ಮಳೆ- ಪುಟ-2

Contributed byshubha.hegde@timesgroup.com|Vijaya Karnataka
monsoon fashion the rise of fusion style
ಮಳೆಗಾಲದ ಫ್ಯೂಷನ್ ಫ್ಯಾಷನ್

ಶ್ರೇಯಾ ಮಿಂಚಿನಡ್ಕ
ಇಂಟ್ರೊ: ಮಳೆಗಾಲದ ಬದಲಾಗುವ ಹವಾಮಾನಕ್ಕೆ ಟ್ರೆಂಡಿ ಸ್ಟೈಲ್ ಗಾಗಿ ಫ್ಯೂಷನ್ ಫ್ಯಾಷನ್ ಗಮನ ಸೆಳೆಯಲಿದೆ.

ಸ್ಲಗ್ : ಮಾನ್ಸೂನ್ ಮೆರುಗು

ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಗಳ ಸಂಯೋಜನೆ ಫ್ಯೂಷನ್ ಫ್ಯಾಷನ್ ಈ ವರ್ಷದ ಮಳೆಗಾಲದ ಪ್ರಮುಖ ಟ್ರೆಂಡ್ ಆಗಿ ಹೊರಹೊಮ್ಮಿದೆ.

ಭಾರತೀಯ ಸಾಂಪ್ರದಾಯಿಕ ಉಡುಗೆಗಳು ಮತ್ತು ಪಾಶ್ಚಿಮಾತ್ಯ ಉಡುಗೆಗಳನ್ನು ಒಟ್ಟಿಗೆ ಬೆರೆಸಿ ಒಂದು ಹೊಸ ಮತ್ತು ಆಕರ್ಷಕ ಶೈಲಿಯಲ್ಲಿಧರಿಸುವ ವಿಧಾನ ಕೇವಲ ಉಡುಪನ್ನು ವೈಭವೀಕರಿಸುವುದಿಲ್ಲ. ಎರಡೂ ಸಂಸ್ಕೃತಿಗಳ ಸಮ್ಮಿಶ್ರಣವಾಗಿಯೂ ಗಮನ ಸೆಳೆಯುತ್ತದೆ.

ಬಣ್ಣಗಳ ಆಯ್ಕೆ

ಮಳೆಗಾಲದಲ್ಲಿಆಯ್ದುಕೊಳ್ಳುವ ಬಟ್ಟೆಯ ಬಣ್ಣ ಕೂಡ ಮುಖ್ಯ. ಕಪ್ಪು ಅಥವಾ ಬಿಳಿ ಬಟ್ಟೆಗಳಿಗಿಂತ ಈ ಸೀಸನ್ ನಲ್ಲಿನಿಯಾನ್ , ಆಲಿವ್ ಗ್ರೀನ್ , ಸಾಸಿವೆ ಹಳದಿ ಮತ್ತು ರಾಯಲ್ ಬ್ಲೂನಂತಹ ಗಾಢ ಬಣ್ಣಗಳ ಇಂಡೋ-ವೆಸ್ಟರ್ನ್ ಉಡುಗೆಗಳು ಮಳೆಯ ವಾತಾವರಣದಲ್ಲೂನಿಮ್ಮನ್ನು ಬ್ರೈಟ್ ಆಗಿ ಕಾಣಿಸುವಂತೆ ಮಾಡುತ್ತವೆ.

ಆಕರ್ಷಕ ದಿರಸು

ಲೆಹೆಂಗಾ ಜೊತೆಗೆ ಟೀ-ಶರ್ಟ್ ಧರಿಸುವುದು, ಟೀ ಶರ್ಟ್ ಮೇಲಿನಿಂದ ಸೀರೆ ಧರಿಸುವುದು ಇತ್ತೀಚಿನ ದಿನಗಳಲ್ಲಿಹೆಚ್ಚು ಗಮನ ಸೆಳೆದಿರುವ ಫ್ಯೂಷನ್ ಸ್ಟೈಲ್ . ಸೀರೆಯನ್ನು ಗೌನ್ ತರಹ ಧರಿಸುವುದು ಅಥವಾ ಸೀರೆಗೆ ಬ್ಲೌಸ್ ಬದಲು ಕ್ರಾಪ್ ಟಾಪ್ ಬಳಸಿದರೆ ಗ್ಲಾಮ್ ಲುಕ್ ಸಿಗುತ್ತದೆ. ಸಾಂಪ್ರದಾಯಿಕ ಅನಾರ್ಕಲಿ ಕುರ್ತಾದ ಮೇಲೆ ಜಪಾನಿ ಶೈಲಿಯ ಸಡಿಲವಾದ ಕಿಮೋನೋ ಜಾಕೆಟ್ ಧರಿಸುವುದು ಈಗಿನ ಹೊಸ ಕ್ರೇಜ್ . ಇದು ಕ್ಲಾಸಿಕ್ ಲುಕ್ ನೀಡುತ್ತದೆ. ಸಾಂಪ್ರದಾಯಿಕ ಧೋತಿ ಶೈಲಿಯ ಪ್ಯಾಂಟ್ ಗಳಿಗೆ ವೆಸ್ಟರ್ನ್ ಕ್ರಾಪ್ ಟಾಪ್ ಅಥವಾ ಶಾರ್ಟ್ ಶರ್ಟ್ ಮ್ಯಾಚ್ ಮಾಡುವುದು ಕಾಲೇಜು ಯುವತಿಯರ ನೆಚ್ಚಿನ ಆಯ್ಕೆ. ಕಂಫರ್ಟ್ ಬಯಸುವವರಿಗೆ ಮಲ್ಟಿ ಪಾಕೆಟ್ ಇರುವ ಕಾರ್ಗೋ ಪ್ಯಾಂಟ್ ಗಳ ಜೊತೆ ಬ್ಲಾಕ್ ಪ್ರಿಂಟ್ ನ ಶಾರ್ಟ್ ಕಾಟನ್ ಕುರ್ತಾಗಳು ಸೂಪರ್ ಕಾಂಬಿನೇಷನ್ .

ಬಾಕ್ಸ್

ಹೀಗೆ ಮಾಡಿ

ಸಾಂಪ್ರದಾಯಿಕ ಉಡುಗೆಗಳಿಗೆ ಕೊಲ್ಹಾಪುರಿ ಚಪ್ಪಲಿ ಧರಿಸುವ ಬದಲು, ಮಳೆಗಾಲದ ಸ್ನೇಹಿಯಾಗಿರುವ ಸ್ಟೈಲಿಶ್ ರಬ್ಬರ್ ಸ್ನೀಕರ್ಸ್ ಅಥವಾ ಜಿಲ್ಲಿಶೂಸ್ ಧರಿಸಿ ಫ್ಯೂಷನ್ ಲುಕ್ ಕಂಪ್ಲೀಟ್ ಮಾಡಿ.

ಬೆಳ್ಳಿ ಅಥವಾ ಬಂಗಾರದ ಆಭರಣಗಳು ಮಳೆಗೆ ಹಾಳಾಗಬಹುದು. ಆದ್ದರಿಂದ ಆಕ್ಸಿಡೈÓ್ಡ… ಸಿಲ್ವರ್ ಅಥವಾ ಬೋಹೋ ಶೈಲಿಯ ಜಂಕ್ ಜುವೆಲ್ಲರಿಗಳನ್ನು ವೆಸ್ಟರ್ನ್ ಟಾಪ್ ಹಾಗೂ ಕುರ್ತಿಗಳ ಮೇಲೆ ಧರಿಸಿ.

ಮಳೆಗಾಲದಲ್ಲಿಬೇಗ ಒಣಗುವ ಜಾರ್ಜೆಟ್ , ರೇಯಾನ್ , ಪಾಲಿಕಾಟನ್ ಅಥವಾ ಕ್ರೇಪ್ ಫ್ಯಾಬ್ರಿಕ್ ಗಳ ಫ್ಯೂಷನ್ ಉಡುಗೆಗಳನ್ನು ಆಯ್ದುಕೊಳ್ಳಿ. ಅಪ್ಪಿತಪ್ಪಿಯೂ ಹೆವಿ ಸಿಲ್ಕ… ಅಥವಾ ದಪ್ಪನೆಯ ಬಟ್ಟೆ ಬೇಡ.