಕ್ಸಿಂಗ್ ಬೌಲ್ ಗೆ ಮೊದಲಿಗೆ ಕೊತ್ತಂಬರಿ ಸೊಪ್ಪು, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಎಳ್ಳು ಸೇರಿಸಿ ಮಿಶ್ರ ಮಾಡಿ ನಂತರ ಉಳಿದ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಹೊಂದಿಸಿ. ಸೊಪ್ಪಿನಲ್ಲೇ ತೇವಾಂಶ ಇರುವುದರಿಂದ ಅಗತ್ಯಕ್ಕೆ ತಕ್ಕಂತೆ ಎರಡ್ಮೂರು ಚಮಚ ನೀರು ಹಾಕಿ ಗಟ್ಟಿಯಾಗಿ ಹಿಟ್ಟು ಕಲಸಿ. ಜಿಡ್ಡು ಸವರಿದ ತಟ್ಟೆಯಲ್ಲಿಈ ಹಿಟ್ಟನ್ನು ಸಮವಾಗಿ ಹರಡಿ ಹಬೆಯಲ್ಲಿ10ರಿಂದ 15 ನಿಮಿಷ ಬೇಯಿಸಿ. ಇದು ತಣಿದ ನಂತರ ಸಣ್ಣ ಸಣ್ಣ ಬಿಲ್ಲೆಗಳನ್ನು ಕತ್ತರಿಸಿ. ಬಳಿಕ ತವಾದಲ್ಲಿಸ್ವಲ್ಪ ಎಣ್ಣೆ ಹಾಕಿ ಈ ಬಿಲ್ಲೆಗಳನ್ನು ಶಾಲೋ ಫ್ರೈ ಮಾಡಿದರೆ ತಿನ್ನಲು ಮೃದು ಮತ್ತು ಗರಿಗರಿ ಕೊಥಿಂಬೀರ್ ವಡಿ ರೆಡಿ.